Author: Shankari Sharma

5

ಅವಿಸ್ಮರಣೀಯ ಅಮೆರಿಕ-ಎಳೆ 15

Share Button

(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು…)ಬದುಕಿನ ಬಲೆಯೊಳಗೆ… ಅಮೆರಿಕದಲ್ಲಿ ನಾನು ಗಮನಿಸಿದಂತೆ ವಾರಾಂತ್ಯದ ಎರಡು ದಿನಗಳ ರಜೆಯನ್ನು ಯಾರೂ ಮನೆಯೊಳಗೆ ಕಳೆಯುವುದಿಲ್ಲ. ಶುಕ್ರವಾರದಂದು ಸಂಜೆಯೇ ಕುಟುಂಬ ಸಮೇತ ಮನೆಯಿಂದ ಹೊರಟು ಬಿಡುತ್ತಾರೆ. ಪ್ರತಿಯೊಬ್ಬರೂ ಸ್ವಂತ ವಾಹನಗಳನ್ನು ಹೊಂದಿರುವುದರಿಂದ ಅಕ್ಕಪಕ್ಕದ ಪ್ರವಾಸೀ ತಾಣಗಳಿಗೆ,  ಸಮುದ್ರ ತೀರಗಳಿಗೆ, ಬೆಟ್ಟ ಗುಡ್ಡಗಳನ್ನು ಏರಲು,...

12

ಅವಿಸ್ಮರಣೀಯ ಅಮೆರಿಕ-ಎಳೆ 14

Share Button

ನಾ ನಿನ್ನ ಮರೆಯಲಾರೆ…! ನಾಲ್ಕು ದಿನಗಳ ನಮ್ಮ ಸಿನಿಮಾ ನಗರಿಯ ಸುತ್ತಾಟದ  ಗಮ್ಮತ್ತನ್ನು ಮೆಲುಕು ಹಾಕುತ್ತಾ  ಇದ್ದಂತೆಯೇ ಪುಟ್ಟ ಮಗುವಿನ ಒಡನಾಟದಲ್ಲಿ ದಿನಗಳು ಸರಾಗವಾಗಿ ಓಡುತ್ತಿದ್ದವು. ಅದಾಗಲೇ ಚಳಿಗಾಲ ಮುಗಿದು ವಸಂತಕಾಲ ಪ್ರಾರಂಭವಾಯ್ತು. ನಾವಿದ್ದ ಬೇ ಏರಿಯಾವು, ಕ್ಯಾಲಿಫೋರ್ನಿಯಾ ರಾಜ್ಯದಲ್ಲೇ, ಸಮಶೀತೋಷ್ಣ ಪ್ರದೇಶದ ಜನರಿಗೆ ವಾಸಿಸಲು ಅತ್ಯಂತ...

7

ಅವಿಸ್ಮರಣೀಯ ಅಮೆರಿಕ-ಎಳೆ 13

Share Button

ಹಾಲಿವುಡ್ ನಲ್ಲಿ ಕೊನೆ ದಿನ… ಅದಾಗಲೇ ಸಂಜೆ ನಾಲ್ಕು ಗಂಟೆ.. ನಮ್ಮಲ್ಲಿಯ ಜಾತ್ರೆಯಲ್ಲಿ ಇರುವಂತೆ ಕಿಕ್ಕಿರಿದ ಜನಸಂದಣಿಯನ್ನು ಅಮೇರಿಕದಲ್ಲಿ ಮೊದಲ ಬಾರಿಗೆ ನೋಡಿದೆ ಎನಿಸಿತು. ಆದರೆ ಅಲ್ಲಿ ನಮ್ಮಲ್ಲಿಯಂತೆ ಗೌಜಿ ಗದ್ದಲ ಕಾಣಲಾರದು. ಅತ್ಯಂತ ವಿಶಾಲವಾದ ಎಕರೆಗಟ್ಟಲೆ ಜಾಗದಲ್ಲಿ  ಆಕಾಶದೆತ್ತರದ  ಜೈಂಟ್ ವೀಲ್ ಗಳು,  ಉರುಳಾಡಿಕೊಂಡು ಚಿತ್ರವಿಚಿತ್ರ...

6

ಅವಿಸ್ಮರಣೀಯ ಅಮೆರಿಕ-ಎಳೆ 12

Share Button

4D ಸಿನಿಮಾ ಮಜ… ಅದಾಗಲೇ ಮಧ್ಯಾಹ್ನದ ಹೊತ್ತು.. ಹಸಿದ ಹೊಟ್ಟೆಯನ್ನು ತಣಿಸಿ ಮುಂದಕ್ಕೆ ಅತೀ ಕುತೂಹಲದ 4D ಸಿನಿಮಾ ನೋಡಲು ನಮ್ಮ ದಂಡು ಹೊರಟಿತು. ನನಗಂತೂ ಸಮಾಧಾನ..ಇದರಲ್ಲಾದರೂ ಭಯಪಡುವಂತಹುದು ಏನೂ ಇರಲಾರದು ಎಂದು.. ಆದರೆ ಮೊದಲೊಮ್ಮೆ ‘ಕುಟ್ಟಿಚ್ಚಾತನ್’ ಎಂಬ  3D ಸಿನಿಮಾ ನೋಡಿ ಹೆದರಿ ಕಣ್ಣುಮುಚ್ಚಿ ಕುಳಿತಿದ್ದುದು...

10

ಅವಿಸ್ಮರಣೀಯ ಅಮೆರಿಕ-ಎಳೆ 11

Share Button

ಸ್ಟುಡಿಯೋ ಸುತ್ತಾಟ.. ಮುಂದಿನ ನಮ್ಮ ವೀಕ್ಷಣೆಗಿತ್ತು, ನೀರಿನಲ್ಲಿ ನಡೆಯುವ ಮನೋರಂಜನೆ..ವಾಟರ್ ವರ್ಲ್ಡ್ ಲ್ಲಿ.  ಮೊದಲೆರಡು ಬಾರಿಯ ಅನುಭವದಿಂದ ಹೆದರಿದ್ದ ನಾನು, ಮಗಳಲ್ಲಿ ಕೇಳಿದಾಗ, ಅಲ್ಲಿ, ಕುಳಿತು ನೋಡುವುದು ಮಾತ್ರವೆಂದು ತಿಳಿಯಿತು. ಎದುರಿಗೆ ವಿಶಾಲವಾದ ಸ್ವಚ್ಛ ಜಾಗದಲ್ಲಿ ನೂರಾರು ಜನ ಕ್ಯೂ ನಿಂತಿದ್ದರು ಟಿಕೆಟ್ಟಿಗಾಗಿ. ಸುಮಾರು ಒಂದು ಗಂಟೆಯ...

11

ಅವಿಸ್ಮರಣೀಯ ಅಮೆರಿಕ-ಎಳೆ 10

Share Button

ಭಯದ ಮಜಾ…! ಮರುದಿನ ಬೆಳ್ಳಂಬೆಳಗ್ಗೆ ಎಚ್ಚರವಾದಾಗ ಯಾರೂ ಇನ್ನೂ ಎದ್ದಿರಲಿಲ್ಲ. ಸ್ನಾನ ಮುಗಿಸಿಕೊಂಡು  ಬಂದಾಗ ಕೆಲವರು ಅಡುಗೆಕೋಣೆಯಲ್ಲಿ ಕಾಫಿ, ಟೀಗಳ ತಯಾರಿಯಲ್ಲಿರುವುದು ಕಂಡು ಬಂತು. ನಾನೇ ಗುಂಪಿನ ಹಿರಿಯಳಾದುದರಿಂದ ಆ ದಿನದ ತಿಂಡಿಯ ಜವಾಬ್ದಾರಿಯನ್ನು ವಹಿಸಿಕೊಂಡು, ತಂದಿದ್ದ ಸಾಮಾನುಗಳಿಂದ ಸೊಗಸಾದ ಪುಳಿಯೊಗರೆ ಸಿದ್ಧಗೊಳಿಸಲಾಯಿತು. ಒಂಭತ್ತು ಗಂಟೆಗೆ ಎಲ್ಲರೂ...

8

ಅವಿಸ್ಮರಣೀಯ ಅಮೆರಿಕ-ಎಳೆ 9

Share Button

ಮಾಯಾ ನಗರಿಯತ್ತ.. ಈಗಾಗಲೇ, ಅಮೆರಿಕದಲ್ಲಿನ ಹಲವಾರು ವಿಶೇಷತೆಗಳಲ್ಲಿ ಕೆಲವೇ ಕೆಲವು ಎಳೆಗಳನ್ನು ಬಿಚ್ಚಿಟ್ಟಿರುವೆ. ಇನ್ನು ಉಳಿದವುಗಳನ್ನು ಸ್ವಲ್ಪ ಮುಂದಕ್ಕೆ ಹೋಗ್ತಾ ಹೋಗ್ತಾ  ತಿಳಿಯೋಣ… ಯಾಕೆಂದರೆ ಈಗ ನಾವು ಅಲ್ಲಿಯ ಪ್ರಸಿದ್ಧ ಸ್ಥಳವೊಂದಕ್ಕೆ ಭೇಟಿ ಕೊಡಲಿದ್ದೇವೆ.          ಈ ಮಧ್ಯೆ ಮಗುವಿಗೆ ಮೂರು ತಿಂಗಳು ಪೂರ್ತಿಯಾಯಿತು. ನನ್ನ ಅರ್ಧಾಂಗರು ಬಂದು...

8

ಅವಿಸ್ಮರಣೀಯ ಅಮೆರಿಕ-ಎಳೆ 8

Share Button

ಪ್ರಾಣಿ ಪ್ರೀತಿ….! ವಿಶೇಷವಾಗಿ ಮರದಿಂದಲೇ ಮನೆಗಳನ್ನು ಅಮೆರಿಕದಲ್ಲಿ ಏಕೆ ಕಟ್ಟುವರೆಂದು ನಿಮ್ಮಂತೆ ನನಗೂ ಕುತೂಹಲ.. ಅದಕ್ಕಾಗಿ ಮಕ್ಕಳಲ್ಲಿ ವಿಚಾರಿಸಿದಾಗ ತಿಳಿಯಿತು. ಅಮೆರಿಕದ ಆ ಭೂಭಾಗದಲ್ಲಿ ಆಗಾಗ ತೀವ್ರ  ಭೂಕಂಪನಗಳು ಸಂಭವಿಸುವುದರಿಂದ, ಆ ಸಂದರ್ಭದಲ್ಲಿ ಹಾನಿಯಾಗದಂತೆ ಮನೆಗಳ ನಿರ್ಮಾಣವಾಗುತ್ತದೆ. ಒಂದು ವೇಳೆ ಸ್ವಲ್ಪ ಮಟ್ಟಿನ ಹಾನಿಯಾದರೂ ಜೀವ ಹಾನಿಗಳು...

12

ಅವಿಸ್ಮರಣೀಯ ಅಮೆರಿಕ-ಎಳೆ 7

Share Button

ಉಲ್ಟಾ…ಪಲ್ಟಾ..!! ಪ್ರಪಂಚದ ಹೆಚ್ಚಿನ ಎಲ್ಲಾ ಕಡೆಗಳಲ್ಲಿ ಒಂದು ಕಾನೂನಾದರೆ, ಅಮೆರಿಕದಲ್ಲಿ ಅದು ತದ್ವಿರುದ್ಧವಾಗಿರುವುದನ್ನು ಕಾಣಬಹುದು.. ತನ್ನ ಕತ್ತೆಗೆ ಮೂರೇ ಕಾಲು ಎನ್ನುವಂತೆ. ನಮ್ಮಲ್ಲಿಯ ರಸ್ತೆ ನಿಯಮದಂತೆ, ನಡೆದಾಡುವಾಗ ಅಥವಾ ವಾಹನದಲ್ಲಿ, ರಸ್ತೆಯ ಎಡಭಾಗದಲ್ಲಿ ಹೋಗುವುದು ರೂಢಿ ತಾನೇ? ಆದರೆ ಅಲ್ಲಿ ಎಲ್ಲವೂ ಬಲಭಾಗ! ವಾಹನಗಳು ರಸ್ತೆಯ ಬಲಭಾಗದಲ್ಲಿ...

4

ಅವಿಸ್ಮರಣೀಯ ಅಮೆರಿಕ-ಎಳೆ 6

Share Button

ತಪ್ಪಿದ ದಾರಿ ..‌‌..! ಮುಂದಿನ       ಮೂರ್ನಾಲ್ಕು ದಿನಗಳಲ್ಲಿ ನನ್ನ ಜೆಟ್ ಲ್ಯಾಗ್  ತೊಂದರೆಗಳಲ್ಲಿ ಸ್ವಲ್ಪ ಸುಧಾರಣೆ ಕಂಡುಬಂತು. ಸಂಜೆ ಹೊತ್ತಿಗೆ ವಾಕಿಂಗ್ ಹೋಗುವ ಅಭ್ಯಾಸ ಮಾಡಿಕೊಂಡೆ. ನಾವಿದ್ದ ಜಾಗದ ಹೆಸರು ಮೌಂಟೆನ್ ವ್ಯೂ.  ಸಾಂತಾಕ್ರೂಝ್ ಬೆಟ್ಟದ ಸಾಲುಗಳ ತಪ್ಪಲಿನಲ್ಲಿ ಇರುವ ಸಮತಟ್ಟಾದ ಬಯಲು ಪ್ರದೇಶದಲ್ಲಿ ದಟ್ಟ ಹಸಿರಿನ...

Follow

Get every new post on this blog delivered to your Inbox.

Join other followers: