Author: Dr.Gayathri Devi Sajjan
ಓಂ, ಓಂ, ಓಂ, ..ಓಂಕಾರದ ನಾದ ಕೇಳಿಸುತ್ತಿದೆಯಲ್ಲವೇ? ಈ ಪ್ರಣವ ನಾದ ಅ ಕಾರ, ಉ ಕಾರ ಮತ್ತು ಮ ಕಾರಗಳಿಂದ ಉದ್ಭವವಾಗಿದೆ. ಇವು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ಸಂಕೇತವಾಗಿ ನಿಂತರೆ, ಓಂಕಾರವು ಪರಬ್ರಹ್ಮನ ಸಂಕೇತವಾಗಿ ನಿಲ್ಲುವುದು. ಹಿಂದು ಧರ್ಮದಲ್ಲಿ ಬರುವ ಎಲ್ಲಾ ಮಂತ್ರಗಳೂ ‘ಓಂ‘ಕಾರದಿಂದಲೇ...
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ, ಮಹಾಕಾಲೇಶ್ವರನ ಹೆಸರು ಕೇಳಿಯೇ ಮೈಯಲ್ಲಿ ನಡುಕ ಹುಟ್ಟಿ, ಮನದಲ್ಲಿ ಭಯ ಮೂಡಿತ್ತು. ಮುಂಜಾನೆ ಎರಡೂವರೆಗೇ, ತಣ್ಣೀರಿನಲ್ಲಿ ಸ್ನಾನ ಮಾಡಿ, ಮಹಾಕಾಲನ ಭಸ್ಮಾರತಿ ನೋಡಲು ದೇಗುಲಕ್ಕೆ ಹೋಗಿದ್ದೆವು. ಪ್ರತಿದಿನ ಆರು ನೂರು ಜನರಿಗೆ ಮಾತ್ರ ಅವಕಾಶ ಇರುತ್ತದೆ. ಮೂರೂವರೆ ಹೊತ್ತಿಗೇ, ಭೂಮಿಯೇ ನಡುಗಿದಂತಹ ಅನುಭವ, ಗಂಟೆ,...
ಮಹಾದೇವಿಯಕ್ಕನ ಆರಾಧ್ಯ ದೈವವಾದ ಚನ್ನಮಲ್ಲಿಕಾರ್ಜುನನ ದರ್ಶನ ಮಾಡೋಣ ಬನ್ನಿ. ಮಂಗಳಕರನೂ, ಚೆಲುವನೂ ಆದ ಶಿವನ ಜ್ಯೋತಿರ್ಲಿಂಗ ಸ್ವರೂಪನಾದ ಮಲ್ಲಿಕಾರ್ಜುನನ್ನು ಅಕ್ಕ ತನ್ನ ಕನಸಲ್ಲಿ ಕಂಡದ್ದಾದರೂ ಹೇಗೆ? ಅಕ್ಕಾ ಕೇಳವ್ವಾ, ನಾನೊಂದ ಕನಸ ಕಂಡೆಅಕ್ಕಿ, ಅಡಕೆ, ತೆಂಗಿನಕಾಯಿ ಕಂಡೇನವ್ವಾಚಿಕ್ಕ ಚಿಕ್ಕ ಜಡೆಗಳ, ಸುಲಿಪಲ್ಲ ಗೊರವನುಬಿಕ್ಷಕೆ ಬಂದುದ ಕಂಡೇನವ್ವಮಿಕ್ಕು ಮೀರಿ...
ಗುಜರಾತಿನ ಪ್ರವಾಸಕ್ಕೆಂದು ಹೋದವರು, ಸೋಮನಾಥನ ದರ್ಶನ ಪಡೆಯದೇ ಬರುವುದುಂಟೇ? ಸೋಮನಾಥನ ದೇಗುಲದ ಮುಂದೆ ನಿಂತವರನ್ನು ಆಯಸ್ಕಾಂತದಂತೆ ಆಕರ್ಷಿಸಿದ್ದು ಭವ್ಯವಾದ ಸೋಮನಾಥನ ಆಲಯ. ಅರಬ್ಬೀ ಸಮುದ್ರ ತೀರ, ಅಪೂರ್ವವಾದ ಶಿಲ್ಪಕಲೆ, ಅದ್ಭುತವಾದ ವಾಸ್ತುಶಿಲ್ಪ ಹಾಗೂ ಇತಿಹಾಸವನ್ನು ಹೊಂದಿರುವ ದೇವಾಲಯ, ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯ ಸ್ಥಾನದಲ್ಲಿ ನಿಲ್ಲುತ್ತದೆ. ಗುಜರಾತಿನ ಕಾಟಿಯಾವಾಡಿನ...
ಅಂದು ಶಿವರಾತ್ರಿ. ಶಿವಾಲಯಗಳಲ್ಲಿ – ಗಂಟೆ, ಜಾಗಟೆಗಳ ಸದ್ದಿನೊಂದಿಗೆ, ಓಂಕಾರದ ನಾದ ಹೊರ ಹೊಮ್ಮುತ್ತಿತ್ತು ಪುಷ್ಪಗಳಿಂದ, ಧೂಪ ದೀಪಗಳಿಂದ ಅಲಂಕೃತನಾದ ಶಿವನನ್ನು ಹೇಗೆ ತಾನೆ ಬಣ್ಣಿಸಲಿ?. ನಾನು ನೋಡ ನೋಡುತ್ತಿದ್ದಂತೇ, ಆ ದೀಪಗಳ ಮಧ್ಯೆ ಕಂಗೊಳಿಸುತ್ತಿದ್ದ ಶಿವಲಿಂಗ ನಿಧಾನವಾಗಿ ಜ್ಯೋತಿ ಸ್ವರೂಪವಾಗಿ ಇಡೀ ಗರ್ಭಗುಡಿಯ ತುಂಬಾ ವ್ಯಾಪಿಸಿತು....
ಒಮ್ಮೆ ಸ್ಕಾಟ್ ಲ್ಯಾಂಡಿನಲ್ಲಿ ವಾಸವಾಗಿದ್ದ ಮಗನ ಮನೆಯಿಂದ ಇಂಗ್ಲೆಂಡಿನಲ್ಲಿದ್ದ ತಮ್ಮನ ಮನೆಗೆ ರೈಲಿನಲ್ಲಿ ಬಂದೆ. ಪಯಣದುದ್ದಕ್ಕೂ ನಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಕಡಲ ತೀರ, ಅಲ್ಲಲ್ಲಿ ಹಸಿರು ಹೊದ್ದ ಬೆಟ್ಟ ಗುಡ್ಡಗಳು, ಜೂನ್ ತಿಂಗಳಾದ್ದರಿಂದ ಎಲ್ಲಿ ನೋಡಿದರೂ ಮರ ಗಿಡಗಳಲ್ಲಿ ಬಣ್ಣ ಬಣ್ಣದ ಹೂಗಳು ಅರಳಿ ನಿಂತಿದ್ದವು. ಸುಮಾರು...
ಅಂದು ನಮ್ಮ ಪಕ್ಕದ ಅಪಾರ್ಟ್ಮೆಂಟಿನಲ್ಲಿ ವಾಸವಾಗಿದ್ದ ಮಾನಸ, ಅಜಿತ್ ದಂಪತಿಗಳ ಮಗ, ಸೊಸೆ, ಮೊಮ್ಮಕ್ಕಳು ವಿದೇಶಕ್ಕೆ ಹಿಂದಿರುಗಿದ್ದರು. ಹದಿನೈದು ದಿನದಿಂದ ಸಂಭ್ರಮದಲ್ಲಿ ತೇಲಾಡುತ್ತಿದ್ದ ಮನೆ ಬಿಕೋ ಎನ್ನುತ್ತಿತ್ತು. ಅಜಿತ್ ಹೊರಗೆ ತಿರುಗಾಡಲು ಹೋಗಿದ್ದರು. ನಾನು ಮಾನಸ ಜೊತೆ ಹರಟಲು, ಅವರ ಮನೆಗೆ ಹೋದೆ. ಬಾಗಿಲು ಅರೆಬರೆ ತೆರೆದಿತ್ತು....
2016 ಮೇ ತಿಂಗಳಲ್ಲಿ ನಾವು ನಾಲ್ಕು ಜನ ಗೆಳತಿಯರು ಅಮೆರಿಕ ಪ್ರವಾಸಕ್ಕೆ ಹೊರಟೆವು. ನನ್ನ ಇಬ್ಬರು ಗೆಳತಿಯರು ಬಾಸ್ಟನ್ನಲ್ಲಿ ನಡೆಯಲಿದ್ದ ಅಂತರ್ ರಾಷ್ಟ್ರೀಯ ರಸಾಯನ ಶಾಸ್ತ್ರದ ಸಮ್ಮೇಳನದಲ್ಲಿ ಭಾಗವಹಿಸುವವರಿದ್ದರು. ನಾವೂ ಅವರ ಜೊತೆ ಅಮೆರಿಕಾ ನೋಡಲು ಹೊರಟೆವು. ಅಮೆರಿಕಾ ಎಂದಾಕ್ಷಣ ನನ್ನ ಕಣ್ಣ ಮುಂದೆ ನಲಿದಾಡಿದ್ದು ನಯಾಗರಾ...
(ಕಳೆದ ಸಂಚಿಕೆಯಿಂದ ಮುಂದುವರಿದುದು) ಶ್ರೀಲಂಕಾ ದೀರ್ಘಕಾಲ ಆಂಗ್ಲರ ಆಳ್ವಿಕೆಯಲ್ಲಿದ್ದುದರಿಂದ ಅಲ್ಲಿನ ಮನೋಹರ ಪ್ರಕೃತಿ ತಾಣಗಳಿಗೆಲ್ಲಾ ಬಿಳಿಯ ದೊರೆಗಳ ಹೆಸರೇ ಇದೆ. Arthur’s View Point, Gregory Lake, Victoria park, St. Clair Water Falls, Devon Falls ಇತ್ಯಾದಿ. ಸ್ವಾತಂತ್ರ್ಯ ಪಡೆದು 72 ವರ್ಷಗಳಾದರೂ ಇನ್ನೂ...
ರಾವಣನ ನಾಡಿನಲ್ಲಿ ಸೀತೆಯರ ಅನಿರೀಕ್ಷಿತ ಪ್ರವಾಸ , ಅವಿಸ್ಮರಣೀಯ ಪಯಣವಾದ ಪ್ರವಾಸ ಕಥನ ಇದು. ನಾವು ನ್ಯೂಜಿಲ್ಯಾಂಡ್ಗೆ ಹೋಗಲು ಪ್ರತಿಷ್ಞಿತ ಪ್ರವಾಸಿ ಕಂಪೆನಿಯೊಂದರಲ್ಲಿ ಕಾಯ್ದಿರಿಸಿದ್ದೆವು. ಆದರೆ ಕಾರಣಾಂತರಗಳಿಂದ ಅದನ್ನು ರದ್ದು ಮಾಡಬೇಕಾಯಿತು. ಅವರಿಗೆ ನೀಡಿದ್ದ ಮುಂಗಡ ಹಣ ವಾಪಸ್ ಬರುವ ಲಕ್ಷಣ ಕಾಣಲಿಲ್ಲವಾದ್ದರಿಂದ. ಏಳು ದಿನಗಳ ಶ್ರೀಲಂಕಾ...
ನಿಮ್ಮ ಅನಿಸಿಕೆಗಳು…