Author: Parinitha Ravi, parinitharavi@yahoo.co.in
*ದೃಶ್ಯ 1* (ನಗರದ ಹೃದಯಭಾಗದಲ್ಲಿರುವ ಉದ್ಯಾನದಲ್ಲಿ ಮೂರು ಕೋತಿಗಳನ್ನು ಆಕರ್ಷಣೆಗಾಗಿ ಇಡಲಾಗಿದೆ. ಮೊದಲನೇ ಕೋತಿ ಕಣ್ಣು,ಎರಡನೇ ಕೋತಿ ಕಿವಿ,ಮೂರನೇ ಕೋತಿ ಬಾಯಿ ಮುಚ್ಚಿಕೊಂಡಿದೆ. ಉದ್ಯಾನದ ಎದುರು ಜನನಿಬಿಡವಾದ ರಸ್ತೆ, ಸುತ್ತಲೂ ಬಾನೆತ್ತರದ ಕಟ್ಟಡಗಳು, ಮಾಲ್ ಗಳು ಎಲ್ಲವೂ ಇದೆ. ಒಂದು ವೇಳೆ ಈ ಕೋತಿಗಳು ಎಲ್ಲವನ್ನೂ ಗ್ರಹಿಸಿ...
ಬೆಳಗುತಿಹ ದಿನಕರನು ಸೆಳೆಯುತಲಿ ಮೇದಿನಿಯ ಮುಳುಗದೆಯೆ ಬಾನಿನಲಿ ನಿಲ್ಲಲಹನೇ| ಬಿಳುಪಾದ ಚಂದಿರನು ಹೊಳೆಯುತಿರೆ ಗಗನದಲಿ ಕಳೆಗುಂದಿ ಸೊರಗುತಲಿ ಬಾಡದಿಹನೇ|| ಬಿರಿಯುತಲಿ ಕಂಗೊಳಿಸಿ ಮೆರೆಯುತಿಹ ಸುಮರಾಜಿ ಬರಿದಾಗಿ ಸಂಜೆಯಲಿ ಮುದುಡದಿಹುದೇ| ಹರಿಯುತಿಹ ಹೊಳೆಯೊಂದು ಸರಿಯುತಿರೆ ಕಡಲೆಡೆಗೆ ಧರೆಯಲ್ಲಿ ತೊಡರುಗಳ ಕಾಣದಿಹುದೇ || ಮುಗಿಲೊಡಲ ಜಲರಾಶಿ ಜಿಗಿಯುತಲಿ ಮಳೆಯಾಗಿ ಯುಗಯುಗದಿ...
‘ ಜೀವನದ ಪಥದಲಿ ಮುಳ್ಳೇ ತುಂಬಿದ್ದರೂ ಸುಗಮವಾಗಿ ಸಾಗುವೆನೆಂಬ ಕೆಚ್ಚೆದೆಯೇ ಬದುಕು… ಕಗ್ಗತ್ತಲೆಯ ಕಾರಿರುಳು ಸುತ್ತ ಆವರಿಸಿದ್ದರೂ ಹೊಂಬೆಳಕ ಕಾಣುವೆನೆಂಬ ಆಶಾಭಾವವೇ ಬದುಕು… ಕಷ್ಟ ಕಾರ್ಪಣ್ಯಗಳು ಬಿಡದೆ ಕಾಡಿದರೂ ಎಲ್ಲವ ಮೆಟ್ಟಿನಿಲ್ಲವೆನೆಂಬ ಧೈರ್ಯವೇ ಬದುಕು… ನಿರಾಶೆಯ ಅಂಧಕಾರ ಮನೆಮನವ ಕವಿದಿದ್ದರೂ ನಾಳೆ ಒಳಿತಾಗುವುದೆಂಬ ನಂಬಿಕೆಯೇ ಬದುಕು… ಪ್ರತಿ...
ನಿಮ್ಮ ಅನಿಸಿಕೆಗಳು…