Author: Sangeetha Raviraj
ಊರುಕೇರಿ ಸುತ್ತಿ ಸುಳಿದ ನೆನಪುಗಳ ಮುತ್ತಿಗೆಗೆ ಸಂವೇದನೆಯ ಚಿತ್ರವೆ ನಿನಾದದ ಜೋಳಿಗೆ, ಗೋಣಾಡಿಸಿ ಹಾರುವ ಹಕ್ಕಿಯು ಎಂದಾದರು ತನ್ನ ಅಂದವ ತಾನು ನೋಡಿಕೊಂಡಿರಲು ಸಾಧ್ಯವೇ ? ಇಲ್ಲದ ಸತ್ಯಾಸತ್ಯತೆಯು ಉಸಿರಿಲ್ಲದ ಚೌಕಟ್ಟಿನಲ್ಲಿ ಬಂಧಿಯಾಗಿ ಮನಪಟಲದಲ್ಲಿ ಅಚ್ಚಾಗಿ ಕುಳಿತಿದೆ ಸ್ವತಂತ್ರವಾಗಿ! ಜಗತ್ತೇ ಮುಖವಾಡದ ಸೋಗಿನಲ್ಲಿದ್ದರು ಎಲ್ಲರಿಗು ಎಲ್ಲಿಲ್ಲದ ವ್ಯಾಮೋಹ...
ಮಳೆ ಎಲ್ಲವನ್ನು ಆರ್ದ್ರಗೊಳಿಸುತ್ತದೆ. ನೆಲವನ್ನು , ನೆಲೆಯನ್ನು ಜೊತೆಗೆ ಮನಸ್ಸನ್ನು. ಮಳೆಗೆ ಮನಸೋಲದವರು ವಿರಳಾತೀತರಲ್ಲಿ ವಿರಳ. ಅಂತೆಯೇ ಮುಂಗಾರಿನ ಮುನ್ಸೂಚನೆಯೊಂದಿಗೆ ಮಳೆಗಾಲಕ್ಕೆ ಬೇಕಾದ ಪೂರ್ವಾಪರಗಳನ್ನು ಜೋಡಿಸದವರು ವಿರಳ! ಮನೆಯೊಡತಿಯ ಮಳೆಗಾಲವೆ ಹೀಗೆ ಪ್ರಾರಂಭಗೊಳ್ಳುತ್ತದೆ. ಮಳೆಗಾಲಕ್ಕೆ ಬೇಕಾದ ಸೌದೆಯೊಂದಿಗೆ ಶುರುವಾದ ಜೋಡಣೆ ದನಕರುಗಳಿಗೆ ಬೈ ಹುಲ್ಲು, ಮನೆಮಕ್ಕಳಿಗೆ ಹಪ್ಪಳ...
ತುರ್ತುಗಳ ನಡುವೆ ಸಂಯಮ ಅನಿವಾರ್ಯ ಸರಕು ದಿನತಪ್ಪಿದರೆ ಹದ ತಪ್ಪುವುದೀ ದೇಹ ವೈದ್ಯರ ಪರಾಕು ಇಲ್ಲಿ ಪದೇ ಪದೇ ಕಾಣುವ ಪೇಲವ ಮುಖದ ನಲುಗುವ ಪಾದಗಳು ನಿಲ್ಲಲಾರದೆ ಬಳಲುತ್ತಿದೆ ನೆರಳು ! ನಿಸ್ತೇಜದ ಜೋಡಿ ಕಂಗಳು ದಿಟ್ಟಿಸುವ ಛಾವಣಿಯು ಕರುಣೆ ತೋರದೆ ಅರೆ ಅಕ್ಷಿಯ...
ಎಳೆಕಿರಣಗಳ ಎಡತಾಕಿಸಿಕೊಂಡ ತೆಂಗಿನ ಗರಿಗಳಿಗೆ ಎಲ್ಲಿಲ್ಲದ ಉತ್ಸಾಹ. ಬೆಳಗಾಯಿತೆಂದರೆ ನಾನಾ ಹಕ್ಕಿಗಳು, ತರೇವಾರಿ ಕೂಗಿನೊಂದಿಗೆ ತನ್ನ ಗರಿಗಳ ಮೇಲೆ ಕುಳಿತು ಬೆಳಗನ್ನು ಆಸ್ವಾದಿಸುವ ಸಮಯಕ್ಕೆ ಕಾಯುತ್ತಿರುತ್ತದೆ ಈ ತೆಂಗಿನ ಮರ. ಹಳ್ಳಿ ಗುಡಿಸಲುಗಳಲ್ಲಿ ಏನಿಲ್ಲವೆಂದರು ಅಂಗಳದಂಚಿಗೆ ಒಂದೆರಡು ತೆಂಗಿನಮರಗಳು ಸಾಮಾನ್ಯ. ಗೂನಡ್ಕದಲ್ಲಿರುವ ಸುಬ್ಬಪ್ಪಜ್ಜನ ಗುಡಿಸಲು ಇದಕ್ಕೆ ಹೊರತಾಗಿಲ್ಲ....
ಹೆಣ್ಣಿಗೆ ನೂರಾರು ನಮೂನೆಯ ವೈವಿಧ್ಯಮಯ ಬಟ್ಟೆಗಳಿದ್ದರು ಪ್ರಸ್ತುತ ಸೀರೆಯೆ ಉಡುಪುಗಳ ಅನಭಿಷಕ್ತ ದೊರೆಯಾಗಿ ಉಳಿದುಕೊಂಡಿದೆ. ಎಂದಿಗೂ ಔಟ್ ಆಫ್ ಪ್ಯಾಷನ್ ಆಗದೆ ಸಾವಿರಾರು ವರುಷಗಳ ಇತಿಹಾಸ ಹೊಂದಿರುವ ಸೀರೆ ಇಂದಿಗು ಪಟ್ಟದರಸಿಯಾಗಿ ಮೆರೆಯುತ್ತಿದೆ. ಸೀರೆಗಳ ಮೇಲಿನ ಹೆಚ್ಚಿನ ಚಿತ್ರಗಳು ಎಲೆ, ಹೂವು, ಬಳ್ಳಿ ಹೀಗೆ...
ಈ ಪರ್ವದ ನಾಳೆಗಳ ಉಸಿರು ಕಾಲದ ನೀರವತೆಗೆ ಮತ್ತೆ ಮಾತಿನ ತೇರು ಭವಿಷ್ಯದ ಹೆಜ್ಜೆಗಳು ಕಾಲಾತೀತ ನಮ್ಮೊಳಗೆ ಬೇರಿಲ್ಲದ ಗಿಡದ ಒಂಟಿ ಜೀವ ಮಾಯೆ! ಒಂದೊಂಮ್ಮೆ ಪಾದದಡಿ ಚಲಿತ ನೀರು ಮತ್ತೆ ಕಾಣದು ಕಾಲವೆ ನಿರ್ಣಯಿಸು ನನ್ನ ಹಕ್ಕು ನಿನ್ನದಾಗಲಿ ಹೊಸ ಚಿಗುರು ಧಾವಂತಕ್ಕೆ ಸಿಲುಕಿ ನಲುಗುವ ಮೊದಲು...
ಕರೆದಿಟ್ಟ ಹಾಲು ಕಾಯಿಸಿಸುವ ಕಾತರತೆಯಲ್ಲಿ ಅರೆಗಳಿಗೆ ಉಕ್ಕಿ ಬಿಡುವುದೋ ಕ್ಷಣ ಕ್ಷಣ ಜತನ ಅಂತೂ ನೊರೆ ಹಾಲು ಕುದಿ ಬಂದು ಕೆನೆಗಟ್ಟಿದಾಗ ಸಮಧಾನ ಉಕ್ಕಿದರೆ ಗತಿಯೇನು? ಎಂದು ಬಿಕ್ಕಳಿಸಿದ ಮನಸಿಗೂ ಸಾಂತ್ವನ ತೆಗೆದಿರಿಸಿದ ಕೆನೆಯೆಲ್ಲಾ ಮತ್ತೆ ಸಣ್ಣಗೆ ಕಳಿತು ಮೊಸರಾಗುವ ಪ್ರತಿಕ್ರಿಯೆ ಅದೇ ಕಣಕಣದಲ್ಲೂ ಸಣ್ಣದೊಂದು...
ನಿಮ್ಮ ಅನಿಸಿಕೆಗಳು…