Author: Sumana Devananda, sumanadevananda@gmail.com
ಅಪ್ಪನ ಹೆಗಲದುವೆ ತಣ್ಣನೆ ಹಾಸಿಗೆಯಂತೆ,, ಅದುವೆ ಮೆತ್ತನೆ ಹಾಸಿನ ಮೇಲಿನ ನಿದ್ದೆಯಂತೆ,, ಅಪ್ಪನ ಕೈಗಳದುವೆ ಜೋಗುಳದ ತೊಟ್ಟಿಲಂತೆ,, ಅವೇ ಬಿಸಿಲಿಗೇ ಸವಾಲೊಡ್ಡುವ ನೆರಳಂತೆ,, ಅಪ್ಪನ ಕರಗಳದುವೆ ಕೆರೆಮೇಲ ತೆಪ್ಪದ ಪಯಣದಂತೆ ಅವೇ ಆಕಾಶದಿ ತೇಲಾಡಿಸುವ ಉಯ್ಯಾಲೆಯಂತೆ ಅಪ್ಪನ ನೋಟವದು ಹದ್ದಿನ ನೋಟದಂತೆ,, ನೀ ನೋಡುವೆ ಅವನ ಕಣ್ಣಲಿ...
ನೀವು ಮನುಷ್ಯರೇ, ನಾ ಬೀಳುವ ಮುನ್ನ ಕಡಿಯುವಿರೇಕೆ ನನ್ನನು,, ನೀವೇನು ಉತ್ತಿರೇ ಬಿತ್ತಿರೇ ಬೆಳೆಸಿರೇ ನಮ್ಮ ಕಡಿಯಲು,, ಕಡಿಯುವ ಮುನ್ನ ಯೋಚಿಸಿ ನನ್ನ ನಿಮ್ಮ ಅನುಬಂಧದ ಬಗ್ಗೆ,, ನೀವು ಗರ್ಭದಿ ಕೊಲ್ಲದೆ ಬಿಟ್ಟರೆ ನನ್ನನ್ನು, ಹೆರುವೆನು ಸಾವಿರ ಸಾವಿರ ನೆರಳು ನೀಡುವ ಮರಗಳನ್ನ ,, ಕೊಂದರೆ ಕಳೆದುಕೊಳ್ಳುವಿರಿ...
ನೀರು..ನೀರು,,, ನೀರು ನೀರು ನೀರ ಜೊತೆ ಸಂಬಂಧ ಅವಿನಾಭಾವ ಹಾಹಾಕಾರ ನೀರಿಗೆ ಎಲ್ಲೆಲ್ಲೂ ನೀರ ಅಭಾವ,, ನಗರಗಳಲಿ ಕಾವೇರಿದಾಗ ಕಾವೇರಿ, ಜಲಮಂಡಳಿಯ ಸಿಹಿನೀರು, ತೊಳೆಯಲು ಕೊಳವೆ ಬಾವಿಯ ಉಪ್ಪು ನೀರು,, ಬಯಲ ನಾಡಲ್ಲಿ ನದೀಪಾತ್ರದ, ಗುಂಡಿಗೆ ಅದುರುವಂತೆ ಗುಂಡಿ ತೋಡಿದರೂ ಬರದ ನೀರು,, ಬಾಯಾರಿ ಬಂದವರಿಗೆ ಬೆಲ್ಲದ...
ಅಂತರಾತ್ಮದ ಮಾತ ಮರೆತು ಬದುಕುವ ಮನುಜರ ಭಾವಹೀನತೆಗೆ ಮದ್ದಾಗಿ ಎಸೆದಿಹನು,, ದೇವರು ಬಣ್ಣಗಳ ಮದ್ದುಗುಂಡು,, ಆ ಜಾತಿ-ಈ ಮತ,ಕುಲ-ನೆಲವೆಂದು ಹೊಡೆದಾಡುವ ಮನುಷ್ಯರ ಅರ್ಥಹೀನ ಬಾಳ್ವೆಗೆ,, ಎಸೆದಿಹನು ಭಾವೈಕ್ಯತೆಯ ಮದ್ದುಗುಂಡು,, ನಾಟಕೀಯ ಬದುಕಿನ ರಾಜಕೀಯ ದೊಂಬರಾಟಕೆ ಎಲ್ಲಾ ಮಿಶ್ರಣವಾಗಿ ನೆನಪಿಸಿರುವನು ಬಿಳಿ ಬಣ್ಣದ ಮದ್ದುಗುಂಡು,, ಮನುಜ ಮಾತ್ರರು ಗುರುತಿಸದ...
ಒಳಗೆ ಬೆಟ್ಟದಷ್ಟು ಸೂರ್ಯನ ಆಸೆಯಿದ್ದರೂ ಮೇಲೆ ಬಿಳಿ ಹೊದಿಕೆಯೇಕಮ್ಮ ಮಂಜಿಗೆ ಒಳಗೆ ಆಕಾಶದಷ್ಟು ಭುವಿಯ ಆಸೆಯಿದ್ದರೂ ಮೇಲೆ ನೀಲಿ ಪರದೆಯೇಕಮ್ಮ ಗಗನಕೆ ಒಳಗೆ ಭೂಮಿಯಷ್ಟು ಬಾನ ಮೇಲೆ ಆಸೆಯಿದ್ದರೂ ಹಸಿರು ಹೊದಿಕೆಯೇಕಮ್ಮಇಳೆಗೆ ಒಳಗೆ ಕಡಲಾಳದಷ್ಟು ಶರಧಿಯ ಆಸೆಯಿದ್ದರೂ ಮೇಲೆ ಜುಳುಜುಳು ಸದ್ದೇಕಮ್ಮ ಹೊಳೆಗೆ , ಸುಮನ ದೇವಾನಂದ...
ಖಗ-ಮೃಗ ಜೋಡಿಯಂತೆ ಹೀಗೇ ಸಾಗುತಿರಲಿ ನಮ್ಮ ಈ ಜೋಡಿ ನಾ ನಿನಗಾದರೆ ನೀನೆನಗೆ ಎಂಬಂತೆ ನನ್ನೊಂಟಿತನಕ್ಕಾಗುತ್ತಿರುವೆ ಸದ್ಯ ನಿನ್ನ ಜೊತೆ ಸವೆಯುತಿದೆ ದಾರಿ, ಮುಂದೇನೋ ಬಲ್ಲೋರು ಯಾರು ಗೊತ್ತು ಗುರಿಯಿಲ್ಲದೇ ಸಾಗುತಿದೆ ಪಯಣ ಗೊತ್ತಿಲ್ಲದ ತಾಣಕೆ ಯಾನ ದೇವರು ಬೆಸೆದ ಸ್ನೇಹದ ದಾರ,ಎಲ್ಲ ಗಂಟು ಗೊಡವೆಗಳೊಡನೆ ಸಾಗಲಿ...
ನಿಮ್ಮ ಅನಿಸಿಕೆಗಳು…