ಬಣ್ಣದ ಮದ್ದು….
ಅಂತರಾತ್ಮದ ಮಾತ ಮರೆತು
ಬದುಕುವ ಮನುಜರ
ಭಾವಹೀನತೆಗೆ ಮದ್ದಾಗಿ ಎಸೆದಿಹನು,,
ದೇವರು ಬಣ್ಣಗಳ ಮದ್ದುಗುಂಡು,,
ಆ ಜಾತಿ-ಈ ಮತ,ಕುಲ-ನೆಲವೆಂದು
ಹೊಡೆದಾಡುವ ಮನುಷ್ಯರ
ಅರ್ಥಹೀನ ಬಾಳ್ವೆಗೆ,,
ಎಸೆದಿಹನು ಭಾವೈಕ್ಯತೆಯ ಮದ್ದುಗುಂಡು,,
ನಾಟಕೀಯ ಬದುಕಿನ
ರಾಜಕೀಯ ದೊಂಬರಾಟಕೆ
ಎಲ್ಲಾ ಮಿಶ್ರಣವಾಗಿ ನೆನಪಿಸಿರುವನು
ಬಿಳಿ ಬಣ್ಣದ ಮದ್ದುಗುಂಡು,,
ಮನುಜ ಮಾತ್ರರು
ಗುರುತಿಸದ ಪ್ರೀತಿಯಿಲ್ಲದ
ಕತ್ತಲ ಬದುಕಿಗೆ
ಸುರಿದಿಹನು ಬಣ್ಣ ಬಣ್ಣಗಳನು,,
ಮನುಷ್ಯ ಚೆಲ್ಲುತಿರುವ
ರಕ್ತದೋಕುಳಿಗೆ ಚೆಲ್ಲಿಹನು
ಸಾಮರಸ್ಯ ಸೂಸುವ
ಬೇರೆ ಬೇರೆ ಬಣ್ಣಗಳ ಮಿಶ್ರಣ,.
-ಸುಮಿ