ಅಪ್ಪನ ಹೆಗಲು,,,,
ಅಪ್ಪನ ಹೆಗಲದುವೆ
ತಣ್ಣನೆ ಹಾಸಿಗೆಯಂತೆ,,
ಅದುವೆ ಮೆತ್ತನೆ
ಹಾಸಿನ ಮೇಲಿನ ನಿದ್ದೆಯಂತೆ,,
ಅಪ್ಪನ ಕೈಗಳದುವೆ
ಜೋಗುಳದ ತೊಟ್ಟಿಲಂತೆ,,
ಅವೇ ಬಿಸಿಲಿಗೇ
ಸವಾಲೊಡ್ಡುವ ನೆರಳಂತೆ,,
ಅಪ್ಪನ ಕರಗಳದುವೆ
ಕೆರೆಮೇಲ ತೆಪ್ಪದ ಪಯಣದಂತೆ
ಅವೇ ಆಕಾಶದಿ
ತೇಲಾಡಿಸುವ ಉಯ್ಯಾಲೆಯಂತೆ
ಅಪ್ಪನ ನೋಟವದು
ಹದ್ದಿನ ನೋಟದಂತೆ,,
ನೀ ನೋಡುವೆ ಅವನ
ಕಣ್ಣಲಿ ಪಕ್ಷಿನೋಟದಂತೆ,,
ಅಪ್ಪನ ಕಿವಿಗಳದುವೆ
ತೀವ್ರ ವ್ಯಾಘ್ರದಂತೆ,,
ಅದುವೇ ಶಬ್ಧ ಕಾವಲು
ಕಾಯ್ವ ರಕ್ಷಕನಂತೆ,,
ಅಪ್ಪನ ಬೆನ್ನದು
ಹೊನ್ನ ಸಿಂಹಾಸನದಂತೆ,,
ಅದುವೇ ನಿನಗೆ
ರತ್ನದ ಪಲ್ಲಕ್ಕಿಯಂತೆ,,
–ಸುಮಿ
ಅಪ್ಪನ ಹೆಗಲು ತುಂಬಾ ಸುಂದರವಾಗಿ ಬಂದಿದೆ