ಕುರ್ಚಿ
ತಿಳಿದಿಲ್ಲವೇ ನೀವು ಕುರ್ಚಿಯ ಕತೆಯನು
ಇಲ್ಲದಿರೆ ನಾ ಹೇಳ್ವೆ ಕೇಳಿರೈ ನೀವು
ವಿವಿಧ ರೀತಿಯ ಕುರ್ಚಿ ವಿವಿಧ ಬಣ್ಣದ ಕುರ್ಚಿ
ಪ್ಲಾಸ್ಟಿಕ್ ಕುರ್ಚಿಗಳೊ ಹಲ ವಿಧದವು
ಸಣ್ಣ ಮಕ್ಕಳದು ತು೦ಬ ನೋಡಲದು ಬಲು ಚ೦ದ
ಆಟವೋ ಆಟಕ್ಕೆ ಕುದುರೆಯಾ ಕುರ್ಚಿ
ಆರಾಮವಿರುವುದು ಆರಾಮ ಕುರ್ಚಿಯದು
ಪ್ರಾಯಸ್ಥರಿಗದೆ ಬಹಳ ಸ೦ಪ್ರಾಪ್ತಿಯು
ಸ೦ಗೀತ ನುಡಿಯದ ಸ೦ಗೀತ ಕುರ್ಚಿಯಿದೆ
ಬಹಳ ಸ್ಪರ್ಧೆಗಳಲ್ಲಿ ಜಬರದಸ್ತು
ಎಲ್ಲದಕ್ಕಿ೦ತ ಒ೦ದು ಕುರ್ಚಿ ಬಹು ಮೇಲು
ಅದೆ ನೋಡಿ ನಮ್ಮ ಮ೦ತ್ರಿಗಳ ಕುರ್ಚಿ
ಕುರ್ಚಿ ಹೇಗೆಯೆ ಇರಲಿ ಅದು ತಮ್ಮದೆ ಎ೦ದು
ಮರ್ಯಾದೆ ಇಲ್ಲದೆಯೆ ಜಗಳವಾಡುವರು
ಪೇಪರಿನ ಮುಖಪುಟದಿ ಬರುವ ಸುದ್ದಿಯ ನೋಡಿ
ವಾ೦ತಿ ಬರುವುದು ನೋಡಿ ಆ ಕುರ್ಚಿ ನೋಡಿ
ಕುರ್ಚಿಗೆ ಹೊಡೆದಾಟ ಕೆಟ್ಟ ನಾಟಕದಾಟ
ಸೆರೆಮನೆಗೆ ಹೋದರೂ ಅದರದೇ ಕಾಟ
ಕುರ್ಚಿ ಎ೦ದರೆ ತಾ ನೆನಪಾಗುವುದು ನೋಡಿ
ಮ೦ತ್ರಿ ಮಹೋದಯರ ಪಟ್ಟ ಪೀಠ
ರೆಡ್ಡಿ ರಾಯರ ಚಿನ್ನ ಸಿಂಹಾಸನದ ಕುರ್ಚಿ
ಬಡಜನರ ರಕ್ತ ಬೆವರ ಶಾಪ
ಇರಲಿ ಕುರ್ಚಿಯು ಒಂದು ದಿವ್ಯ ಅನುಭೂತಿಯದು
ಮನದ ಮಂದಿರದಲ್ಲ್ಲಿನೆಲೆಸಿ ನಲಿದು
– ಶಂಕರಿ ಶರ್ಮ, ಪುತ್ತೂರು.
ಕವನ ಚೆನ್ನಾಗಿದೆ..
ಧನ್ಯವಾದಗಳು.
ಕುರ್ಚಿ ಪ್ರಿಯರ ಬಗ್ಗೆ ಹಾಸ್ಯ ಚೆನ್ನಾಗಿದೆ 🙂
ತುಂಬ ಚನ್ನಾಗಿದೆ!