ಲಹರಿ - ವಿಶೇಷ ದಿನ

ಗಣಪತಿಗೆ ಟೊಂಕ ಹಾಕುವುದೇಕೆ?

Share Button

Vijaya Subrahmanya

 

ಒಮ್ಮೆ ದೇವಲೋಕದಲ್ಲಿ ದೇವರ್ಕರುಗಳು  ಸಭೆ ಸೇರಿದ್ದಾಗ ಮಹಾವಿಷ್ಣು ತನ್ನ ಪಕ್ಕದಲ್ಲಿಟ್ಟಿದ್ದ ಸುದರ್ಶನ ಚಕ್ರವನ್ನು ಬಾಲಗಣಪಪತಿ ನುಂಗಿ ಬಿಟ್ಟನಂತೆ.ಇದನ್ನು ಗಮನಿಸಿದ ಮಹಾವಿಷ್ಣು ಗೊಂದಲಕ್ಕೀಡಾದ.

ಗಣಪತಿಯ ಹೊಟ್ಟೆಯಿಂದ ತನ್ನ ಆಯುಧವನ್ನು ಹೊರಹಾಕಿಸುವ ಬಗೆ ಹೇಗೆ ಎಂಬುದಾಗಿ ಚಿಂತಿಸಿದ.ಅದನ್ನು ಕಕ್ಕಿಬಿಡು ಮಹಾರಾಯ ಎಂಬುದಾಗಿ ಬಗೆ-ಬಗೆಯಲ್ಲಿ ನಿವೇದಿಸಿಕೊಂಡ ವಿಷ್ಣು. ಇಲ್ಲ.. ಗಣಪತಿ ಉಗುಳಲಿಲ್ಲ.ನಮಸ್ಕಾರ ಹಾಕಿದ, ಅಡ್ಡಬಿದ್ದ ಅದೂ ಪ್ರಯೋಜನವಿಲ್ಲ.ಕೊನೆಗೆ ಸಾಕಷ್ಟು ಚಿಂತಿಸಿ ಒಂದು ಉಪಾಯ ಹೂಡಿದ.

Ganapati-namaskara

ತನ್ನ ಬಲಕೈಯಿಂದ ತನ್ನ ಎಡ ಕಿವಿಯನ್ನೂ ಎಡಕೈಯಿಂದ ಬಲ ಕಿವಿಯನ್ನೂ ಹಿಡಿದುಕೊಂಡು ಗಣಪನ ಮುಂದೆ ಬಸ್ಕಿ ತೆಗೆಯುತ್ತಾ ಹೋದ. ಒಂದು, ಎರಡು, ಮೂರು, ಹೀಗೆ ಹನ್ನೆರಡು ಬಸ್ಕಿ ತೆಗೆಯುವಷ್ಟರಲ್ಲಿ ಗಣಪತಿಗೆ ನಗು ತಡೆಯದೆ ಗೊಳ್ಳೆಂದು ನಕ್ಕುಬಿಟ್ಟನಂತೆ.ಸುದರ್ಶನ ಚಕ್ರ ಹೊರಗೆ ಬಿತ್ತು!!.ವಿಷ್ಣು ಕೈಗೆತ್ತಿಕೊಂಡ. ಅಂದಿನಿಂದ ಗಣಪತಿ ಪ್ರಸನ್ನನಾಗಲು ‘ಟೊಂಕ’[ಇದಕ್ಕೆ ಟೊಂಕ ಎನ್ನುವರು] ಹಾಕುವುದು ವಿಶೇಷವಾಯಿತಂತೆ.

ನೂರ ಎಂಟು ವಿಶೇಷ. ಕನಿಷ್ಟವೆಂದರೆ ಹನ್ನೆರಡು ಟೊಂಕವನ್ನಾದರೂ ಹಾಕಿದರೆ ಮಹಾಗಣಪತಿ ಪ್ರಸನ್ನನಾಗುವನಂತೆ!.

 – ವಿಜಯಾಸುಬ್ರಹ್ಮಣ್ಯ, ಕುಂಬಳೆ.

20 Comments on “ಗಣಪತಿಗೆ ಟೊಂಕ ಹಾಕುವುದೇಕೆ?

  1. ಕಾಮೆಂಟ್ ಕೊಟ್ಟವರಿಗೆಲ್ಲ ಹೃತ್ಪೂರ್ವಕ ಧನ್ಯವಾದಗಳು

  2. ಮಹಾ ಗಣಪತಿಗೆ ಸಂಬಂಧ ಪಟ್ಟ ನನ್ನ ಈ ಬರಹವನ್ನು ಸಕಾಲಿಕವಾಗಿ ಪುನರಪಿ ಪ್ರಕಟಿಸಿದ; ಸುರಹೊನ್ನೆಯ ಸಂಪಾದಕಿ ಆತ್ಮೀಯ ಹೇಮಮಾಲ ಅವರಿಗೂ ಓದಿ ಮೆಚ್ಚಿದ ಮಾನನೀಯ ಬಳಗಕ್ಕೂ ಸತ್ಪ್ರೇಮ ವಂದನೆಗಳು.

  3. ಗಣಪತಿಗೆ ಟೊಂಕ ಹಾಕುವ ಬಗ್ಗೆ ಕಥೆ ಚೆನ್ನಾಗಿದೆ…

    1. ಶುಭೋದಯ. ಧನ್ಯವಾದಗಳೊಂದಿಗೆ ಸಸ್ನೇಹ ನಮಸ್ಕಾರಗಳು ಶಂಕರಿ ಶರ್ಮಾ.

  4. ನಮ್ಮ ಪೂರ್ವಜರು ಪಾಲಿಸುತ್ತಾ ಬಂದ ಸಂಸ್ಕಾರಗಳಾದ ಟೊಂಕಹಾಕುವುದು ಹಾಗೂ ಕೈಮುಗಿಯುವುದು(ಎರಡೂ ಕೈಗಳನ್ನು ಜೋಡಿಸಿದಾಗ ಆಗುವ ಪ್ರಚೋದನೆ ಮತ್ತು ಟೊಂಕ ಹಾಕುವಾಗ ಆಗುವ ಪ್ರಚೋದನೆಗಳು ನಮ್ಮ ಆರೋಗ್ಯಕ್ಕೂ ಸಹಕಾರಿಯೆಂದು ದೃಢಪಟ್ಟಿದೆ.. ಈ ನನ್ನ ಬರಹವನ್ನು ಪ್ರಕಟಪಡಿಸಿದವರಿಗೂ ಮೆಚ್ಚಿಕೊಂಡವರಿಗೂ ಧನ್ಯವಾದಗಳು.

  5. ಗಣಪತಿಗೆ ಟೊಂಕ ಹಾಕುವುದೇಕೆ!. ಮೊನ್ನೆ ಒಂದು ವಾಟ್ಸಪ್ ಗ್ರೂಪಲ್ಲಿ ಹಾಕಿದ್ದೆ. ಅದನ್ನು ನೋಡಿದ ಸಂಸ್ಕೃತ ವಿದ್ವಾಂಸರು ಅದನ್ನು ನನ್ನ ಅನುಮತಿ ಪಡೆದು ಸಂಸ್ಕೃತಕ್ಕೆ ಭಾಷಾಂತರಿಸಿ ಅಖಿಲ ಭಾರತಮಟ್ಟಕ್ಕೆ ಹಾಕಿದ್ದಾರೆ.

  6. ಟೊಂಕದ ಹಿಂದಿರುವ ಕತೆಯನ್ನು ತಿಳಿಸಿದಕ್ಕೆ ಧನ್ಯವಾದಗಳು. 🙂

    1. ಪಲ್ಲವಿಯವರಿಗೆ ಧನ್ಯವಾದಗಳು. ಆದಷ್ಟು ಇದನ್ನು ಮಕ್ಕಳಿಗೆ ಹೇಳಿಕೊಡಿ. ಯಾಕೆಂದರೆ ನಮ್ಮ ಬಾಲ್ಯದಲ್ಲಿ ; ದಿನಾ ಸಂಜೆಹೊತ್ತು, ಮಕ್ಕಳಿಗೆ ಹಿರಿಯರು ಮಗ್ಗಿ,ಕೋಷ್ಟಕ, ನಿತ್ಯನಕ್ಷತ್ರ, ಅರುವತ್ತು ಸಂವತ್ಸರಗಳ ಹೆಸರು, ಸೌರಮಾನ,,ಚಾಂದ್ರಮಾನ ತಿಂಗಳ ಹೆಸರು.ಪಂಚಪರ್ವತಿಥಿಗಳ ಹೆಸರು ಇವುಗಳನ್ನೆಲ್ಲೆ ಬಾಯಿಪಾಠ ಒಮ್ಮೆ ಹೇಳಿದ ಮೇಲೆ ಗಣಪತಿಗೆ ಹನ್ನೆರಡು ಟೊಂಕ ಹಾಕಿಸಿದ ಮೇಲಷ್ಟೇ ಆ ಪಾಠ ಪೂರ್ತಿಯಾಗುವುದು. ಅದೆಲ್ಲಾ ಎಷ್ಟು ಪ್ರಯೋಜನಕಾರಿ ಎಂದು ಈಗ ಅದರ ಮಹತ್ವ ಅರಿವಾಗುವುದು. ನಾನು ಗ್ರಂಥಪಾಲಿಕೆಯಾಗಿ ಸೇವೆಮಾಡುವ ಮುಜುಂಗಾವು ವಿದ್ಯಾಪೀಠದಲ್ಲಿ ಪುಟ್ಟಮಕ್ಕಳ ಲೈಬ್ರೆರಿ ಫಿರೆಡಿನಲ್ಲಿ ಇದನ್ನು ಹೇಳಿಕೊಡುವುದುಂಟು.

      1. ಖಂಡಿತ. ಶಾಲಾ ದಿನಗಳಲ್ಲಿ ಇದನ್ನೆಲ್ಲಾ ನಮ್ಮ ಮನೆಯಲ್ಲೂ ಹೇಳಿಕೊಟ್ಟಿದ್ದರು. ಮುಂದಿನ ಪೀಳಿಗೆಗೆ ಇದರ ಅರಿವು ಮೂಡಿಸುವುದು ನಮ್ಮ ಜವಾಬ್ದಾರಿ.

  7. ವಾವ್ ಚಂದದ ಮಾಹಿತಿ ಮೇಡಂ ಸಮಯೋಚಿತ ಬರಹ ಅಭಿನಂದನೆಗಳು.

  8. Заходите на интернет-сайт плей фортуна войти, где вы сумеете отыскать абсолютно все самые лучшие игровые автоматы на какой угодно стиль и с возлюбленными ставками. Только лишь на сайте онлайн казино Play fortuna легкодоступны бонусы для любого геймера. Заходить в гости.

Leave a Reply to Pallavi Bhat Cancel reply

 Click this button or press Ctrl+G to toggle between Kannada and English

Your email address will not be published. Required fields are marked *