ಪರಿಧಿ
ಮರೆಯಂಚಿನಲ್ಲಿ ನಿಂತು
ಕುಡಿನೋಟದಲ್ಲೇ ಮಾಯ ಮಾಡಿದೆ;
ಮನದಾಳದಲ್ಲಿ ಬಂದು
ಹೄದಯದೊಳಗೇ ನೆಲೆಯಾದೆ;
ಪ್ರೀತಿ–ಸುತ್ತಾ ಲೋಕ ಸುತ್ತಿ
ಪರಿಣಯದ ಮೋಹ ಹತ್ತಿ
ಜಗವೇ ನೀನಂದುಕೊಂಡೆ;
ಸಿಕ್ಕುಗಳ ಬಿಡಿಸಿದಾಗ
ಮರೆಯಾದ ಮಾಯಾಲೋಕ
ತಿಳಿಯಾದ ಕಣ್ಣ ಪೊರೆ
ಜಗವೆಲ್ಲಾ ಅಯೋಮಯ;
ಭಾವಗಳ ಕಲಕಿ
ನನ್ನನ್ನೇ ಕಳೆದುಕೊಂಡೆ;
ಮುಗಿದ ಅಧ್ಯಾಯದೊಳಗೆ
ಮತ್ತೊಂದು ಕಲರವ
ಕಳೆದುಹೋದ ಭಾವಗಳ
ಮರುಜೀವ ನವರಾಗ;
ಚಲಿಸುವ ಪಥದೊಳಗೆ
ಬದುಕ ಅರಿತುಕೊಂಡೆ.
– ಅಶೋಕ್. ಕೆ. ಜಿ. ಮಿಜಾರ್.
Very nice …..