ಗೀಜಗನ ಗೂಡು
ಯೌವ್ವನಕೆ ಬಂದ ಕೂಡಲೇ ಸೀಳಿ ತಂದು ಹಸಿರು ಹುಲ್ಲ ಹೆಣೆವುದು ಕುಲಾವಿಯಂತೆ ಕೊಕ್ಕಿನಿಂದಲೇ
ಹೆಣೆಯುತ್ತಲೇ ಗೂಡ… ಸೆಳೆವುದು ಗೆಳತಿಯರ.
ಗೂಡು ಹಿಡಿಸಿತೆಂದು ಒಲಿದು ಬಂದವಳು ಉಲಿವಳು
ಅವಳ ಕೂಡಿ ಅರ್ಧ ಹೆಣೆದ ಗೂಡ ಬಿಟ್ಟು ಬಡಿಯುವುದು ರೆಕ್ಕೆಯ ಮಧುಚಂದ್ರಕ್ಕೆ…
ಮರಳಿ ಬಂದು ಗೂಡಿಗೊಂದು ರೂಪ ನೀಡಿ ಕೊಡುವುದು ಗೆಳತಿಗೆ ಉಡುಗೊರೆಯ
ಅದರೊಳಗೆ ಮೊಟ್ಟೆ ಇಟ್ಟು ಕೊಡುವಳು ಕಾವ…
ಗೂಡು ತಲೆ ಕೆಳಕ್ಕಾಗಿ ನೇತುಹಾಕಿದ ಕಾಲು ಚೀಲದಂತೆ ತೇಲುವುದು…
ಮೊಟ್ಟೆಯೊಡೆದು ಮರಿಗಳು ಹೊರಗೆ ಇಣುಕಿ…
ಮಣ್ಣ ತಂದು ಹಣತೆ ಮಾಡಿ ಮಿಣುಕು ಹುಳವ ಹಿಡಿದು ಅಂಟಿಸಿ ದೀಪವಾಗಿಸಿ…
ಬೆಳಕಲ್ಲಿ ಮರಿಗಳಕಂಡು ಗೆಳತಿಯೊಂದಿಗೆ ಸಂಭ್ರಮಿಸಿ…
ಇಬ್ಬರು ಕೂಡಿ ತಂದ ಆಹಾರವ ಉಣಿಸಿ ಮರಿಗಳಿಗೆ ….
ಮಾಸುತ್ತಿರುವ ಹಸಿರುಗೂಡ ಸಂದುಗಳನ್ನು ಮುಚ್ಚುತ್ತಾ….
ಜೊತೆಯಲ್ಲೇ ತನಗೊಂದ ಗೂಡ ಹೆಣೆದು
ಗೆಳತಿ ,ಮರಿಗಳ ಕಾಯುತ್ತಾ…. ನಡೆಸಿತು ಬದುಕಾ.
– ಶೈಲಜೇಶ್ ರಾಜ, ಮೈಸೂರು
ಲೌಕಿಕದ ಗೂಡಿನಾಕರ್ಷಣೆಯಿಂದ ಒಲಿದು ಬಂದರು ಭಾವ- ಬಾಂಧವ್ಯ – ಮಮತಾ ಪಾಶಗಳ ಬಂಧಿಯಾಗಿ ಜೀವನ ಚಕ್ರದ ಮಾಯೆಗೆ ಸಿಲುಕಿಸುವ ಬದುಕೆ ಒಂದು ಗೀಜಗನ ಗೂಡಂತೆ ಸೋಜಿಗದ ಚೀಲ 🙂