ಮೂಗಿಗೆ ಸವರಿದ ತುಪ್ಪ

Share Button
Nagesha MN

ಮೈ.ನಂ. ನಾಗೇಶ

ಮೂಗಿಗೆ ಸವರಿದ ತುಪ್ಪ
ನಂಬಿ ನಡೆದವ ಬೆಪ್ಪ
ನಾಲಿಗೆಯೆತ್ತಿದರು ತುದಿಗೆ
ತಲುಪುವುದೆಲ್ಲೊ ಬದಿಗೆ ||

ಹಚ್ಚಿದ ಹೊತ್ತು ಗಮಗಮ
ಹಚ್ಚಿದ್ದಷ್ಟಿಷ್ಟು ಕೊರಮ
ಗಡಿಗೆಯೆ ಬಂದಂತೇನು
ಖಾಲಿ ಮಡಿಕೆ ಕಾಣದಿನ್ನು ||

ಮಾತಲೆ ಆಕಾಶ ಮಂದಿ
ತೋರಿ ಬಿಡಿಗಾಸಲೆ ತುದಿ
ಮಾಡುವರೆಲ್ಲ ಮಾಯಾ
ಮಟಮಟ ಹಗಲೆ ದಾಯ ||

ನಿನ್ನೆಚ್ಚರದಲಿ ನೀನಿದ್ದರು
ಹುಚ್ಚರಾಗಿಸೊ ಖದೀಮರು
ಮಾಯಾಜಾಲ ಭ್ರಮೆಯಲಿ
ಜಾಣಗು ಬೇಸ್ತಿನ ಖಯಾಲಿ ||

ಬೆಣ್ಣೆ ತುಪ್ಪ ತಂದವರೆಲ್ಲ
ನಂಬಬೇಡ ಮನ ಸಖರಲ್ಲ
ಒಳಿತು ಕೆಡುಕು ವಿವೇಚನೆ
ನಿನ್ನದಿರಲಿ ಸಮಾಲೋಚನೆ ||

Assessment1

 

 

– ಮೈ.ನಂ. ನಾಗೇಶ
.

8 Responses

  1. nayanabhide says:

    ಚೆನ್ನಾಗಿದೆ ತುಪ್ಪದ ಘಮ ಘಮ…

    • ಧನ್ಯವಾದಗಳು ನಯನಾ ಭಿಡೆಯವರೆ, ಬೆಣ್ಣೆ ಕಾಯಿಸಿದ ತುಪ್ಪವೆ ಇರಬೇಕು – ಅದಕ್ಕೆ ಘಮ ಘಮ ಹಿಡಿಸಿತೇನೊ 🙂 ಮೂಗಿಗೆ ಹಚ್ಚುವ ಕಿರುಗಾತ್ರವು ಕೂಡ ತುಟ್ಟಿಯದೆಂದು ಭಾವಿಸುವ ಜಗದಲ್ಲಿ, ಬರಿಯ ಘಮ ಘಮಕ್ಕೆ ಬೆರಗಾಗದೆ ತಂತಮ್ಮ ಎಚ್ಚರದಲ್ಲಿದ್ದರೆ ಒಳಿತು..!

  2. Bhavana says:

    ಮೂಗಿಗೆ ಸವರಿದ ತುಪ್ಪ
    ನಿಜಕ್ಕೂ ಡೇಂಜರಪ್ಪ
    ಅಯ್ಯಯ್ಯಯ್ಯಯಪ್ಪ.!
    ಹುಶಾರಾಗಿರಬೇಕಪ್ಪ.!!

    • ಧನ್ಯವಾದಗಳು ಭಾವನ ದಾಮ್ಲೆಯವರೆ 🙂
      ಬಲು ಡೇಂಜರೇನೊ ನಿಜ
      ಬಲಿಪಶುವಾದರೆ ಸಜಾ
      ಕಣ್ಮುಚ್ಚಿ ಕುಡಿಯದೆ ಹಾಲು
      ಚತುರ ಬೆಕ್ಕಾಗುವುದೆ ಮೇಲು !

  3. Sneha Prasanna says:

    ಚೆನ್ನಾಗಿದೆ ನಿಮ್ಮ ಕವನಗಳ ಸಾಲು..
    ಎಂದು ಹೇಳಲು ನಾನು ಪಡೆಯಲೇ ಪಾಲು…

    • ಸ್ನೇಹಾರವರೆ,
      ಪಾಲುದಾರಿಕೆಗೆ ಹೃತ್ಪೂರ್ವಕ ನಮನ
      ನುಡಿದ ಪರಿಗೆ – ಮೂಕ ವಿಸ್ಮಿತ ಮನ ! 🙂

  4. ನಿಜ ಎಚ್ಚರವಿರಬೇಕು
    ಮೈ ಎಲ್ಲಾ
    ಎಚ್ಚರವಿರಬೇಕು
    ಚೆನ್ನಾಗಿದೆ ಎಚ್ಚರಿಸೋ ಕವಿತೆ

    • ಬೆಳ್ಳಾಲ ಗೋಪಿನಾಥ ರಾವ್ ರವರೆ ನಮಸ್ಕಾರ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ಎಚ್ಚರವಿದ್ದರೂ ಏಮಾರಿಸುವ ಜಗವಿದು. ಹೀಗಾಗಿ ಬೇಸ್ತು ಬೀಳುವುದಕಿಂತ ಆದಷ್ಟು ಎಚ್ಚರವಿರುವುದೆ ಜಾಣತನ 🙂

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: