ಮಳೆ ಮತ್ತು ಇಳೆಯ ಮೊಹಬ್ಬತ್ತ…
ಮಳೆ ಮಳೆ ಮಳೆ ಮಳೆಯಂದ
ನೇಗಿಲಯೋಗಿಯ ಮನಿಯ ಮುಂದ
ಮಿಂಚುತ್ತ ಗುಡುಗುತ್ತ ಮೇಘದೊಳಗಿಂದ
ವರುಣನಾಗಿ ನೀ ಬರುವೆ ಮೇಲಿಂದ
ಹನಿಯಾಗಿ ಧರೆಗಿಳಿದು ಬರುವಾಗ
ಹೊಲದೊಳಗ ಝರಿಯಾಗಿ ಸುರುವಾಗಿ
ಸರೋವರವಾಗಿ ಹರಿಯುತ್ತ ಓಡುತ್ತ
ಬಳಕುತ್ತ ಬಾಗುತ್ತ ಒಡ್ಡುಗಳ ಹತ್ತುತ್ತ
ಅಕ್ಕ ತಂಗಿಯರನ್ನೆಲ್ಲ ಕೂಡಿಸಿಕೊಂಡ
ಒಂದಾಗಿ ಕೆರೆಯ ಕೋಡಿಯ ಒಡಕೊಂಡ
ಹಳ್ಳವಾಗಿ ಎಲ್ಲರನೂ ಒಡಗೂಡಿಸಿಕೊಂಡ
ಹರಿ ಹರಿದೂ ಹೊಳೆಯಾ ಸೇರಿಕೊಂಡ
ಅಣೆಕಟ್ಟಿನ ಕಟ್ಟೆಯೋಳಗೆ ಒಗ್ಗಟ್ಟಾಗಿ
ನಿಂತುಕೊಂಡು ನೀ ಮನುಜನಿಗೆ ಜೀವವಾಗಿ
ಕರ ಮುಗಿದು ಬೇಡಿ ನಿನ್ನ ಕರೆಯಲಾಗಿ
ಕೋಟಿ ಜನರ ಜೀವಕ್ಕೆ ಉಸಿರಾಗಿ
ಭೂಮಿತಾಯಿಯ ಮಡಿಲು ಹಸರಿಸಿ
ಅನ್ನವಾಗಿ ಜೀವರಾಶಿಗಳೆಲ್ಲವನೂ ಹರಸಿ
ಕೈಲಾಸದಿ ಗಂಗೆಯಾಗಿ ಹರನ ಜಡೆಯನ್ನರಿಸಿ
ಕುಲಕೋಟಿ ಕಾಪಾಡುವ ತಾಯೆ ನೀನಗೆ ಶರಣು ಶರಣೆಂಬೆ.
– ಗೌಡಗಟ್ಟಿ ಬಸವಣ್ಣ.
ಬಸವರಾಜರೇ
ನಿಮ್ಮ ಮಳೆಯ ಕವನ ತುಂಬಾ ಚೆನ್ನಾಗಿ ಬಂದಿದೆ
ಶರಣು
ಚೆನ್ನಾಗಿದೆ..:)