‘ಶಿಪ್ ಆಫ್ ಥಿಸಿಸ್’
ಏಷ್ಯಿನ್ ಫಿಲಾಸಫಿಯಲ್ಲಿ ‘ಶಿಪ್ ಆಫ್ ಥಿಸಿಸ್’ ಅನ್ನೊ ವಿಷಯದಲ್ಲಿ ಹೀಗೆ ಹೇಳುತ್ತದೆಯಂತೆ ಒಂದು ಹಡಗಿನ ಬಿಡಿಭಾಗಗಳು ಸವೆಯುತ್ತಿದಂತೆ ಅದನ್ನು ಬದಲಾಯಿಸುತ್ತಾ ಹೋಗುತ್ತೇವೆ. ಹೀಗೆ ಬದಲಾಯಿಸುತ್ತಾ ಹೋದಂತೆ ಕಡೆಗೊಮ್ಮೆ ಇಡೀ ಹಡಗು ಹೊಸ ಬಿಡಿ ಭಾಗಗಳನ್ನು ಪಡೆದುಕೊಳ್ಳುತ್ತದೆ, ಅದರಲ್ಲಿ ಹಳೆಯ ಒಂದು ಬಿಡಿ ಭಾಗವು ಇರುವುದಿಲ್ಲ ಹಾಗಾದರೆ ಆ ಹಡಗು ಹೊಸತೆ? ಅಥವ ಹಳೆಯದೇ? ಅದನ್ನು ಹೇಗೆಂದು ಗುರುತಿಸುವುದು?
ಕವಿಯೊಬ್ಬರು ಬರೆದದ್ದು ನೆನಪಿಗೆ ಬರುತ್ತಿದೆ: ‘ನೆನ್ನೆಯು ಇತ್ತಲ್ಲವೆ ಇಂದಿನದರ ಕಣ, ಇಂದು ಇದೆಯಲ್ಲವೆ ನಾಳೆಯದರ ಕಣ’...
‘ಶಿಪ್ ಆಫ್ ಥಿಸಿಸ್’ ಅನ್ನೊ ಸಿನಿಮಾವನ್ನು ನಾನು ಮೂರು ಬಾರಿಯಾದರು ನೋಡಿರಬೇಕು ಪ್ರತಿಸಲ ನೋಡಿದಾಗಲು ಅದು ಬೇರೆಯದೆ ಆಗಿ ತೆರೆದು ಕೊಳ್ಳುತ್ತದೆ. ಯಾವ ಸಿನಿಮಾವು ನನ್ನನ್ನು ಇಷ್ಷುಕಾಡಿರಲಿಲ್ಲ ಹಾಗಾಗಿ ಇದನ್ನು ಬರೆಯಬೇಕಾಯಿತು.
,
– ಶೈಲಜೇಶ್ ರಾಜ, ಮೈಸೂರು
ನೈಸ್…
ಹೌದಲ್ವಾ ಈ ದಿಸೆಯ ಯೋಚನೆ ತಾನೇ ಹೊಸತಾಗುತ್ತಾ ಸಾಗುತ್ತೆ….
ನಾವು ನಮ್ಮ ಯೋಚನೆಯ ಸೆಳೆತ ಸೆಲೆ ಬದಲಾದರೂ….
ನಾವು ನಾವೇ
ಆದರೂ ನಮ್ಮ ಬಾಲ್ಯದ ನಾವೆಲ್ಲಿ….
ಈಗಿಲ್ಲಿ…..
ಖುಷಿಯಾಯ್ತು