ಮರಳಿ ಬಾ ನಾವಿಕ………!
ಕಾದು ಕಾದು ಹಾದಿ ಸವೆದಿಹೆ
ಪದಗಳಿಲ್ಲದೆ ಮಾತು ಮರೆತಿಹೆ
ಭಾವಗಳಿಲ್ಲದೆ ಭಾರವಾಗಿಹೆ
ಕಳೆದುಹೋಗುವ ಸಮಯವಾಗಲು
ಮರಳಿ ಬಾ ನೀ ಮರಳಿ ಬಾ……..!
ಬಳ್ಳಿ ಮರವನು ಆತುಕೊಂಡು
ಮೊಗ್ಗು ಅರಳುದ ನೀನು ಕಂಡು
ಹರುಷದಲ್ಲಿ ಸವಿಯನುಣಲು
ಊರು ಕೇರಿ ದಾಟಿಕೊಂಡು
ಮರಳಿ ಬಾ ನೀ ಮರಳಿ ಬಾ………!
ಕಡಲ ತೀರದ ಅಲೆಗಳಲ್ಲಿ
ಹೇಳುತಿರುವ ಕತೆಗಳಲ್ಲಿ
ವ್ಯಥೆಯ ನೀಗುವ ಕ್ಷಣಗಳಲ್ಲಿ
ವಿಜಯವಾಗುತ ನಗೆಯ ಬೀರಿ
ಮರಳಿ ಬಾ ನೀ ಮರಳಿ ಬಾ………!
–ಅಶೋಕ. ಕೆ.ಜಿ. ಮಿಜಾರು