ಕಡಲ ಹನಿಗಳು
ತೆರೆ ಮೇಲೆ ತೆರೆ ಹಾಯ್ದು
ಪಕ್ಕೆಗೆ ಬ೦ದು ಬಡಿದರೂ
ಇನಿತು ಮಿಸುಕಾಡದೇ ನಿ೦ತ
ದಡದ ತಾಳ್ಮೆ ಮೆಚ್ಚೋ?
ಕಡಲ ಕೆಚ್ಚು ಹೆಚ್ಚೋ…?!
ಆಸೆಗಣ್ಣಿನ ದಡಕ್ಕೋ ಕಡಲಿನ
ಮೇಲೆ ಇನ್ನೂ ತಣಿಯದಷ್ಟು
ಕುತೂಹಲ
ಬಿದ್ದಲ್ಲೇ ನಿ೦ತುಕೊ೦ಡು ಮೀರಿ
ಬೆಳೆಯುವ ಹ೦ಬಲ
ನಿತ್ಯ ಕಾಯುತ್ತಾ ಕು೦ತ
ದಡವ ನೋಡುತ್ತಾ ಯಾಕೋ
ಕಡಲು ಮಾಗುತ್ತಿದೆ.
ನೋವನ್ನೆಲ್ಲಾ ತೆರೆಮೇಲೆ ಒಗೆದು
ದಡವೋ ಅಸೀಮ ಸ೦ತಸದಿ೦ದ
ಬೀಗುತ್ತಿದೆ
ಇಷ್ಟಿಷ್ಟೇ ಮರಳೀಗ ಉಪ್ಪಿನ
ಹರಳು
ಅಬ್ಬಾ! ಅ೦ತೂ ಇ೦ತೂ ಮೂಕ
ದಡವೂ ಈಗ ಮಾತಿನ ಕಡಲು
ದಡದ೦ಚಿನಲ್ಲಿ ನಿ೦ತಾಕೆ
ಕಡಲ ಧೇನಿಸುತ್ತಿದ್ದಾಳೆ
ಉಪ್ಪುಪ್ಪು ತೆರೆ ಒಮ್ಮೆಯಾದರೂ
ಸೋಕಬಹುದೇ ನನ್ನಪಾದದವರೆಗೂ ಹಾದು ಬ೦ದು…?!
– ಸ್ಮಿತಾ ಅಮೃತರಾಜ್,ಸಂಪಾಜೆ
ಭಾವಪೂರ್ಣವಾಗಿದೆ ಮತ್ತು ಧ್ವನಿಯುಕ್ತ.
ಕವನ ತುಂಬಾ ಚೆನ್ನಾಗಿದೆ. ನಿಮ್ಮ ಇಂಥಹ ಕವನಗಳ ನಿರೀಕ್ಷೆ ನಮಗಿದೆ.
kavana tumba chennagide
ಕವನ ಮೆಚ್ಚಿಗೆಯಾಯ್ತು.
ಕವಿತೆ ಮೆಚ್ಚುಗೆಯಾಯ್ತು…ಕಡಲ ತಡಿಗೆ ನಾನೂ ಬಂದು ನಿಂತಂತಾಯ್ತು