ಬೆಳದಿಂಗಳ ಸಂಗೀತ …
ಮೈಸೂರಿನಲ್ಲಿರುವ ಸುತ್ತೂರು ಮಠದ ಶಾಂತವಾದ ಪರಿಸರದಲ್ಲಿ, ಹಸಿರು ಗಿಡಗಳ ಕೋಟೆಯ ಮಧ್ಯೆ ಇರುವ ಒಂದು ಕಲ್ಯಾಣಿ. ಅದಕ್ಕೆ ನಾಲ್ಕೂ ಕಡೆಗಳಲ್ಲಿ ಮೆಟ್ಟಿಲುಗಳು. ಒಂದು ಭಾಗದಲ್ಲಿ ವೇದಿಕೆಯನ್ನು ಸಜ್ಜುಗೊಳಿಸಿರುತ್ತಾರೆ. ಪ್ರತಿ ತಿಂಗಳ ಬೆಳದಿಂಗಳ ರಾತ್ರಿಯಲ್ಲಿ,ಈ ತೆರೆದ ವೇದಿಕೆಯಲ್ಲಿ,ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಸಂಗೀತವನ್ನು ಆಲಿಸಲೆಂದು ಬಂದವರಿಗೆ ಕಲ್ಯಾಣಿಯ ಮೆಟ್ಟಿಲುಗಳಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ.
ಬೆಳದಿಂಗಳ ರಾತ್ರಿ. ಬೀಸುವ ತಂಗಾಳಿ. ಶಾಸ್ತ್ರೀಯ ಸಂಗೀತಾಸಕ್ತರಾಗಿದ್ದು, ನಿಶ್ಶಬ್ದವಾಗಿ ಕುಳಿತು, ತಾಳ ಹಾಕುತ್ತಾ,ತಲೆದೂಗುತ್ತಾ, ಕಲ್ಯಾಣಿಯ ಮೆಟ್ಟಿಲುಗಳಲ್ಲಿ/ಕಟ್ಟೆಯಲ್ಲಿ ಕುಳಿತ ನೂರಾರು ಶ್ರೋತೃಗಳು. ಶಾಸ್ತ್ರೀಯ ಸಂಗೀತವನ್ನು ಕೇಳಲು ಇದರಷ್ಟು ಉತ್ತಮವಾದ, ನೈಜವಾದ ವೇದಿಕೆ ಬೇರೆ ಲಭಿಸೀತೆ ?
27 ಅಕ್ಟೋಬರ್ 2015ರ ಸಂಜೆ, ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಮಠದ ಶಾಖೆಯ ಆವರಣದಲ್ಲಿ ‘ಬೆಳದಿಂಗಳ ಸಂಗೀತ’ದ ಕಾರ್ಯಕ್ರಮವಿತ್ತು.
ವಿದುಷಿ ಶ್ರೀಮತಿ ರಂಜಿನಿ ಮತ್ತುವಿದುಷಿ ಶ್ರೀಮತಿ ಗಾಯತ್ರಿ ಸಹೋದರಿಯರ ( Ra Ga Sisters) ಅಮೋಘವಾದ, ವಿದ್ವತ್ಪೂರ್ಣ ಗಾಯನವನ್ನು ಆಲಿಸುವ ಅವಕಾಶ ನಮ್ಮದಾಯಿತು.
– ಹೇಮಮಾಲಾ
ತಾವು ತುಂಬಾ ಅದೃಷ್ಟವಂತರು..
ಇಂತಹ ಭಾಗ್ಯ ಯಾರಿಗುಂಟು
ಯಾರಿಗಿಲ್ಲ. ???