ನೀ ಹೋದ ಕ್ಷಣವು…
ನೀ ಹೋದ ಕ್ಷಣವು
ಏನೊ ಕಳಕೊ೦ಡ ಮನವು
ನಡುಗುತ ಅಳುಕುತ ಬಲುನೊ೦ದಿದೆ.
ಹುಡುಕುತ್ತ ನಿನ್ನನ್ನು ಸೊರಗಿದೆ.
ಬೀಸೊಗಾಳಿಯೆ ಜೋರಾಗಿ
ಬೀಸದಿರು ಅವಳು ನಲುಗುವಳು.
ಬೀಳೊ ಮಳೆಯೆ ರಭಸದಲಿ
ಸುರಿಯಬೇಡ ಅವಳು ಬೀಳುವಳು.
.
ಹತ್ತಿರ ಬ೦ದೆಯ,ಜೊತೆಯಲಿ
ನಡೆದೆಯ,ಆಗಿದ್ದ ಗಾಯಕ್ಕೆ
ಮುಲಾಮು ಹಾಕಿ ವಾಸಿಯಾಗೊ
ಮು೦ಚೆಯೆ ಮಾಯವಾದ ಜಿ೦ಕೆಯೆ?
ನೆಲೆಯನ್ನು ಹುಡುಕು .ಸುಖವಾಗಿ ಬದುಕು.
ಆಗಸದ ತುಂಬ ಹೊಂಬಣ್ಣ ಬರಲಿ.
ಅದರಲ್ಲಿ ನಿನ್ನ ಚಿತ್ತಾರ ಇರಲಿ.
– ಶೋಬಿತ ನಾಗತಿಹಳ್ಳಿ
.
ಉತ್ತಮ ಕವನ
thank you