ಬೆಳಕು-ಬಳ್ಳಿ

ನೀ ಹೋದ ಕ್ಷಣವು…

Share Button
Shobhita Nagatihalli
ಶೋಬಿತ ನಾಗತಿಹಳ್ಳಿ

ನೀ ಹೋದ ಕ್ಷಣವು 

ಏನೊ ಕಳಕೊ೦ಡ ಮನವು

ನಡುಗುತ ಅಳುಕುತ ಬಲುನೊ೦ದಿದೆ.

ಹುಡುಕುತ್ತ ನಿನ್ನನ್ನು ಸೊರಗಿದೆ.

ಬೀಸೊಗಾಳಿಯೆ ಜೋರಾಗಿ

ಬೀಸದಿರು ಅವಳು ನಲುಗುವಳು.

ಬೀಳೊ ಮಳೆಯೆ ರಭಸದಲಿ

ಸುರಿಯಬೇಡ ಅವಳು ಬೀಳುವಳು.

.

Miss you

ಹತ್ತಿರ ಬ೦ದೆಯ,ಜೊತೆಯಲಿ

ನಡೆದೆಯ,ಆಗಿದ್ದ ಗಾಯಕ್ಕೆ  

ಮುಲಾಮು ಹಾಕಿ ವಾಸಿಯಾಗೊ 

ಮು೦ಚೆಯೆ ಮಾಯವಾದ ಜಿ೦ಕೆಯೆ?

ನೆಲೆಯನ್ನು  ಹುಡುಕು .ಸುಖವಾಗಿ ಬದುಕು. 

ಆಗಸದ ತುಂಬ ಹೊಂಬಣ್ಣ ಬರಲಿ.

ಅದರಲ್ಲಿ ನಿನ್ನ ಚಿತ್ತಾರ ಇರಲಿ.  

 

 – ಶೋಬಿತ  ನಾಗತಿಹಳ್ಳಿ
.

2 Comments on “ನೀ ಹೋದ ಕ್ಷಣವು…

Leave a Reply to Niharika Cancel reply

 Click this button or press Ctrl+G to toggle between Kannada and English

Your email address will not be published. Required fields are marked *