ಕುಸುಮಬಾಲೆ…ಹತ್ಯೆ…ಮಾನ
ಕುಸುಮಬಾಲೆ
ದುಂಬಿಯೊಂದು
ಝೇಂಕರಿಸಿ
ಎನ್ನೊಡಲ
ಚುಚ್ಚಿ
ಬಲವಂತವಾಗಿ
ನಾ–ನ–ರಳವುದು
ನ್ಯಾಯವೇ…..?
ಹತ್ಯೆ
ಅತ್ಯಾಚಾರಿಗೆ ಆಗಬೇಕಿತ್ತು
ಶಿಕ್ಷೆ…!
ಪುಢಾರಿಗೆ ಬೇಕಿತ್ತು
ಅವನ ರಕ್ಷೆ…!
ನೊಂದವಳಿಗೆ ಸಿಕ್ಕಿತು
ಆತ್ಮಹತ್ಯೆ…!
ಕೊಂದವನಿಗೆ ದಕ್ಕಿತು
ಅ–ನ್ಯಾಯ ಮತ್ತೆ ಮತ್ತೆ…!!
ಮಾನ
ಸಮ್ಮಾನ, ವರಮಾನ
ಬರೇ ಪುರುಷರ ಸೊತ್ತಲ್ಲ..!
ಅವಮಾನ, ಅನುಮಾನ
ಮಹಿಳೆಗದು ತಪ್ಪಿಲ್ಲ..!
ಯಾರಿಗೋ ಬಹುಮಾನ
ಮಾನಕೆಲ್ಲರೂ ಸಮಾನ..!
– ಅಶೋಕ್ ಕೆ. ಜಿ. ಮಿಜಾರ್.
ಚೆನ್ನಾಗಿದೆ ಅಶೋಕ್. ಕೊನೆಯ ಹನಿಗವನ ಬಹುಶ: ಸ್ವಲ್ಪ ವಾಚ್ಯವಾಯಿತೇನೋ.
ಸೂಪರ್