ಸತ್ಯ ಮಿಥ್ಯ….ನಲ್ಲಾ
ಸತ್ಯ ಮಿಥ್ಯ
ಗೆದ್ದವ
ಉದ್ದುದ್ದ
ಬರೆದದ್ದೆಲ್ಲವೂ
ಸತ್ಯ.
ಬಿದ್ದವ ಬರೆದ
ಕಟು ಸತ್ಯವೂ
ಮಿಥ್ಯ ಮಿಥ್ಯ ಮಿಥ್ಯ..
.
ನಲ್ಲಾ
ಕವಿದ ಮೋಡ
ಸರಿಯಲಿಲ್ಲಾ
ನೀನು ಬಂದ ಬಾಳಿಗೆ.
ಸವಿಯ ನೆನಪು
ಬದುಕಲಿಲ್ಲಾ
ಇರಿಯುತ್ತಿತ್ತು
ಕರುಳಿಗೆ.
ಒಲವು ಭಾರ
ನಲಿವು ದೂರ
ಅಳುವೆ ಇಲ್ಲಿ ಎಲ್ಲಾ.
ಭರದ ಛಾಯೆ
ಎಲ್ಲಾ ಮಾಯೆ
ನನ್ನ ಮುತ್ತಿತ್ತಲ್ಲಾ.
ಬದುಕು ಬವಣೆ
ಕ್ಷಣವು ಗಹನೆ
ನನ್ನ ನಿನ್ನಲ್ಲೆಲ್ಲಾ.
ಜೀವದೊಲುಮೆ
ಪಡೆಯಲಿಲ್ಲಾ
ಕೊನೆಯತನಕ ನಲ್ಲಾ.
– ಉಮೇಶ ಮುಂಡಳ್ಳಿ, ಭಟ್ಕಳ
‘ಸತ್ಯ ಮಿಥ್ಯ’.. ಸರಿಯಾಗಿ ಹೇಳಿದಿರಿ.ಜೀವನದಲ್ಲಿ ಅನುಭವವಾಗುತ್ತವೆ! ಹನಿಕವನ ಚೆನ್ನಾಗಿದೆ.
Thank u madam