‘ಗ್ರೇ ಹಾರ್ನ್‌ಬಿಲ್’ ಕುರಿತು ಗ್ರೇಟ್ ಪ್ರಹಸನ…!

Share Button

ಎಂ..ವಿ.ಪರಶಿವಮೂರ್ತಿ

ನನ್ನ ಹೆಸರು ಗ್ರೇಟ್…! ಅಲ್ಲಲ್ಲಾ… ಗ್ರೇ ಹಾರ್ನ್‌ಬಿಲ್. ನಾನು ಮತ್ತು ನನ್ನ ಸಂಗಾತಿ ಇಬ್ಬರೂ, ಮೈಸೂರು ಸರಸ್ವತಿಪುರಂನಲ್ಲಿ ಸದ್ಯಕ್ಕೆ ವಾಸ ಮಾಡುತ್ತಿದ್ದೇವೆ. ನೀವು ತಿಳಿದಿರಬಹುದು, ನಮ್ಮ ಸಂತತಿ ಈ ಭುವಿಯಲ್ಲಿ ಕ್ಷೀಣಿಸುತ್ತಿದೆ ಎಂದು. ವಿಷಯ ಹಾಗೇನಿಲ್ಲ, ನಮ್ಮ ಪೂರ್ವಿಕರು ಬಹಳ ಹಿಂದಿನಿಂದಲೂ ಬಹಳ ಸುಂದರವಾದ, ರಾಜರ ನಾಡು, ಅರಮನೆಯ ನಗರಿ ಎಂದು ಹೆಸರು ಪಡೆದಿರುವ, ಪರಿಸರದ ಸೊಬಗನ್ನು ಬಹಳ ಉತ್ತಮ ರೀತಿಯಲ್ಲಿ ಉಳಿಸಿಕೊಂಡಿರುವ ಮೈಸೂರಿಗೆ…! ಬಹಳ ಇಷ್ಟಪಟ್ಟು ಬರುತ್ತಿದ್ದರು.

ನಾವೂ ಕೂಡ ನಮ್ಮ ಪೂರ್ವಿಕರ ಗುಣವನ್ನೇ ಹೊಂದಿದವರಾಗಿರುವುದರಿಂದ ನಾವು ಮೈಸೂರಿನ ನೆಂಟಸ್ತನವನ್ನು ಮುಂದುವರಿಸಿ ಕೊಂಡು ಬಂದಿದ್ದೇವೆ. ನಮ್ಮ ನೆಂಟರಿಷ್ಟರು ಇಲ್ಲೇ ಪಕ್ಕದ ಕುಕ್ಕರಹಳ್ಳಿ, ಲಿಂಗಾಂಬುದಿ, ಕಾರಂಜಿ ಕೆರೆ, ಚಾಮುಂಡಿಬೆಟ್ಟದಲ್ಲಿದ್ದರು, ವಾಸಕ್ಕೆ ಕಷ್ಟವಾದ ಕಾರಣ, ಇಲ್ಲಿಂದ ದೂರದಲ್ಲಿರುವ ಬಂಡೀಪುರ, ನಾಗರಹೊಳೆಯತ್ತ ಅವರೆಲ್ಲರು ವಲಸೆ ಹೋಗಿದ್ದಾರೆ. ನಾವು ಬೂದಿ ಬಣ್ಣದ ಕುಲದವರು. ನಮ್ಮ ಇತರ ಬಣ್ಣಬಣ್ಣದ ಕೆಂಪು, ಹಳದಿ, ಪರಂಗಿ ಕೊಕ್ಕಿನ ಕುಲದವರು ದೂರದ… (ಪರದೇಶ ಎಂದೇ ತಿಳಿಯಿರಿ) ಸಹ್ಯಾದ್ರಿ, ಪೂರ್ವ ಮತ್ತು ಪಶ್ಚಿಮ ಘಟ್ಟದ ಶ್ರೇಣಿಗಳಲ್ಲಿ ಬಹಳ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನೀವೂ ಕೂಡ ಯೂಥ್ ಹಾಸ್ಟೆಲ್ ಗಂಗೋತ್ರಿ ಘಟಕದ ಮೂಲಕ ಚಾರಣ ಮಾಡಿ ನಮ್ಮ ಈ ಎಲ್ಲ ಕುಲದವರನ್ನೂ ಕಂಡಿರುತ್ತೀರಿ ಎಂದೇ ಭಾವಿಸುತ್ತೇವೆ. ನಿಮಗೆ ನಮ್ಮ ಇಷ್ಟೆಲ್ಲಾ ಗುಟ್ಟು ಬಿಟ್ಟುಕೊಡುವ ಅವಶ್ಯಕತೆಯಿರಲಿಲ್ಲ. ಆದರೂ ಯೂಥ್ ಹಾಸ್ಟೆಲ್‌ನವರಾದ ನೀವೆಲ್ಲರೂ ಪರಿಸರ ಪ್ರೇಮಿಗಳಾಗಿರುವುದರಿಂದ, ಪ್ರಾಣಿ-ಪಕ್ಷಿ-ಕೀಟ-ಸಸ್ತನಿಗಳ ಮೇಲೆ ದಯೆ ಉಳ್ಳವರಾಗಿದ್ದೀರಿ ಎಂದೇ ಭಾವಿಸಿದ್ದೇವೆ. ಇತ್ತೀಚೆಗೆ ನಾವು ಛಾಯಾಚಿತ್ರಕಾರರ ಕಣ್ಣಿಗೆ ಬಿದ್ದೆವು. ಅವರು ನಮಗೆ ಗೊತ್ತೇ ಆಗದ ಹಾಗೆ, ಯಾವ ತೊಂದರೆಯನ್ನೂ ಕೊಡದೆ ನಮ್ಮನ್ನು ಚಿತ್ರೀಕರಿಸಿದ್ದು ನಮಗೆ ಸಂತಸ ತಂದಿತು. ನಿಮ್ಮೊಂದಿಗೆ ನಮ್ಮ ಕುಟುಂಬದ ವಿಚಾರ ಹೇಳಿಕೊಳ್ಳುವ ಆಸೆಯಾಗಿದೆ…

ನಾವಿಬ್ಬರು ಬಾಳ ಸಂಗಾತಿಗಳು. ನಮಗಿನ್ನೂ ಕಂದಮ್ಮಗಳಿಲ್ಲ. ಈ ತೋಪಿನ ಮೋಟು ತೆಂಗಿನ ಮರದಲ್ಲಿ ನಮಗೆ ಒಂದು ಸೂಕ್ತ ಜಾಗ ಸಿಕ್ಕಿದೆ. ಗೂಡು ನಮಗೆ ಹೇಳಿ ಮಾಡಿಸಿದ ಹಾಗಿದೆ. ಕಂದಮ್ಮಗಳನ್ನು ಹೊಂದುವ ಆಸೆ. ಅದಕ್ಕಾಗಿ ನಾವು ದಂಪತಿಗಳಿಬ್ಬರೂ ಸೇರಿ ಗೂಡನ್ನು ಸ್ವಚ್ಛಗೊಳಿಸುವತ್ತ ಮಗ್ನರಾಗಿದ್ದೇವೆ…..!

1a gray hornbill

1a.ಇದೇ ನಮ್ಮ ಗೂಡು. ೫೦ ಅಡಿ ಎತ್ತರದ ಈ ಮರದ ಮದsದಲ್ಲಿ ಯಾರಿಂದಲೂ ಅಪಾಯ ಒದಗದಂತೆ ನಾವು ಕಟ್ಟಿಕೊಂಡ ಗೂಡು. ಇಲ್ಲಿ ಒಂದು ಮೂರು ತಿಂಗಳ ಕಾಲ ಸ್ವಚ್ಛಂದವಾಗಿ ಇರಬೇಕೆನ್ನುವುದು ನಮ್ಮ ಆಸೆ.

 

 

 

 

 

 

 

 

 

1b gray hornbill

1b.ನನ್ನವಳು ಗೂಡಿಂದ ಇಣುಕಿ ನೋಡುತ್ತಿದ್ದಾಳೆ. ಈಗ ಒಳ್ಳೆಯ ಸಮಯ. ಹತ್ತಿರ ಯಾರೂ ಇಲ್ಲ. ಊಟಕ್ಕಾಗಿ ಕಾಯುತ್ತಿರಬಹುದೇನೋ…! ಗೂಡನ್ನು ಸ್ವಚ್ಛಗೊಳಿಸಿ ಸುಸ್ತಾದವಳಂತೆ ಕಾಣುತ್ತಿದ್ದಾಳೆ. ಇದೋ ಬಂದೆ ಗ್ರೇ…

 

 

1c gray hornbill

1c. ನಮ್ಮವರು ಇನ್ನೂ ಬರಲಿಲ್ಲ್ಲ… ಬಹಳ ಹೊತ್ತಾಯ್ತು. ಬಿಸಿಲು ಬೇರೆ ಏರುತ್ತಿದೆ. ಇಲ್ಲಿ ಜನರು ಯಾರಿಂದಲೂ ತೊಂದರೆ ಇದ್ದಂತೆ ಕಾಣುತ್ತಿಲ್ಲ. ನಾನು ಇಷ್ಟ ಪಟ್ಟಂತೆ ಎಲ್ಲ ರೀತಿಯ ತಿಂಡಿಯನ್ನೂ ತರುತ್ತಾರೇನೋ…?

 

 

2a Gray hornbill

2a. ಹೋ… ಎಷ್ಟೊಂದು ಕಸ ಇದೆ ಒಳಗೆ… ಗೂಡಿಗೆ ಅಪಾಯವಾಗದಂತೆ  ಕೊಕ್ಕಿನಿಂದ ಸಡಿಲಿಸಿ ಇನ್ನೂ ಸ್ವಲ್ಪ ವಿಶಾಲ ಮಾಡಿಕೊಳ್ಳಬೇಕು… ಕಸವನ್ನೆಲ್ಲ ಕೆಳಕ್ಕೇ ಎಸೆದರೆ ಒಳ್ಳೆಯದು ಎನಿಸುತ್ತಿದೆ…

.

2b Gray hornbill

2b.ಹೋ…! ಈ ಸುಂದರ ಪರಿಸರ ಎಷ್ಟು ಚೆನ್ನಾಗಿದೆ, ಎಷ್ಟೊಂದು ತೆಂಗಿನ ಮರಗಳು, ಹೊಂಗೆಯ ಮರ, ಬಸವನ ಪಾದ, ಜತ್ರೋಪ, ಅರಳಿ, ಬೇವು,ಬಾಗೆ, ಬಿದಿರು…..ಎಷ್ಟೊಂದು ಮರಗಳು ಇಲ್ಲಿ?

 

2c Gray hornbill

2c. ಗ್ರೇ… ನಾ ಬಂದಿದ್ದೇನೆ. ಸದ್ಯಕ್ಕೆ ಈ ತೋಟದ ಸುತ್ತಮುತ್ತ ಯಾರೂ ಇದ್ದಂತಿಲ್ಲ. ನೀನು ಬಹಳ ಇಷ್ಟಪಡುವ ಮಿಡತೆ, ಒಂದೆರಡು ಕೆಂಪು ಚೇಳು, ಒಣಗಿದ ರೊಟ್ಟಿಯನ್ನು ತಂದಿದ್ದೇನೆ. ಕೊಕ್ಕನ್ನು ಚಾಚುವಿಯೇನು…?

 

3a.ಎಲ್ಲಿ ತುಂಬ ಒಳಗಿರುವೆಯಾ… ಹೋ… ಒಳಗೆಲ್ಲ ಎಷ್ಟು ಸುಂದರವಾಗಿ, ಚೊಕ್ಕಟ ಮಾಡಿ ಒಪ್ಪವಾಗಿರಿಸಿದ್ದೀಯ…! ಸ್ವಲ್ಪ ಹೊರಗೆ ಬಾ… ನೀನು ಕೇಳಿದ್ದ ಒಂದೊಂದೇ ತಿಂಡಿಯನ್ನು ಕೊಕ್ಕಿನಿಂದ ತೆಗೆದುಕೊಡುತ್ತೇನೆ..

3b Gray hornbill

3b. ಬಹಳ ದೂರ ಸಾಗಿ, ಕುಕ್ಕರಹಳ್ಳಿ ಕೆರೆಯಿಂದ ಮಿಡತೆಗಳನ್ನು ಹಿಡಿದು ತಂದಿದ್ದೇನೆ, ಅಲ್ಲಿ ನೀರು ಅಷ್ಟು ಚೆನ್ನಾಗಿಲ್ಲ, ಕೆಟ್ಟುಹೋಗಿದೆ, ಬಹಳ ವಾಸನೆಯೂ ಇದೆ, ಮೀನುಗಳು ಸತ್ತು ತೇಲುತ್ತಿದ್ದವು, ಅದನ್ನು ತರಲಿಲ್ಲ ನಾನು…

 

3c Gray hornbill

3c.ಈಗ ತೆಗೆದುಕೋ ರೊಟ್ಟಿಯ ಚೂರುಗಳನ್ನು… ೧೪ನೇ ಕ್ರಾಸಿನ ಕೊನೆಯ ಮನೆಯವರು ರೊಟ್ಟಿಯನ್ನು ಗೋಡೆಯಿಂದ ಹೊರಗೆ ಬೀಸಾಡುತ್ತಿದ್ದರು… ತುಪ್ಪದ ಪರಿಮಳ ಬಹಳ ಜೋರಾಗಿದೆ, ತಗೋ…!

 

 

 

 

 

 

 

 

 

4a Gray hornbill

4a.ಚೇಳುಗಳನ್ನು ತಿನ್ನುವ ಅದೇನು ಆಸೆಯೋ ನಿನಗೆ…! ಲಿಂಗಾಂಬುದಿ ಕೆರೆಯ ಆವರಣ ದಿಂದ ಕಷ್ಟಪಟ್ಟು ಹುಡುಕಿ ತಂದಿದ್ದೇನೆ, ಅಲ್ಲಿಯೂ ನೀರೆಲ್ಲವೂ ಕಲುಷಿತಗೊಳ್ಳುತ್ತಿದೆ, ಸದs ಅಲ್ಲಿ ಕಾಡು ಮಾತ್ರ ಬಹಳ ಚೆನ್ನಾಗಿದೆ…

 

4b Gray hornbill

4b.ಕಾರಂಜಿ ಕೆರೆಗೂ ಹೋಗಿದ್ದೆ, ಅಲ್ಲಿ ಎಲ್ಲೆಲ್ಲೂ ಬರೀ ಜನರೇ… ನನ್ನನ್ನು ನೋಡಿ ಎಲ್ಲರೂ ಕಿರುಚಿಕೊಳ್ಳುತ್ತಿದ್ದರು, ನನ್ನಷ್ಟು ದೊಡ್ಡ ಪಕ್ಷಿ ಯನ್ನು ಅವರು ನೋಡಿಯೇ ಇಲ್ಲವೇನೋ…! ನನಗಂತು ಬಹಳ ನಗು ಬರುತ್ತಿತ್ತು…

 

 

 

 

 

 

 

 

 

4c Gray hornbill

4c.ಪಾಪ ನನ್ನವಳಂತು ಮೊಟ್ಟೆಗಳಿಗೆ ಕಾವು ಕೊಡಲು ತನ್ನ ರೆಕ್ಕೆಗಳನ್ನೆಲ್ಲ ಉದುರಿಸಿಕೊಂಡು ಜಾಗವನ್ನು ಮೃದು ಮಾಡುತ್ತಾಳೆ… ಕಂದಮ್ಮಗಳು ಬೆಳೆಯುವ ತನಕ ಆಕೆಗೆ ಅದೇ ಸ್ಥಿತಿ, ನನ್ನ ‘ಗ್ರೇ’…ಯನ್ನು ನಾನು ಬಹಳ ಚೆನ್ನಾಗಿ ನೋಡಿಕೊಳ್ಳಬೇಕು…!

 

 

– ಚಿತ್ರ ಪ್ರಹಸನ:  ಎಂ.ವಿ. ಪರಶಿವಮೂರ್ತಿ,  ಮೈಸೂರು

 

10 Responses

  1. ಸುರೇಖಾ ಭಟ್ ಭೀಮಗುಳಿ says:

    ನೂತನ ಶೈಲಿ…. ಚೆನ್ನಾಗಿದೆ….

  2. Niharika says:

    ವಾವ್, ಉತ್ತಮ ಬರಹ ಸೊಗಸಾದ ಶೈಲಿ..

  3. Nayana Bhide says:

    ತು೦ಬಾನೇ ಚೆನ್ನಾಗಿದೆ

  4. Sanjeev Nadiger says:

    channagide

  5. Shruthi Sharma says:

    Nice concept, superb writing, Awesome editing.. 🙂

  6. nayana says:

    ನಿನ್ನೆಯಿ೦ದ ಇದು ನಾಲ್ಕನೇ ಸಾರಿ ನಾನು ಓದುತ್ತಿರುವುದು……
    ……..ಇರಿ ಇರಿ , ಇಲ್ಲೊ೦ದು ಸುರಹೊನ್ನೆ ಅ೦ತ ದೊಡ್ಡ ಬಳಗ ಉ೦ಟು…ನಿಮ್ಮ ಮಕ್ಕಳ ಹುಟ್ಟಿದ ಹಬ್ಬಕ್ಕೆ ನಾವೆಲ್ಲಾ ಬರ್ತೇವೆ ಆಯ್ತಾ…?? ಹೇ ಗ್ರೇ ನಿನ್ನ ಹೆ೦ಡತಿಗೊ೦ದು ದೊಡ್ಡ ಸಲಾಂ…ಭಾರೀ ಆದರ್ಶ ದಾ೦ಪತ್ಯ ನಿಮ್ಮದು ಮಾರ್ರೆ……!!!

  7. Basavaraj says:

    ಹೌದು ಸರ್ ನೀಮ್ಮ ನೂತನ ಶೈಲಿಯ ಬರವಣಿಗೆ ಎಲ್ಲರ ಮನ ಮಿಡಿಯುವಂತಿದೆ…..ನಿಜವಾಗಿಯುಬಳಗದವರೆಲ್ಲ ಸೇರಿಕೊಂಡ ಗ್ರೇಟ್ನ ಮಕ್ಕಳ ಬರ್ತಡೆಗೊ ಮದುವದಗೊ ಹೋಗಿಬರಬೇಕು.

  8. Parashivamurthy M.V. says:

    ಪ್ರಹಸನವನ್ನು ಓದಿ, ಮೆಚ್ಚಿ, ಉತ್ತಮವಾಗಿ ಪ್ರತಿಕ್ರಿಯಿಸಿರುವುದಕ್ಕೆ ಅನಂತ ವಂದನೆಗಳನ್ನು ಸಲ್ಲಿಸುತ್ತೇನೆ.

    ಪರಶಿವಮೂರ್ತಿ ಎಂ.ವಿ.

  9. Divakara Dongre M (Malava) says:

    ಸೊಗಸಾದ ನಿರೂಪಣೆ ಮತ್ತು ತಾಳ್ಮೆಯಿಂದ ಕ್ಲಿಕ್ಕಿಸಿದ ಫೊಟೊಗಳು ಲೇಖನದ ಅಂದವನ್ನು ಹೆಚ್ಚಿಸಿವೆ.

  10. ರಾಜಶೇಖರ says:

    ವಾವ್…………….!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: