ಬೆಳಕು-ಬಳ್ಳಿ

ಸುಗ್ಗಿಕಾಲ ಬಾಳಜೋರ ಐತಿರಿ

Share Button
Basavaraja  Jotiba Jagataapa
ಬಸವರಾಜ ಜೋತಿಬಾ ಜಗತಾಪ

ಸುಗ್ಗಿಕಾಲ ಬಾಳಜೋರ ಐತಿರಿ
ನಸುಕಿನ್ಯಾಗ ತಂಡಿ ಬಾಳ ಐತಿರಿ
ಜೋಳ ಕೊಯ್ಯಾಕ ಹೊಲಕ ಹೋಗಬೇಕ್ರೀ

ಜೋಳದರೊಟ್ಟಿ ಪುಂಡಿ ಪಲ್ಲೆರಿ
ಅದರಾಗ ಒಂದಿಟ ಖಾರಾ ಒಳ್ಳೆಎಣ್ಣಿರಿ
ಕಡಕೊಂಡ ತಿನ್ನಾಕ ಎರಡ ಉಳ್ಳಾಗಡ್ಡಿರಿ

ನಡುಮನಿ ಪಡಸಾಲ್ಯಾಗ ಕುಂತರಿ
ಹತ್ತ ರೊಟ್ಟಿತಿಂದ ಮ್ಯಾಗ ಏಳಾವರೀ
ಯಾಕಂದರ ಹೊಲಾ ಬಾಳ ದೂರರಿ

Jowar harvestingಹೊಲಕ ಹೋಗಿ ಅಕ್ಕಡಿ ಹಿಡದನೆಂದೆರರೀ
ಕೈಯಾಗ ಕೂಡಗೋಲ ಆಡುದ ನೋಡಬೇಕರಿ
ಕೂರಿಗೆ ಬಾಳ ಸಣ್ಣದ ಆರ ಸಾಲಿಗೊಂದ ಅಕ್ಕಡರೀ

ಜೋಳ ಬೆಳದದ ದಿಡಾಳ ಎತ್ತರರಿ
ಅರ್ದ ಕಿಲೊಮಿಟರ ದೂರದ ಮ್ಯಾರಿರಿ
ಅಕ್ಕಡಿ ಮುಟ್ಟುಮಟ ನಾಎನ ನಿಲ್ಲಾವಲ್ಲರೀ

ಗುಡಸಲಕಾ ತೂಗ ಹಾಕೆನೆ ನೀರಿನ ತತ್ತರಾಣಗ್ರಿ
ಎತ್ತಿ ಕುಡದ್ರ ಲಿಟರ್ ನೀರ ಖಾಲಿರೀ
ಎಲಿ ಅಡಿಕಿ ತಿನ್ನುದೊಂದ ನನಗ ಚಟಾರಿ

ಆಕಿದಾರಿ ನೋಡಕೊತ ಗುಡಸಲ ಮುಂದರಿ
ಕುಡಗೋಲ ಮಸಗೊತ ಕುಂತನಿ ಎನ ಮಜಾರಿ
ಇದ ಅಲ್ಲೆನರಿ ನನ ಬಾಳೆವ ಬದುಕರಿ

ಅಂಬಲಿ ಗಡಿಗಿ ತೆಲಿಮ್ಯಾಲ ಹೊತ್ತಾಳರಿ
ಬದುವಿನ ಮ್ಯಾಲ ಬರಾಕಿ ನಮ್ಮ ಮನಿಯಾಕಿರಿ
ನಮ್ಮಾಕಿ ಮಾರಿ ಮ್ಯಾಲ ಹೂನಗಿ ಬಾಳ ಚಂದರೀ
ನೋಡಿ ನಾ ಮೀಸಿ ತಿರವಾವ ರೀ……..……

 

 

.

– ಬಸವರಾಜ ಜೋತಿಬಾ ಜಗತಾಪ  (ಗೌಡಗಟ್ಟಿ ಬಸವಣ್ಣ)

3 Comments on “ಸುಗ್ಗಿಕಾಲ ಬಾಳಜೋರ ಐತಿರಿ

    1. ಕೃತಕ ಮೀಸಿ ಅದಾವ ರೀ ಸರ್ ಮನ್ನೆ ಉಣಕಲ್ಲದಾಗ ನಮ್ಮ ಕಾಕಾರ ಆಡಿದ “ಐರಾವಣ ಮೈರಾವಣ” ದೊಡ್ಡಾಟದಾನವ ಕೊಡುಸುನಂತ….,ಅವರಿಗೆ ಹೇಳಿ……

Leave a Reply to ಬಸವರಾಜ ಜೋ ಜಗತಾಪ Cancel reply

 Click this button or press Ctrl+G to toggle between Kannada and English

Your email address will not be published. Required fields are marked *