ಸುಗ್ಗಿಕಾಲ ಬಾಳಜೋರ ಐತಿರಿ
ಸುಗ್ಗಿಕಾಲ ಬಾಳಜೋರ ಐತಿರಿ
ನಸುಕಿನ್ಯಾಗ ತಂಡಿ ಬಾಳ ಐತಿರಿ
ಜೋಳ ಕೊಯ್ಯಾಕ ಹೊಲಕ ಹೋಗಬೇಕ್ರೀ
ಜೋಳದರೊಟ್ಟಿ ಪುಂಡಿ ಪಲ್ಲೆರಿ
ಅದರಾಗ ಒಂದಿಟ ಖಾರಾ ಒಳ್ಳೆಎಣ್ಣಿರಿ
ಕಡಕೊಂಡ ತಿನ್ನಾಕ ಎರಡ ಉಳ್ಳಾಗಡ್ಡಿರಿ
ನಡುಮನಿ ಪಡಸಾಲ್ಯಾಗ ಕುಂತರಿ
ಹತ್ತ ರೊಟ್ಟಿತಿಂದ ಮ್ಯಾಗ ಏಳಾವರೀ
ಯಾಕಂದರ ಹೊಲಾ ಬಾಳ ದೂರರಿ
ಹೊಲಕ ಹೋಗಿ ಅಕ್ಕಡಿ ಹಿಡದನೆಂದೆರರೀ
ಕೈಯಾಗ ಕೂಡಗೋಲ ಆಡುದ ನೋಡಬೇಕರಿ
ಕೂರಿಗೆ ಬಾಳ ಸಣ್ಣದ ಆರ ಸಾಲಿಗೊಂದ ಅಕ್ಕಡರೀ
ಜೋಳ ಬೆಳದದ ದಿಡಾಳ ಎತ್ತರರಿ
ಅರ್ದ ಕಿಲೊಮಿಟರ ದೂರದ ಮ್ಯಾರಿರಿ
ಅಕ್ಕಡಿ ಮುಟ್ಟುಮಟ ನಾಎನ ನಿಲ್ಲಾವಲ್ಲರೀ
ಗುಡಸಲಕಾ ತೂಗ ಹಾಕೆನೆ ನೀರಿನ ತತ್ತರಾಣಗ್ರಿ
ಎತ್ತಿ ಕುಡದ್ರ ಲಿಟರ್ ನೀರ ಖಾಲಿರೀ
ಎಲಿ ಅಡಿಕಿ ತಿನ್ನುದೊಂದ ನನಗ ಚಟಾರಿ
ಆಕಿದಾರಿ ನೋಡಕೊತ ಗುಡಸಲ ಮುಂದರಿ
ಕುಡಗೋಲ ಮಸಗೊತ ಕುಂತನಿ ಎನ ಮಜಾರಿ
ಇದ ಅಲ್ಲೆನರಿ ನನ ಬಾಳೆವ ಬದುಕರಿ
ಅಂಬಲಿ ಗಡಿಗಿ ತೆಲಿಮ್ಯಾಲ ಹೊತ್ತಾಳರಿ
ಬದುವಿನ ಮ್ಯಾಲ ಬರಾಕಿ ನಮ್ಮ ಮನಿಯಾಕಿರಿ
ನಮ್ಮಾಕಿ ಮಾರಿ ಮ್ಯಾಲ ಹೂನಗಿ ಬಾಳ ಚಂದರೀ
ನೋಡಿ ನಾ ಮೀಸಿ ತಿರವಾವ ರೀ……..……
.
– ಬಸವರಾಜ ಜೋತಿಬಾ ಜಗತಾಪ (ಗೌಡಗಟ್ಟಿ ಬಸವಣ್ಣ)
EXCELLENT
Nimaga Meesi iddaddu “Tiruwaka” Anukoola Aatu.
Illade Iddawaruenu Madabeku,
ಕೃತಕ ಮೀಸಿ ಅದಾವ ರೀ ಸರ್ ಮನ್ನೆ ಉಣಕಲ್ಲದಾಗ ನಮ್ಮ ಕಾಕಾರ ಆಡಿದ “ಐರಾವಣ ಮೈರಾವಣ” ದೊಡ್ಡಾಟದಾನವ ಕೊಡುಸುನಂತ….,ಅವರಿಗೆ ಹೇಳಿ……