ಲೆಮನ್ ಗ್ರಾಸ್ ಚಹಾ..
ಕಾಡುದಾರಿಯ ಚಾರಣದಲ್ಲಿ ಸಿಕ್ಕಿದ ಲೆಮನ್ ಗ್ರಾಸ್ (Lemon grass) ಸಸ್ಯವನ್ನು ಮನೆಯಂಗಳದ ಕೈತೋಟದಲ್ಲಿ ನೆಟ್ಟಿದ್ದೆ. ಈಗ ಅದು ಚಿಗುರಿ ಕಂಪೌಂಡ್ ನ ಎತ್ತರಕ್ಕೆ ಬೆಳೆದಿದೆ. ಅದನ್ನು ಕುದಿಸಿ ಹರ್ಬಲ್ ಟೀ ತಯಾರಿಸೋಣ ಎಂದು ಎಲೆಗಳನ್ನು ಕೀಳಲು ಹೊರಟರೆ, ಎಲೆಗಳು ಕಬ್ಬಿನ ಎಲೆಗಳಂತೆ ಹರಿತವಾಗಿದ್ದುವು. ನಾಜೂಕಿನಿಂದ ಒಂದೆರಡು ಎಲೆಗಳನ್ನು ಬಿಡಿಸಿ, ಸುತ್ತಿ ಕಟ್ಟಿ, ನೀರಿನಲ್ಲಿ ಕುದಿಸಿದಾಗ ಅಡುಗೆಮನೆ ತುಂಬಾ ‘ನಿಂಬೆಹಣ್ಣಿನ’ citrus ಸುವಾಸನೆ ಹಬ್ಬಿತ್ತು.
ಲೆಮನ್ ಗ್ರಾಸ್ ಚಹಾಕ್ಕೆ ಸ್ವಲ್ಪ, ಉಪ್ಪು, ಕಾಳುಮೆಣಸಿನ ಪುಡಿ ಹಾಕಿ ಕುಡಿದಾಗ ರುಚಿ ‘ಪರವಾಗಿಲ್ಲ’ ಎನಿಸಿತು. ಸಿಹಿ ಇಷ್ಟವಿದ್ದರೆ ಉಪ್ಪಿನ ಬದಲು ಸಕ್ಕರೆ ಸೇರಿಸಬಹುದೇನೋ.ಫ್ರಿಜ್ ನಲ್ಲಿಟ್ಟು ತಂಪು ಪಾನೀಯವಾಗಿಯೂ ಕುಡಿಯಬಹುದು.
ಮಾಮೂಲಿ ಚಹಾ ಕುದಿಸುವಾಗ ಲೆಮನ್ ಗ್ರಾಸ್ ನ ಒಂದು ಎಲೆಯನ್ನು ಸೇರಿಸಿದರೂ ವಿಶಿಷ್ಟ ಪರಿಮಳ ಲಭ್ಯ.
– ಹೇಮಮಾಲಾ.ಬಿ
ಮೇಡಂ, ಇದು ಪಿತ್ತ ಮತ್ತು ಕಫಕ್ಕೆ ರಾಮಬಾಣ ,
ಚಿತ್ರ ದಲ್ಲಿ ಇರೊ ಹುಲ್ಲನ್ನ ನೋಡಿದ್ದೆ ಆದ್ರೆ ಅದಕ್ಕೆ Lemon grass ಅಂನ್ತಾರೆ ಮತ್ತು ಅದ್ರಿಂದ ಚಹ ಮಾಡ್ಬೊಹುದು ಅಂತ ಗೊತಿರ್ಲಿಲ್ಲ ತಿಳಿಸಿ ಕೊಟ್ಟಿದಕ್ಕೆ ಧನ್ಯವಾದ ಅಕ್ಕ.
ಚಹಾ ಅಹಾ
ಸೇರಿದರೆ ಲೆಮನ್ ಗ್ರಾಸ್
ಅಹಹಾ ಎಂಥಾ ಸೊಗಸು.
ತಾಜಾ lemon grass ನ್ನು ಸಣ್ಣಗೆ ಕತ್ತರಿಸಿಕೊಳ್ಳಿ. ಸ್ವಲ್ಪ ಹಸಿಶುಂಠಿ ಯನ್ನೂ ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಇವೆರಡನ್ನೂ ಸೇರಿಸಿ ತುಸು ನೀರು ಹಾಕಿ ಮಿಕ್ಸರ್‌ನಲ್ಲಿ ನಯವಾಗಿ ರುಬ್ಬಿ. ಅನಂತರ ಈ ರಸವನ್ನು ಸೋಸಿ ಮಜ್ಜಿಗೆಗೆ ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸವಿಯಿರಿ. ಫ್ರಿಜ್ ನಲ್ಲಿಟ್ಟು ತಣಿಸಿದರೆ ಇನ್ನೂ ಹಿತ.
ರುಬ್ಬುವಾಗ ತುಸು ಕಾಯಿತುರಿಯನ್ನು ಸೇರಿಸಿ ಮೇಲೊಂದು ಸಾಸಿವೆ ಕರಿಬೇವಿನ ಒಗ್ಗರಣೆ ಕೊಟ್ಟರೆ ರುಚಿಯಾದ ತಂಬುಳಿ ಸಿದ್ಧ.