ಸೂಪರ್ ಪಾಕ

ಬಾಜ್ರಾ-ನುಗ್ಗೆಸೊಪ್ಪಿನ ರೊಟ್ಟಿ

Share Button

Bajra-nuggesoppu roti

ಪಕ್ಕದ ಮನೆಯವರು ತಮ್ಮ ಮನೆಯಲ್ಲಿ ಬೆಳೆದ ನುಗ್ಗೆಸೊಪ್ಪನ್ನು ಕೊಟ್ಟಿದ್ದರು. ಅದನ್ನು ತೊಳೆದು ಸಣ್ಣಗೆ ಹೆಚ್ಚಿ, ಬಾಜ್ರಾ ಹಿಟ್ಟು ಬೆರೆಸಿ, ಕ್ಯಾರೆಟ್ ತುರಿ, ಈರುಳ್ಳಿ, ತೆಂಗಿನಕಾಯಿ ತುರಿ, ಹೆಚ್ಚಿದ ಕರಿಬೇವು,ಸ್ವಲ್ಪ ಜೀರಿಗೆ, ಉಪ್ಪು ಸೇರಿಸಿ ಮಸಾಲಾ ರೊಟ್ಟಿಯನ್ನು ತಯಾರಿಸಿದೆ. ರೊಟ್ಟಿಗೆ ನೆಂಚಿಕೊಳ್ಳಲು ಏನು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ.

ಯಾಕೆಂದರೆ ಮಧ್ಯಾಹ್ನದ ಅಡಿಗೆಯಾದ ಹುರುಳಿಕಾಳು ಉಸ್ಲಿ ಮತ್ತು ತೊಂಡೆಕಾಯಿ ಮಜ್ಜಿಗೆಹುಳಿ ಮಿಕ್ಕಿತ್ತು. ಈಗ ಫ್ರೆಶ್ ಚಟ್ಣಿ ತಯಾರಿಸಿದರೆ ನಮ್ಮನ್ನು ‘ಕೇಳುವವರು ಯಾರು? ಆಹಾರ ಪೋಲು ಮಾಡಬಾರದೆಂದು ಗೊತ್ತು ತಾನೇ’ ಎಂದು ಪ್ರಶ್ನಿಸಿದುವು. ಮೇಲಾಗಿ ಅಡಿಗೆಮನೆಯ ಖಾಯಂ ಸದಸ್ಯರಾದ ಉಪ್ಪಿನಕಾಯಿ, ಚಟ್ಣಿ ಪುಡಿ ‘ನಾವಿಲ್ಲವೇ’ ಅಂದುವು. ತಂಗಳು ಡಬ್ಬದಲ್ಲಿರಿಸಿದ ಮೊಸರು ತನ್ನನ್ನು ನೆನಪಿಸಿತು. ಸಿಹಿ ಬೇಕಾದರೆ ಸಾವಯವ ಬೆಲ್ಲದ ಪುಡಿ, ಹಣ್ಣಿನ ಜ್ಯಾಮ್ , ಗುಲ್ಕಂದ್ ಕೂಡ ಸಾಥ್ ಕೊಡಲು ಸಿದ್ಧವಿದ್ದುವು.

ಹೀಗೆ-ಬಿರುದಾಂಕಿತ ಚಟ್ಣಿ ಇಲ್ಲದೆಯೇ, ಬಾಜ್ರಾ ರೊಟ್ಟಿ ಸವಿದೆವು!

Siridhanyagalu

ಕಿರುಧಾನ್ಯಗಳಾದ ನವಣೆ, ಸಜ್ಜೆ, ಸಾಮೆ, ಬರಗು, ಊದಲು, ಹಾರಕ ರಾಗಿ, ಜೋಳ ..ಇವೆಲ್ಲಾ ಸಿರಿಧಾನ್ಯಗಳು. ಇವುಗಳನ್ನು ಬಳಸಿ ಮುದ್ದೆ, ರೊಟ್ಟಿ, ಖಿಚಡಿ, ಪಾಯಸ ಇತ್ಯಾದಿ ತಯಾರಿಸಿ ಉಣ್ಣಬಹುದು. ಈ ಧಾನ್ಯಗಳಲ್ಲಿ ಅಕ್ಕಿ/ಗೋಧಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್, ನಾರಿನಂಶ, ಕಭ್ಭಿಣ, ಕ್ಯಾಲ್ಚಿಯಮ್ ಇರುವುದರಿಂದ ಆರೋಗ್ಯಕ್ಕೆ ಬಹಳ ಉತ್ತಮ.

 

– ಹೇಮಮಾಲಾ.ಬಿ

 

6 Comments on “ಬಾಜ್ರಾ-ನುಗ್ಗೆಸೊಪ್ಪಿನ ರೊಟ್ಟಿ

  1. ಸಾವಯವ ಬೆಲ್ಲದ ಪುಡಿ ಅಂದರೆ ಏನದು ? ಜೋನಿ ಬೆಲ್ಲ ನಾ?

    1. ಜೋನಿ ಬೆಲ್ಲ ಅಲ್ಲ. ಇದು ಬೆಲ್ಲದ ಪುಡಿ. ಮೈಸೂರಿನಲ್ಲಿ ಕೆಲವು ‘ಸಾವಯವ ಅಂಗಡಿ’ಗಳಲ್ಲಿ ಲಭ್ಯವಿರುತ್ತದೆ. ರಾಸಾಯನಿಕ ಗೊಬ್ಬರ ಹಾಕದೆ ಬೆಳೆಸಿದ ಕಬ್ಬಿನಿಂದ ತಯಾರಿಸಲಾದ ಬೆಲ್ಲ ಎಂದು ಹೇಳುತ್ತಾರೆ. ಬೆಲ್ಲ ಕಾಯಿಸುವಾಗಲೂ ರಾಸಾಯನಿಕ ವಸ್ತುಗಳನ್ನು ಬಳಸುವುದಿಲ್ಲ ವಂತೆ. ಇದು ಅಚ್ಚುಬೆಲ್ಲಕ್ಕೆ ಹೋಲಿಸಿದರೆ ಕಪ್ಪು ಬಣ್ಣವಿರುತ್ತದೆ. ಬೆಲೆಯೂ ಸ್ವಲ್ಪ ಹೆಚ್ಚು.

  2. ಭಾಜ್ರಾ ರೊಟ್ಟಿ ತಿಳಿಹಾಸ್ಯ ಲೇಖನ ಮೆಚ್ಚುಗೆಯಾಯಿತು

    1. In Mysore we get such grains at certain shops that sell only organic food items/grains. The shops are ‘Nesara’, ‘ Jeevamruta’. …I do not know if they have branches at other cities.
      We also find some of these grains at shopping malls like Big Bazar, Loyal World etc.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *