ಸ್ವಾಮಿ ಮತ್ತು ಅವನ ಸ್ನೇಹಿತರು
ಶ್ರೀ.ಆರ್.ಕೆ ನಾರಾಯಣ್ ಅವರು ಬರೆದ ಪ್ರಥಮ ಕಥಾ ಸಂಕಲನಗಳ ಗುಚ್ಛ ‘Swamy and Friends’. ಕಥಾಸ್ವರೂಪದಲ್ಲಿ ಇದನ್ನು ಕನ್ನಡಕ್ಕೆ ಅನುವಾದಿಸಿದವರು ಶ್ರೀ. ಎಚ್.ವೈ.ಶಾರದಾ ಪ್ರಸಾದ್ ಅವರು. ನಿನ್ನೆ ‘ಸ್ವಾಮಿ ಮತ್ತು ಅವನ ಸ್ನೇಹಿತರು’ ಪುಸ್ತಕವನ್ನು ಓದಿದೆ.
1930ರ ಆಸುಪಾಸಿನಲ್ಲಿ, ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ. ‘ಮಾಲ್ಗುಡಿ’ ಎಂಬ ಕಾಲ್ಪನಿಕ ಊರಿನಲ್ಲಿ ‘ಸ್ವಾಮಿನಾಥನ್’ ಎಂಬ 10 ವಯಸ್ಸಿನ ಪ್ರಚಂಡ ಬಾಲಕ ತನ್ನ ಗೆಳೆಯರ ತಂಡದೊಂದಿಗೆ ಸೇರಿ ಮಾಡುವ ತುಂಟಾಟಗಳು, ಶಾಲೆಗೆ ಹೋಗದಿರುವುದು, ಮೇಷ್ಟ್ರ ಕಣ್ತಪ್ಪಿಸಲು ಹವಣಿಸುವುದು, ಕ್ರಿಕೆಟ್ ಆಡುವುದು ..ಇತ್ಯಾದಿಗಳ ಹಾಸ್ಯಭರಿತ ನಿರೂಪಣೆ ಇದು. ‘ಸ್ವಾಮಿ’ಯಂಥಹ ಮಕ್ಕಳು ಹಿಂದೆಯೂ ಇದ್ದರೂ, ಈಗಲೂ ಇದ್ದಾರೆ, ಮುಂದೆಯೂ ಇರುತ್ತಾರೆ. ಯಾಕೆಂದರೆ ಅದು ಎಲ್ಲರ ಬಾಲ್ಯ…
ಇದನ್ನು ಕಿರುತೆರೆಯಲ್ಲಿ ಮೇಲೆ ಧಾರಾವಾಹಿಯಾಗಿ ಬಿತ್ತರಿಸಿ ಎಲ್ಲರಿಗೆ ತಲಪುವಂತೆ ಮಾಡಿದ ಕೀರ್ತಿ ನಟ-ನಿರ್ದೇಶಕರಾಗಿದ್ದ ದಿವಂಗತ ಶಂಕರನಾಗ್ ಅವರಿಗೆ ಸಲ್ಲಬೇಕು. 1986 ರಲ್ಲಿ ‘ ಮಾಲ್ಗುಡಿ ಡೇಸ್’ ಎಂಬ ಧಾರಾವಾಹಿ ಪ್ರಸಾರವಾಗುತ್ತಿದ್ದಾಗ ದೂರದರ್ಶನದ ಮುಂದೆ ಎವೆಯಿಕ್ಕದೆ ಕೂರುತ್ತಿದ್ದುದು ಕೆಲವರಿಗಾದರೂ ನೆನಪಿರಬಹುದು.
2014 ನವೆಂಬರ್ 08 ರಂದು, ಮೈಸೂರಿನ ಯೈ.ಎಚ್.ಎ.ಐ ಘಟಕದಿಂದ ಆಯೋಜಿಸಿಲಾಗಿದ್ದ ಚಾರಣ ಕಾರ್ಯಕ್ರಮವೊಂದರ ಭಾಗವಾಗಿ, ಆಗುಂಬೆಯಲ್ಲಿರುವ ‘ದೊಡ್ಡಮನೆ’ಗೂ ಭೇಟಿ ಕೊಟ್ಟು ಅಲ್ಲಿ ಉಂಡು ಬಂದಿದ್ದೆವು. ‘ಮಾಲ್ಗುಡಿ ಡೇಸ್’ ನ ಕೆಲವು ಭಾಗಗಳು ಆ ಮನೆಯಲ್ಲಿ ಚಿತ್ರೀಕರಣಗೊಂಡಿದ್ದುವು.
– ಹೇಮಮಾಲಾ.ಬಿ
whenever I am passing through this big house I recall Malgudi Days serial.
ಈಗಲೂ ಮಾಲ್ಗುಡಿ ಅಂದ್ರೆ ಆಗುಂಬೆನೇ ನೆನಪಿಗ ಬರೋದು.. ಆ ಪುಸ್ತಕ ಓದುವಾಗ ಚಿಲ್ಟಾರಿ ಮಂಜುನೇ ಕಣ್ ಮುಂದೆ ಸುಳಿಯೋದು..
Real ! nostalgic !
ಕೇರಳದ ಹತ್ತನೇ ತರಗತಿಯ ಪಾಠದಲ್ಲಿದೆ ಸ್ವಾಮಿಯ ಕಥೆ .ಈಗ ” ಸ್ವಾಮಿ ಮತ್ತು ಅವನ ಸ್ನೇಹಿತರು ” ಪುಸ್ತಕ ನನ್ನ ಕೈಲಿದೆ . ಬಹು ಚೆನ್ನಾಗಿದೆ .
Hello sister pls text book kannda language Haa