ಎಲ್ಲರಿಗೂ ಯುಗಾದಿಯ ಶುಭಾಶಯಗಳು.
ಇಂದು ಸಾಂಪ್ರದಾಯಿಕವಾಗಿ ಹೊಸ ವರ್ಷವನ್ನು ಸ್ವಾಗತಿಸುವ ದಿನ. ಕರ್ನಾಟಕದಲ್ಲಿ ಯುಗಾದಿ, ನೆರೆಯ ಕೇರಳ ರಾಜ್ಯದಲ್ಲಿ ವಿಷು, ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ, ಉತ್ತರದ ಪಂಜಾಬಿನಲ್ಲಿ ವೈಶಾಖಿ ಹೀಗೆ ಹಲವಾರು ಹೆಸರಿನಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ತಾವು ಅನುಸರಿಸುವ ಚಾಂದ್ರಮಾನ, ಸೌರಮಾನ ಅಥವಾ ಬೃಹಸ್ಪತಿ ಕ್ಯಾಲೆಂಡರ್ ನ ಅನ್ವಯ ದಿನಾಂಕಗಳೂ ಬೇರೆ ಬೇರೆ ಆಗಿರುತ್ತವೆ.
ಆದರೆ ಎಲ್ಲರ ಉದ್ದೇಶಗಳು ಒಂದೆ. ಜೀವನದ ಸಿಹಿ-ಕಹಿಗಳನ್ನು ಸಮಾನವಾಗಿ ಸ್ವೀಕರಿಸಬೇಕು ಮತ್ತು ಲೋಕಾ: ಸಮಸ್ತಾ: ಸುಖಿನೋ ಭವಂತು!
‘ಮನ್ಮಥ’ ಸಂವತ್ಸರ ಎಲ್ಲರಿಗೂ ಶುಭ ತರಲಿ ಎಂದು ಆಶಿಸುತ್ತೇವೆ. ಶ್ರೀ ದ.ರಾ. ಬೇಂದ್ರೆ ಯವರು ರಚಿಸಿದ ಚಿರನೂತನ ಹಾಡು ‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ …” ಹಾಡಿನ ಧ್ವನಿ ಮುದ್ರಣ ಇಲ್ಲಿದೆ. ಕೇಳಿ ಅನಂದಿಸಿ.
– ಸಂಪಾದಕಿ.