ನನಗರಿವಿಲ್ಲದೆ ?
ನನ್ನ ಕಣ್ಣುಗಳು
ಹುಡುಕುತ್ತವೆ ಯಾರನ್ನೋ .
ಜನರ ಮಧ್ಯೆ,ನನಗರಿವಿಲ್ಲದೆ ?
ನನ್ನ ಕೈಗಳು
ಏನೋ ಬರೆಯುತ್ತವೆ,
ಯಾರಿಗಾಗಿಯೋ ,ನನಗರಿವಿಲ್ಲದೆ ?
ನನ್ನ ಮನಸ್ಸಿಗೆ
ಹಿತವಾಗುತ್ತದೆ.,ಕಣ್ಣಿಗೆ ತಂಪಾಗುತ್ತದೆ,
ನೋಡ,ನೋಡುತ್ತಲೇ ಕೆಲವರ ,ನನಗರಿವಿಲ್ಲದೆ ?
ನನಗೆ ಸಿಟ್ಟು ಬರುತ್ತದೆ.
ಮೈಯುರಿತ್ತದೆ,ಮೈಮೇಲೆ
ಹಾವು ಹರಿದಂತಾಗುತ್ತದೆ,
ಕೆಲವರ ನೋಡುತ್ತಲೇ, ನನಗರಿವಿಲ್ಲದೇ ?
ನನ್ನ ತುಟಿ
ಬಿರಿಯುತ್ತವೆ,,ಮಾತು ತೊದಲುತ್ತವೆ,
ಕಾಲು ನಡುಗುತ್ತವೆ,ಕೆಲವರೆದುರು
ಮಾತ್ರ, ನನಗರಿವಿಲ್ಲದೆ ?
ಗೌರವ ಕೊಡಬೇಕೆನಿಸುತ್ತದೆ,
ಕೈ ಮುಗಿದು ನಮಿಸಬೇಕೆನಿಸುತ್ತದೆ,
ಕೆಲವರ ನೋಡಿದಾಗ, ನನಗರಿವಿಲ್ಲದೆ ?
– ಎಚ್ ಆರ್ ಕೃಷ್ಣಮೂರ್ತಿ
ಕವನ ಚೆನ್ನಾಗಿದೆ.