ಎಚ್ಚೆತ್ತ ಚೇತನ

Share Button

 

Nishkala Gorur

– ನಿಷ್ಕಲಾ ಗೊರೂರು

12-01-1862 ಇತಿಹಾಸ ಎಂದೂ ಮರೆಯಲಾರದ ದಿನ. ಅಂದು ಭಾರತೀಯ ಸನಾತನ ಸಂಸ್ಕೃತಿಯ ಪುನರುಸ್ಥಾನದ ಹರಿಕಾರ, ಅಪ್ರತಿಮ ವಾಗ್ಮಿ  ಅನುಪಮ ಮಾನವತಾವಾದಿ ಸ್ವಾಮಿ ವಿವೇಕಾನಂದರ 152 ನೇ ವರ್ಷಾಚರಣೆಯಲ್ಲಿದ್ದೇವೆ. ಯುವ ಜನರಿಗೆ ಪ್ರೇರಕ ಶಕ್ತಿಯಾದ, ನವ ಚೈತನ್ಯದ ಚಿಲುಮೆಯಾದ ವಿವೇಕಾನಂದರನ್ನು ಲೇಖನವೊಂದರಲ್ಲಿ ಹಿಡಿದಿಡುವುದು ಅಸಾಧ್ಯದ ಮಾತು.  ಆದರೂ ಅವರ ಬಗ್ಗೆ ಹೇಳುವ ಹಂಬಲದಿಂದ ಅವರ ಅಸಾಧಾರಣ ವ್ಯಕ್ತಿತ್ವದ ಕಿರು ಪರಿಚಯ ಮಾಡಿಸುವ ಪ್ರಯತ್ನ ಇದು.

ಇಡೀ ಮನುಕುಲಕ್ಕೆ ಯುವ ಜನತೆಗೆ ಆದರ್ಶ ಪ್ರಾಯರಾದ ಸ್ವಾಮಿ ವಿವೇಕಾನಂದರ ಸಾಧನೆಯಾದರೂ ಏನು? ಅವರನ್ನೇಕೆ ವಿಶ್ವ ಸ್ಮರಿಸುತ್ತದೆ? ಇದನ್ನು ಭಾರತೀಯರಾದ ಪ್ರತಿಯೊಬ್ಬರೂ ತಿಳಿಯಲೇ ಬೇಕು. ಅದು ನಮ್ಮ ಕರ್ತವ್ಯ. ನಮ್ಮ ರಾಷ್ಟ್ರ ಗೀತೆ ಬರೆದಂತ ರವೀಂದ್ರನಾಥ ಟಾಗೂರರು ಒಂದು ಮಾತು ಹೇಳಿದ್ದಾರೆ ‘ಶ್ರೀಕೃಷ್ಣನನ್ನು ಅರಿಯಬೇಕಾದರೆ ಭಗವದ್ಗೀತೆಯನ್ನು ಓದಿ, ಭಾರತವನ್ನು ತಿಳಿಯಬೇಕಾದರೆ ಸ್ವಾಮಿ ವಿವೇಕಾನಂದರನ್ನು ಓದಿ ಎಂದು. ಅಂದರೆ ಸ್ವಾಮೀಜಿ ಅವರ ಬದುಕೇ ಇಡೀ ಭಾರತದ  ಚಿತ್ರಣ.

 

Vivekanandaಸ್ವಾಮೀಜಿ ಅವರ ಬಗ್ಗೆ ನಮ್ಮ ರಾಷ್ಟ್ರ ಕವಿ ಕುವೆಂಪು ಹೀಗೆ ಹೇಳುತ್ತಾರೆ ಭಾರತದ ಪುನರುತ್ಥಾನದ ಪ್ರಥಮ ಮಹೂರ್ತದಲ್ಲಿ ಸ್ವಾಮಿ ವಿವೇಕಾನಂದರ ಪಾಂಚಜನ್ನಸದೃಶವಾದ ಧೀರ ಮತ್ತು ಶಕ್ತಿ ಸಂಚಾರಕ ಸಿದ್ಧಿವಾಣೀ ಏನು ಕೆಲಸ ಮಾಡಿತು ಎಂಬುದನ್ನು ಅಳೆಯಲಾದೀತೆ ? ವ್ಯಕ್ತಿ-ವ್ಯಕ್ತಿಗಳಲ್ಲಿ ಮತ್ತು ರಾಷ್ಟ್ರ ಸಮಗ್ರದಲ್ಲಿ ಸುರುಳಿ ಸುತ್ತಿ ಸುಪ್ರವಾಗಿದ್ದ ಕುಂಡಾಲಿನೀ ಶಕ್ತಿಯನ್ನು ಅವರು ಹೀಗೆ ಎಚ್ಚರಿಸಿ ಕಾರ್ಯಶೀಲವನ್ನಾಗಿ ಮಾಡಿದರು ಎಂಬುದು ಅರಿಯಬೇಕಾಗಿದೆ ಅವರ ಜೀವನ ಮುಂದೆ ಧ್ಯಾನಸ್ಥರಾಗಬೇಕಾಗುತ್ತದೆ; ಅವರ ಕೃತಿ ಅಧ್ಯಯನವೇ ನಮ್ಮ ತಪಸ್ಸಾಗಿರಬೇಕು.

ಇನ್ನು ಸಾಮೀಜಿರವರ ಬಗ್ಗೆ ತಿಳಿಯಬೇಕೆಂದರೆ ಅವರು ಹುಟ್ಟು ಸನ್ಯಾಸಿಯಲ್ಲ. ಅವರು ಈ ವಿಶ್ವವ ಸೆಳೆದಿದ್ದು ಕೇವಲ 7 ( 1893 -1900) ವರ್ಷಗಳ ಅವಧಿಯಲ್ಲಿ.
ಆ ಸಪ್ತ ವರ್ಷದಲ್ಲಿ ಅವರ ಖ್ಯಾತಿ, ಕೀರ್ತಿ ಇಡೀ ವಿಶ್ವವನ್ನೇ ಹಬ್ಬಿತು. ವಿಶ್ವ ಧರ್ಮ ಸಮ್ಮೇಳನದಲ್ಲಿ ಪಾಲ್ಗೋಂಡ ಬಳಿಕ ಅಮೆರಿಕ, ಇಂಗ್ಲೆಂಡ್, ಯುರೋಪ್ ಹಾಗೂ ಭಾರತದಲ್ಲಿ ಅವರು ಮಾಡಿದ ಭಾಷಣ, ಅವರ ಪತ್ರಗಳು, ಅವರು ನೆಡೆಸಿದ ಚರ್ಚೆಗಳು ಇಂದಿಗೂ ಆಕಾರ ಗ್ರಂಥಗಳಾಗಿವೆ. ಹೇಗಾಗಿಯೇ ವಿಶ್ವ ಅವರನ್ನು ಯುಗಾಚಾರ್ಯ ಎಂದು ಗುರುತಿಸುವುದು.

1863 – 1902 ರ ಅವಧಿಯಲ್ಲಿ ಈ ಭೂಮಿಗೆ ಭೇಟಿ ನೀಡಿದ್ದ ಅದಮ್ಯ ಚೇತನ ಸ್ವಾಮಿ ವಿವೇಕಾನಂದರು, ಭಾರತೀಯ ಸನಾತನ ಸಂಸ್ಕೃತಿಯ ಹರಿಕಾರ. ಆಧುನಿಕ ಯುಗದ ಅಗತ್ಯಗಳಿಗೆ ಅನುಗುಣವಾಗಿ, ನವ ವಿಶ್ವದ ನೂತನ ಪ್ರಶ್ನೆಗಳಿಗೂ ಉತ್ತರ ಕೊಟ್ಟು ಬಾಳುವಷ್ಟು ಮೌಲ್ಯಗಳು ಖಂಡಿತವಾಗಿಯೂ ಹಿಂದೂ ಧರ್ಮದಲ್ಲಿದೆ ಎಂದು ಪ್ರತಿಪಾದಿಸಿದ ಧರ್ಮೋದ್ಧಾರಕ, ಅಪ್ರತಿಮ ವಾಗ್ಮಿ, ಮಾನವತಾವಾದಿ ವಿವೇಕಾನಂದರು.

ವಿವೇಕಾನಂದರ ಪೂರ್ವಶ್ರಮದ ಹೆಸರು ನರೇಂದ್ರನಾಥ ದತ್ತ. ಕೋಲ್ಕತ್ತಾದಲ್ಲಿ 1863  ಜನವರಿ 12 ರಂದು ಪುಷ್ಯ ಸಂಕ್ರಾಂತಿಯ ದಿನ ಪುಣ್ಯ ಪ್ರಭಾತದಲ್ಲಿ ಸಾಧ್ವಿ ಭುವನೇಶ್ವರಿ ದೇವಿ ಅವರ ಪುತ್ರನಾಗಿ ಜನಿಸಿದ ನರೇಂದ್ರರು ಯುವಜನರ ಪಾಲಿಗೆ ಮಹಾ ಚೈತನ್ಯ ಮೂರ್ತಿ. ನರೇಂದ್ರರ ತಂದೆ ವಿಶ್ವನಾಥ ದತ್ತರು ಅಂದಿನ ಕಾಲದಲ್ಲಿಯೇ ಹೈಕೋರ್ಟ್ ಆಟಾರ್ನಿಯಾಗಿದ್ದರು. ಪ್ರತಿಷ್ಠಿತ ಮನೆತನೆದಲ್ಲಿ ಹುಟ್ಟಿ, ಇಂಗ್ಲೀಷ್ ಸಾಹಿತ್ಯ, ಸಂಗೀತಗಳನ್ನೂ ಕಲಿತ ನರೇಂದ್ರರು ಸಾಮಾನ್ಯರಂತೇ ಇದ್ದರು. ಅವರೇನು ಪವಾಡ ಪುರುಷರಲ್ಲ. ತಮ್ಮ 21 ನೇ ವಯಸ್ಸಿನಲ್ಲಿ ತಂದೆ ನಿಧನರಾದಾಗ, ಅವರ ಸಂಸಾರ ಸಾಲದ ಶೂಲಕ್ಕೆ ಸಿಲುಕಿ ಕಷ್ಟ ಅನಿಭವಿಸಿತ್ತು. ಆ ಎಲ್ಲ ನೋವು- ನಲಿವುಗಳನ್ನು ನರೇಂದ್ರರು ಅನುಭವಿಸಿದ್ದರು.

ನರೇಂದ್ರರು ಬಾಲ್ಯದಿಂದಲೂ ಎಲ್ಲ ಮಕ್ಕಳಂತೆ ಆಡಿ, ಹಾಡಿ ಬೆಳೆದವರು. ಆಟ, ಪಾಠ, ಗಾಯನ, ಗರಡಿ ಸಾಧನೆಯಲ್ಲಿ ನಿಸ್ಸೀಮ. ನಿರ್ಭೀತ ಮನೋಭಾವದ ನರೇಂದ್ರರು ಯಾವುದನ್ನು ಸುಲಭವಾಗಿ ಒಪ್ಪುತ್ತಿರಲ್ಲ. ಎಲ್ಲವನ್ನು ಪ್ರಶ್ನಿಸುವ ಮನೋಭಾವ ಹೊಂದಿದ್ದರು.

ಬಾಲ್ಯದಿಂದಲೇ ದೇವರ ಅನ್ವೇಷಣೆಯಲ್ಲಿ ತೊಡಗಿದ್ದ ನರೇಂದ್ರದತ್ತರು, ದೇವರಿದ್ದಾನೆಯೇ? ಅವನಿದ್ದಲ್ಲಿ ಅವನು ಯಾರ ರೀತಿ ಇದ್ದಾನೆ? ಇದ್ದರೆ ನಮಗೇಕೆ ಕಾಣುವುದಿಲ್ಲ? ಮನುಷ್ಯನೊಂದಿಗೆ ಅವನ ಸಂಬಂಧವೇನು? ಎಲ್ಲೆಲ್ಲೂ ಅಕ್ರಮ, ಅನ್ಯಾಯ ತುಂಬಿರುವ ಈ ವಿಶ್ವವನ್ನು ಅವನು ನಿರ್ಮಿಸಿದನೇಕೆ? ಆತ್ಮನಿದ್ದಾನೆಯೇ? ಇದ್ದರೆ ಆತ್ಮನನ್ನು ಅನುಭವಿಸುವುದು ಹೇಗೆ? ಅವನು ಏಕೆ ನಮ್ಮ ಅನುಭವಕ್ಕೆ ಬರುವುದಿಲ್ಲ? ಎಂಬಿತ್ಯಾದಿ ಪ್ರಶ್ನೆ ಕೇಳಿ ತಾಯಿ, ತಂದೆ, ಗುರುಗಳಿಗೆ ಇರುಸು ಮುರುಸು ಉಂಟು ಮಾಡುತ್ತಿದ್ದರು. ಒಂದು ದಿನ ಬೆಳೆಗ್ಗೆ ತಾಯಿಗೆ ಹನುಮಂತ ಎಲ್ಲಿದ್ದಾನೆ ತೋರಿಸು ಎಂದು ಹಠ ಹಿಡಿದರು, ಆಗ ತಾಯಿ ಊರಾಚಿನ ಬಾಳೆ ತೋಟದಲ್ಲಿದ್ದಾನೆ ಎಂದು ಹೇಳಿ ಕಾಟ ತಪ್ಪಿಸಿಕೊಂಡರು. ಆದರೆ ತಾಯಿಯ ಮಾತನ್ನು ವೇದ ವಾಕ್ಯ ಎಂದು ತಿಳಿದ ನರೇಂದ್ರರು ಬಾಳಿಯ ತೋಟಕ್ಕೆ ಹೋಗಿ ಹುಡುಕಾಟನೆಡಸಿದರು, ಹನುಮನಿಗಾಗಿ ಕಾದು ಕುಳಿತರು. ಸಂಜೆಯಾಯಿತು, ರಾತ್ರಿಯಾಯಿತು ವಿಚಲಿತರಾಗದೆ ಆಂಜನೇಯ ಬಂದೇ ಬರುತ್ತಾನೆ ಎಂದು ನಿರಿಕ್ಷಿಸಿದರು ರಾತ್ರಿಯಾದರೂ ಮಗ ಮನೆಗೆ ಬಾರದಿದ್ದಾಗ ಗಾಬರಿಗೊಂಡ ತಾಯಿ ತೋಟಕ್ಕೆ ಹೋಗಿ ಏನೂ ಸಾಮಾಧಾನ ಪಡಿಸಿ ಮನೆಗೆ ಕರೆತಂದರು. ದೇವರ ಬಗ್ಗೆ ಮಗನಿಗಿದ್ದ ನಂಬಿಕೆಯನ್ನು ನೋಡಿ ತಾಯಿ ಅವಕ್ಕಾಗಿದ್ದರು.

ಹೀಗೆ ಭಗವಂತನ ಅನ್ವೇಷಣೆಯಲ್ಲಿ ನರೇಂದ್ರರಿಗೆ ಭಗವಂತನಿದ್ದಾನೆಂಬ ಉತ್ತರ ಸಿಕ್ಕಿದ್ದು, ಭಗವತ್ ಸಾಕ್ಷಾತ್ಕಾರವಗಿದ್ದು ದಕ್ಷಿಣೇಶ್ವರದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಶಿಶ್ಯರಾದ ಬಳಿಕ. ಕಾಳಿದೇವಿಯನ್ನು ದೇವರೆಂದು ಒಪ್ಪಿದ ನರೇಂದ್ರರರನ್ನು 1886 ರಲ್ಲಿ ಪರಮಹಂಸರು ಕೆಲಕಾಲ ನಿರ್ವಿಕಲ್ಪ ಸಮಾಧಿ ಸ್ಥಿತಿಯಲ್ಲಿರಿಸಿ ದೈವಸಾಕ್ಷಾತ್ಕಾರ ಮಾಡಿಸಿದ್ದರು.

Vivekananda - Paramahamsa

1887 ರ ಜನವರಿಯಲ್ಲಿ ಸನ್ಯಾಸ ಸ್ವೀಕರಿಸಿದ ನರೇಂದ್ರರರು ಮೊದಲಿಗೆ ಸಚ್ಚಿದಾನಂದ ಎಂಬ ಹೆಸರು ಪಡೆದರು, ನಂತರ ವಿವಿದೇಶಾನಂದ ಎಂಬ ಹೆಸರು ಪಡೆದು ದೇಶ ಪರ್ಯಟನೆ ಮಾಡಿದರು. 1892 ರಲ್ಲಿ ಕನಾಕುಮಾರಿಗೆ ಬಂದು ಕೊರೆಯುವ ಚಳಿಯಲ್ಲಿ ಸಮುದ್ರದಲ್ಲಿ ಈಜಿ ಕನ್ಯಾಕುಮಾರಿಯ ಒಂದು ಬಂಡೆಯ ಮೇಲೆ ಶಿಲೆಯಂತೆ ನಿಂತು ಅಖಂಡ ಭಾರತವನ್ನು ಅಡಿಯಿಂದ ಮುಡಿಯವರೆಗೆ ದರ್ಶಿಸಿದರು. ಅಮೆರಿಕಾದಲ್ಲಿ ನೆಡೆಯುವ ವಿಶ್ವ ಧರ್ಮ ಸಮ್ಮಳನದಲ್ಲಿ ಪಾಲ್ಗೊಳ್ಳಲು ನಿರ್ಧಸಿದರು. ಆ ವಿದೇಶ ಪ್ರವಾಸಕ್ಕೆ ನೆರವು ನೀಡಿದ ಖೇತಡಿಯ ಮಹಾರಾಜ ಅಜಿತ್ ಸಿಂಹ ತಮ್ಮಲ್ಲಿ ವಿವೇಕವನ್ನು ಮತ್ತು ದರಿದ್ರ ನಾರಾಯಣನ ಸೇವೆಯಲ್ಲಿ ಆನಂದವನ್ನು ಪಡೆಯುತ್ತಿದ್ದ ವಿವಿದೇಶಾನಂದರಿಗೆ ವಿವೇಕಾನಂದ ಎಂಬ ಹೆಸರು ನೀಡಿದರು.

ಅಜಿತ ಸಿಂಹ ಆರ್ಥಿಕ ನೆರವು ಪಡೆದು 1893 ರ ಮೇ 31 ರಂದು ಮುಂಬೈ ಬಂದರಿನಿಂದ ಹೊರಟು ಚೀನಾ, ಹಾಂಕಾಂಗ್ ಮತ್ತು ಜಪಾನ್ ಮಾರ್ಗವಾಗಿ ಅಮೆರಿಕಕ್ಕೆ ತಲುಪಿದ ವಿವೇಕಾನಂದರು, 1892 ರ ಸೆಪ್ಟೆಂಬರ್ 11 ರಂದು ಸೋಮವಾರ ಶಿಕಾಗೋ ನಗರದಲ್ಲಿ ನೆಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಕೇವಲ 3 ನಿಮಿಷದ ಭಾಷಣದಲ್ಲಿ ವಿಶ್ವಾದ್ಯಂತ ಪ್ರಸಿದ್ಧರಾದರು. ಭಾರತದ ಸನಾತನ ಧರ್ಮದ ಹಿರಿಮೆ ವಿಶ್ವಕ್ಕೆ ತಿಳಿಯಿತು.

Vivekananda_Image_August_1894

ಅಗಸ್ಟ್ 1894 ರಲ್ಲಿ ವಿವೇಕಾನಂದರು

ವಿಶ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮೀಜಿ ಭಾಷಣ ಕೇಳಿದ ಬಳಿಕ ಅಮೆರಿಕದ ಪ್ರಮುಖ ಪತ್ರಿಕೆಯೊಂದು ಹೀಗೆ ಬರೆಯಿತು ‘ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರೆ ಶ್ರೇಷ್ಠ ವ್ಯಕ್ತಿ. ಅವರ ಭಾಷಣ ಕೇಳಿದ ಬಳಿಕ ಇಂತಹ ಸುಸಂಸ್ಕೃತರ ದೇಶಕ್ಕೆ ನಾವು ಧರ್ಮ ಪ್ರಚಾರಕರನ್ನು ಕಳಿಹಿಸುವುದು ಮೂರ್ಖತನವಾದೀತು’. ಸ್ವಾಮೀಜಿಯವರ ಭಾಷಣ ಭಾರತದ ಮೇಲೆ ಇಡೀ ವಿಶ್ವ ಸಮುದಾಯಲ್ಲಿದ್ದ ತಪ್ಪು ಕಲ್ಪನೆಗಳು ದೂರ ಮಾಡಿತು. ಇಡೀ ವಿಶ್ವವೇ ಭಾರತದತ್ತ ಗೌರವದಿಂದ ನೋಡುವಂತೆ ಮಾಡಿತು.

ಸ್ವಾಮೀಜಿಯ ಆ ಯೋಚನೆಗಳನ್ನು ಈಗಲು ಕೇಳಿದರೆ ನಮ್ಮಲ್ಲೇ ಏನೊ ಒಂದು ಕಾಂತಿ ಮೂಡುತ್ತದೆ. “ಏಳಿ ಎದ್ದೇಳಿಗುರಿ ಮುಟ್ಟುವ ತನಕ ನಿಲ್ಲದಿರಿ” ಎಂದು ಯುವಕರಿಗೆ ಕರೆಕೊಟ್ಟ ವಿವೇಕಾನಂದರಿಗೆ ಯುವಶಕ್ತಿಯ ಮೇಲೆ ಅಪಾರವಾದ ನಂಬಿಕೆ ಇತ್ತು. ಯುವಶಕ್ತಿಗಿಂತ ಮಿಗಿಲಾದುದ್ದು ಯಾವುದು ಇಲ್ಲ. ನನಗೆ 100  ಜನ ಗಟ್ಟಿ ಮುಟ್ಟಾದ ಯುವಕರನ್ನು ಕೊಡಿ ನಾವು ನವಭಾರತವನ್ನು ನಿರ್ಮಾಣ ಮಾಡುತ್ತೇನೆ ಎನ್ನುತ್ತಿದ್ದರು ಸ್ವಾಮೀಜಿ. ಯುವಕರು ಹೇಡಿಗಳಾಗಬಾರದು, ನೀವೂ ಎಂದೂ ಪರಾವಲಂಬಿಗಳಲ್ಲ, ನಿಮ್ಮ ಬದುಕಿನ ಶಿಲ್ಪಿಗಳು ನೀವೇ ಎಂದು ಸ್ವಾಮೀಜಿ ಅವರು ಯುವಜನರಿಗೆ ನೀಡಿರುವ ಒಂದೊಂದು ಸಂದೇಶವು ಒಂದೊಂದು ಬದುಕುವ ಧರ್ಮ.

ಹೀಗಾಗಿಯೇ ವಿವೇಕಾನಂದರ ಹೆಸರು ಕೇಳಿದಾಕ್ಷಣ ಮೈ ಪುಳಕಿತವಾಗುತ್ತದೆ, ವಿದ್ಯುತ್ ಸಂಚಾರವಾದ ಅನುಭವ ಉಂಟಾಗುತ್ತದೆ. ಇಂಥಹ ಮಹಾನ್ ವ್ಯಕ್ತಿಯ ಜೀವನ ಚೆರಿತ್ರೆ ಓದಿದರೆ ಯುವಕರಲ್ಲಿ ದೇಶಭಕ್ತಿ, ರಾಷ್ಟ್ರ ಪ್ರಜ್ಙೆ, ಸ್ವಾವಲಂಬನೆ, ಆತ್ಮಾಭಿಮಾನ ಮೂಡುತ್ತದೆ. ನಿಮ್ಮ ಜೀವನದ ಶಿಲ್ಪಿಗಳು ನೀವಾಗಬೇಕೆಂದರೆ ವಿವೇಕಾನಂದರನ್ನು ಓದಿ.

 

– ನಿಷ್ಕಲಾ ಗೊರೂರು

 

5 Responses

  1. Shruthi Sharma says:

    ಉತ್ತಮ ಮಾಹಿತಿ, ಸೊಗಸಾದ ನಿರೂಪಣೆ.. 🙂

  2. Pushpa Nagathihalli says:

    ಸ್ವಾಮಿ ವಿವೇಕಾನಂದರ. ಜೀವನಕ್ರಮ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಆದರ್ಶ ನೀಯವಾಗಿದೆ.ಅವರು ಭಾರತಕ್ಕೆ ಮುಕುಟಪ್ರಾಯರಾಗಿದ್ದಾರೆ. ೧೫೨ನೇ ವರ್ಷಾಚರಣೆಗೆ ಗೊರೂರುನಿಷ್ಕಲಾರವರ. ಈಲೇಖನ ಸಮಯೋಚಿತವಾಗಿದೆ.ವಂದನೆಗಳು

  3. Dinesh Naik says:

    VERY NICE

  4. Keshava Narayana says:

    Thumba Chennagidhe

  5. Adarsha says:

    ಸ್ವಾಮೀಜಿಯವರ ಪ್ರೇರಕ ಶಕ್ತಿ ಶ್ರೀ ರಾಮಕೃಷ್ಣರು. ರಾಮಕೃಷ್ಣರನ್ನು ಅರ್ಥೈಸಿಕೊಂಡು, ಅವರ ತತ್ವಾರ್ಥಗಳನ್ನು ಅರಗಿಸಿಕೊಳ್ಳುವ ಶಕ್ತಿ ಕೇವಲ ಸ್ವಾಮೀಜಿಯವರಿಗೆ ಮಾತ್ರ ಇತ್ತು ಎನ್ನುವುದು ಸ್ಪಷ್ಟ. ಸ್ವಾಮಿಜಿಯವರು ರಾಮಕೃಷ್ಣರ ಮುಖವಾಣಿಯಾದರು ಎಂದರೆ ತಪ್ಪೇನಿಲ್ಲ. ಸ್ವಾಮಿಜಿಯರೂ ಕೂಡ ವಿಚಾರವನ್ನು ಹಲವಾರು ಬಾರಿ ಪ್ರಸ್ತಾಪಿಸಿದ್ದುಂಟು. ಆದರ್ಶ ಗುರು-ಶಿಷ್ಯ ಪರಂಪರೆಗೆ ಇದೊಂದು ಭವ್ಯ ಉದಾಹರಣೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: