ಬೆಳಕು-ಬಳ್ಳಿ

ಕುಂತಿಯ ಒಡಲು

Share Button
Pushpa Nagatihalli
ಪುಷ್ಪಾ ನಾಗತಿಹಳ್ಳಿ

 

 

ದಟ್ಟಡವಿ  ಕಾಡುಪ್ರಾಣಿ ,ಮುಳ್ಳುಗಳ ಸರಮಾಲೆ
ಪಾದುಕೆಗಳೇ ಇಲ್ಲದ ಕಾಲುಗಳು
ನೊರಜುಕಲ್ಲುಗಳ ಮೇಲೆ.
ಐವರು ಶೂರಪುತ್ರರಿದ್ದರೂ,
ರಕ್ಕಸರ ಭಯದ ನೆರಳಿನ ಮಾಲೆ
ಎದೆಯುದ್ದ ಬೆಳೆದ ಮಕ್ಕಳನು ಸೆರಗಿನಲಿ ಮುಚ್ಚಿಡಲಾರದೆ
ಯಾವ ಊರು ಯಾವ ಕೇರಿ ಸುತ್ತಿದೆಯೋ!

ಕಿರಿಚಿದ್ದು ಅರಚಿದ್ದು ಬಿಕ್ಕಿದ್ದು ಎಷ್ಟೋ ಸಾರಿ
ನಕ್ಕಿದ್ದು  ಎಷ್ಟು ಸಾರಿ?
ಐವರ ಹೊಟ್ಟೆ ತುಂಬಿಸಲು ತಡಕಿದ್ದೇನು… ಹುಡುಕಿದ್ದೇನು…  ತನಗಾಗಿ ತಳದಲ್ಲಿ
ಉಳಿದದ್ದೇನು?
ಬತ್ತಿಹೋದ ಒಡಲಿಂದ. ಬಿಸಿಯುಸಿರ
ಹೊರಹೊಮ್ಮಿದ್ದೇನು!

kunti pandavasಒಂದಲ್ಲ ಎರಡಲ್ಲ ಹದಿಮೂರು ವರ್ಷಗಳು
ಐವರನು ಕಾಯುತ್ತಾ ಕಣ್ಣಿಗೆ  ಎಣ್ಣೆ  ಬಿಟ್ಟಂತೆ
ಕತ್ತಲಲ್ಲಿ  ಬೆಳಕನ್ನು  ಹುಡುಕುತ್ತಾ
ಕುಳಿತವಳಿಗೆ
ಸಿಕ್ಕಿದ್ದೇನು? ದಕ್ಕಿದ್ದೇನು?
ಕಾದ ರಾಜ್ಯ ಸಿಕ್ಕದಾ ರಾಜ್ಯ
ಗೋರಿಗಳೊಳಗೆ ನಗುತ್ತಿರುವ
ಪಿಶಾಚಿಗಳ ಸಾಮ್ರಾಜ್ಯ
ಸುತ್ತಿಕೊಂಡಾ ಬಳ್ಳಿ  ,ಹತ್ತಿಕೊಂಡಾ ಬೆಂಕಿ
ದಿನವೂ ಸುಟ್ಟುಹೋದ ಜೀವ
ಸುಡಲೆಲ್ಲಿತ್ತು ನಿನ್ನೊಳಗಿನ ಭಾವ.,
ವಿಶ್ವವನ್ನೇ ಕಲಕಿದ ಜೀವ.

 

– ಪುಷ್ಪಾ ನಾಗತಿಹಳ್ಳಿ.

One comment on “ಕುಂತಿಯ ಒಡಲು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *