ಅಳಲು
ನಿರ್ಭಾವುಕ ಜಡ ಜಗತ್ತಿನಲ್ಲಿ
ಕಲ್ಲಾಗಿ ಕುಂತಿಹ ನೀನು
ನನ್ನಲ್ಲೇಕೆ ಜೀವ ತುಂಬಿದೆ!!
ಸ್ವಹಿತ ಸ್ವಾರ್ಥಿಗಳ ಪ್ರಪಂಚದಲ್ಲಿ
ಕಣ್ಮುಚ್ಚಿ ಕುಳಿತ ನೀನು
ನನ್ನಲ್ಲೇಕೆ ಪರಹಿತದ ಭಾವ ತುಂಬಿದೆ!!
ಜಗತ್ತೆಂಬ ನಾಟಕ ರಂಗದಲ್ಲಿ
ಅನಂತನಾದ ನೀನು ಈ..
ಅತಿರೇಕವನ್ನು ನೋಡದಾದೆಯಾ!!
ನನ್ನ ಒಡಲಾಳದ ನೋವು
ಕಣ್ಣೀರ ಕಡಲಾಗಿ ಹರಿದರೂ
ನೀ ಕಠಿಣ ಪರ್ವತವಾದೆಯಲ್ಲ!!
ಆಸೆ, ಬಯಕೆ, ಕನಸುಗಳೆಂಬ
ಭಾವನೆಗಳನೆಲ್ಲ ಮನಸಲ್ಲಿ ತುಂಬಿದ
ನಿನಗೆನ್ನ “ಅಳಲು” ಅರ್ಥವಾಗದೇ ಹೋಯಿತಲ್ಲ!!!
– ನಿರ್ಮಲಾ ಹೆಗಡೆ, ಗೋಳಿಕೊಪ್ಪ.
ಉತ್ತಮ ಕವನ.