ಸುರಹೊನ್ನೆ-ಸುರಗಿ…ಎಂಥಹಾ ಸುಂದರ ಹೆಸರು!!
ಜಾಲತಾಣಗಳಲ್ಲಿ ಒಂದು ದಿನ ಹೀಗೆ ಕಣ್ಣಾಡಿಸುತ್ತಿದ್ದೆ,ನಿನ್ನ ನಾ ಕಂಡೆ. ‘ಸುರಗಿ’ ಅನ್ನುವುದು ಒಂದು ಸುಂದರ ಜ್ಞಾನ ಲೋಕ. ಯಾಕೋ ನಿನ್ನೊಳಗೆ ಪ್ರವೇಶಿಸೋಣವೆಂದು ಅನಿಸಿತು.ಆಕರ್ಷಿಸಿತು,ನಿನ್ನ ಮಹದ್ವಾರದಲ್ಲಿ ಬರೆದಿದ್ದ ಒಕ್ಕಣೆ, ‘ಅಕ್ಷರಗಳ ಮೇಲೆ ಅಕ್ಕರೆಯುಳ್ಳವರಿಗಾಗಿ’….ಎಂಥಹಾ ಸುಂದರ ಪದಗಳ ಜೋಡಣೆ!
ಒಳಹೊಕ್ಕರೆ ಜ್ಞಾನದ ಪ್ರಪಂಚವೇ ತೆರೆದುಕೊಂಡಿತ್ತು.ಒಳಹೋಗುತ್ತಿದ್ದಂ
ಎಡಬದಿಯಲ್ಲಿರುವ ವಿಶಾಲವಾದ ‘ಸೂಪರ್-ಪಾಕ’ ಪಾಕಶಾಲೆಯಿಂದ ತರಹೇವಾರಿ ಅಡುಗೆಗಳ ಘಮ ಹೊರಸೂಸುತ್ತಿದೆ. ಹೊಸ ಹೊಸ ಅಡುಗೆಗಳ ಪ್ರಯೋಗ ನಡೆಯುತ್ತಲೇ ಇದೆ. ಎಲ್ಲವೂ ಒಂದಕ್ಕಿಂತ ಎಂದು ರುಚಿ.ಬಲಬದಿಯಲ್ಲಿ ‘ಛಾಯಾ-click’ ಎಂಬ ಛಾಯಾಚಿತ್ರಗಳ ಸಂಗ್ರಹಾಲಯವೇ ಇದೆ.ಇವೆಲ್ಲದರ ಜೊತೆಗೆ ‘ಪುಸ್ತಕ-ನೋಟ’ವನ್ನು ಪರಿಚಯಿಸುವ ಗ್ರಂಥಾಲಯ.ಈ ಸುರಗಿಯೆಂಬ ಪ್ರಪಂಚದಲ್ಲಿ ನೇಸರನೂ ಜ್ಞಾನ ‘ಲಹರಿ‘ಯ ಕಿರಣವನ್ನು ಹೊರಸೂಸುತ್ತಿದ್ದಾನೆ.
‘ಸುರಹೊನ್ನೆ-ಸುರಗಿ’. ನಿನ್ನ ಪ್ರಥಮ ವರುಷದ ಹುಟ್ಟುಹಬ್ಬದ ಈ ಸಂಭ್ರಮಕ್ಕೆ ಇದು ನನ್ನದೊಂದು ಪುಟ್ಟ ‘ಉಡುಗೊರೆ’ .ಇನ್ನಷ್ಟೂ ಹೊಸ ಹೊಸ ಅಂಕಣಗಳು ಮೂಡಲಿ,ಈಗತಾನೆ ಬರವಣಿಗೆಯ ಲೋಕಕ್ಕೆ ಅಂಬೆಗಾಲು ಇಡುತ್ತಿರುವವರನ್ನು ಎತ್ತಿಕೊಂಡು,ಬೆಳೆಸುವಂತಾಗಲಿ ಎಂದು ಹಾರೈಸುತ್ತೇನೆ…ALL THE BEST ‘SURAGI’..
ಹುಟ್ಟುಹಬ್ಬದ ಶುಭಾಶಯಗಳು ‘ಸುರಹೊನ್ನೆ-ಸುರಗಿ’.
– ಸಹನಾ ಪುಂಡಿಕಾಯಿ
“Sura HonneGe” Inthaha Huttu Habbagalu Savira . savira Barali Endu Haraisuttewe”
ಸುರಹೊನ್ನೆ ನಿನ್ನ. ಹೆಸರೇ ಅದ್ಭುತ . ನಿನಗೆ ಹುಟ್ಟುಹಬ್ಬದ ಶುಭಾಶಯಗಳು.