ಮಾಲಕ್ಕನ ಕನಸಿನ ಕಲ್ಪನೆ
ಮಾಲಕ್ಕನ ಕನಸಿನ ಕಲ್ಪನೆ “ಸುರಹೊನ್ನೆ” ರೂಪು ತಳೆದು ಭರ್ತಿ ಒಂದು ವರ್ಷ!
ಈ ಅವಧಿಯಲ್ಲಿ ಪುಟಾಣಿಗಳಿಂದ ಹಿಡಿದು ಹೆಸರಾಂತರವರೆಗೆ ಎಲ್ಲ ಸದಭಿರುಚಿಯ ಅಕ್ಷರಪ್ರಿಯರ ಬಳಗವೊಂದನ್ನು ಸೃಷ್ಟಿಸಿಕೊಂಡು ಅದನ್ನು ಇನ್ನೂ ವಿಸ್ತರಿಸುತ್ತಿರುವುದು ಖುಷಿಯ ವಿಚಾರ. ಆರಂಭದಿಂದಲೂ ಸುರಗಿಯ ಲೇಖನಗಳನ್ನು ಮೆಚ್ಚಿ ಓದಿದವರು ಹಲವರು. ಲೇಖನಗಳನ್ನು ಕೊಟ್ಟವರು ಸಹೃದಯ, ಸೃಜನಶೀಲ, ಸುಂದರ ಅಭಿರುಚಿಯನ್ನು ಅಕ್ಶರ ರೂಪಕ್ಕಿಳಿಸುವ ಎಲ್ಲರೂ.
ಈ ಬಳಗದಲ್ಲಿ ಹೊಸಬರು, ಟೆಕ್ಕಿಗಳು, ವಿದ್ಯಾರ್ಥಿಗಳು, ಸಾಹಿತ್ಯ ಲೋಕದಲ್ಲಿ ಗುರುತಿಸಲ್ಪಟ್ಟವರು, ಗುರುತಿಸಲ್ಪಡದವರು, ಮಕ್ಕಳು, ಹವ್ಯಾಸಿ ಛಾಯಗ್ರಾಹಕರು, ಹವ್ಯಾಸಿ ಚಾರಣಿಗರು.. ಹೀಗೆ ಬರಿಯ ಕನ್ನಡ ಅಕ್ಷರ ಪ್ರಿಯರ ಜಾಲತಾಣವಾಗಿರುವ ಇಲ್ಲಿ ಪಯಣ, ಕಲೆ, ಸುದ್ದಿ, ಸಂಗೀತ, ಪಾಕ, ಚಿತ್ರ, ಎಲ್ಲವೂ ಎಲ್ಲ ಬಗೆಯ ಸದಭಿರುಚಿಯ ಓದುಗರಿಗೂ ಲಭ್ಯ!
ಸುರಹೊನ್ನೆ ಅಂಬೆಗಾಲಿಕ್ಕುತ್ತಿದ್ದ ದಿನಗಳಲ್ಲಿ ಸುರಹೊನ್ನೆಯ ಅಪ್ಪಟ ತಾಂತ್ರಿಕ ಸಹಾಯಕಿಯಂತಿದ್ದ ನನ್ನನ್ನೂ ಕೂಡಾ ಅಕ್ಷರಗಳ ಲೋಕಕ್ಕೆ ಎಳೆದೊಯ್ದುದು ’ಮಾಲಕ್ಕನೂ ಸುರಹೊನ್ನೆಯೂ..!’ ಬರಿಯ ಓದುಗಳಾಗಿದ್ದ ನನಗೆ ಆಮೇಲೆ ಅಕ್ಷರಗಳೊಂದಿಗಿನ ಆಟವೂ ಇಷ್ಟವಾಯಿತು.. Thanks to Surahonne..! 🙂
ಸುರಗಿಯಲ್ಲಿನ ಬರವಣಿಗೆಗಳನ್ನು ಓದಿ ಮೆಚ್ಚಿ ಬರುವ ಪ್ರತಿಕ್ರಿಯೆಗಳು, ಇ-ಮೈಲ್ ಗಳು, ವೆಬ್ ಸೈಟ್ ಓದುಗರ ಸ್ಥಳ ಮಾಹಿತಿಯನ್ನೂ ಕೂಡಾ ಗಮನಿಸಿದಾಗ ತಿಳಿಯುವುದು ಸುರಗಿ ಪ್ರಪಂಚದ ಮೂಲೆ ಮೂಲೆಗಳಲ್ಲಿರುವ ಕನ್ನಡ ಓದುಗರನ್ನು ತಲುಪಿದೆ ಎಂದು. ಇದರಿಂದಾಗಿಯೇ ಮೊಬೈಲ್ ನಲ್ಲಿ ಓದುವವರಿಗೋಸ್ಕರ ’suragi’ ಆಂಡ್ರೋಯಿಡ್ ಆಪ್ ಅನ್ನು ಬಿಡುಗಡೆಗೊಳಿಸಿದ್ದು ಅದು ”google playstore” ನಲ್ಲಿ ಉಚಿತವಾಗಿ ಲಭ್ಯ.
ಹೀಗೆ ಅಕ್ಷರಗಳ ಪ್ರಪಂಚವನ್ನು ಯಾವುದೇ ವರ್ಗಕ್ಕ್ಕೆ ಸೀಮಿತಗೊಳಿಸದೆ ಬೆಳೆಯುತ್ತಿರುವ ಸುರಗಿಗೆ ಹುಟ್ಟುಹಬ್ಬದ ಶುಭಾಷಯಗಳು!!! 🙂 🙂
– ಶ್ರುತಿ ಶರ್ಮಾ, ಕಾಸರಗೋಡು
ತಾಂತ್ರಿಕ ಸಹಾಯಕಿಯಂತಿದ್ದ ನಿಮ್ಮನ್ನೂ ಅಕ್ಷರ ಲೋಕಕ್ಕೆ ಸಮರ್ಪಿಸಿದ್ದಿ ನಿಜವಾಗಿ ಮಾಲಕ್ಕನೂ ಸುರಹೊನ್ನೆಯೂ ಅನ್ನುವುದು ಸತ್ಯ .ಸುರಹೊನ್ನೆ ಯಿಂದಾಗಿ ನಿಮ್ಮ ಬರಹದ ಅಭಿರುಚಿ ಬೆಳೆದಿದೆ .
ಸುರಗಿ ಮೇಲಿನ ನಿಮ್ಮ ಪ್ರೀತಿ ಅಪಾರವಾದುದು… ಬರೆಯುತ್ತಿರಿ..