ಸುರಹೊನ್ನೆ- ಪ್ರಥಮ ಹುಟ್ಟುಹಬ್ಬ
ಜನವರಿ ತಿಂಗಳಲ್ಲಿ ಹಲವಾರು ಸಂಭ್ರಮಗಳು. 1 ನೆಯ ತಾರೀಕಿನಂದು ಹೊಸ ವರ್ಷದ ಸಡಗರವಾದರೆ, 15 ನೆಯ ದಿನದಂದು ಸಂಕ್ರಾಂತಿಯ ಹಬ್ಬ. 26 ರಂದು ಗಣರಾಜ್ಯೋತ್ಸವ. ಈ ತಿಂಗಳಲ್ಲಿ ಬರುವ ಸಂಕ್ರಾಂತಿ ಹಬ್ಬದಂದು ಸುರಗಿ-ಸುರಹೊನ್ನೆ www.surahonne.com ಜಾಲತಾಣ ರೂಪುಗೊಂಡು ಒಂದು ವರ್ಷವಾಗುವ ದಿನ. ಸುರಹೊನ್ನೆಯ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಲೇಖನಮಾಲೆಯನ್ನು ಪ್ರಕಟಿಸುತ್ತೇವೆ.
ಹವ್ಯಾಸವಾಗಿ ಆರಂಭಿಸಿದ ಅಕ್ಷ್ರರದೊಂದಿಗಿನ ಪಯಣದಲ್ಲಿ ಜತೆಯಾದ ಸಮಾನಾಸಕ್ತರು ಹಲವಾರು ಮಂದಿ. ಜಾಲತಾಣಕ್ಕೆ ಭೇಟಿ ಕೊಟ್ಟು, ‘ಚೆನ್ನಾಗಿ ಮೂಡಿ ಬರುತ್ತಿದೆ, ಮುಂದುವರಿಸಿ’ ಎಂದವರು ಇನ್ನು ಕೆಲವರು. ಫೇಸ್ ಬುಕ್ ನಲ್ಲಿ ಪರಿಚಯವಾಗಿ ಬೆನ್ನು ತಟ್ಟಿದವರು ಬಹಳಷ್ಟು ಮಂದಿ. ಇದುವರೆಗೆ ಬರೆಯದಿದ್ದವರೂ ನಮಗೆ ಬರೆದಿದ್ದಾರೆ, ಪಳಗಿದ ಲೇಖನಿಯವರೂ ನಮ್ಮ ಜತೆಗಿದ್ದಾರೆ. ಒಟ್ಟಾರೆಯಾಗಿ ಸರ್ವರಿಗೂ ಸಮಪಾಲು ಎಂಬುದು ನಮ್ಮ ನಿಲುವು.ಅಕ್ಷ್ರರ ಯಾರ ಸೊತ್ತೂ ಅಲ್ಲ, ಅಕ್ಷ್ರರ ಹೆಚ್ಚಿನವರಿಗೆ ತಲಪಲಿ, ಅದರಿಂದಾಗಿ ಸಂತಸ ಹೆಚ್ಚಲಿ ಎಂಬುದು ಸುರಹೊನ್ನೆಯ ಆಶಯ.
ವಿವಿಧ ಅಂಕಣಗಳಲ್ಲಿ ಪ್ರಕಟಗೊಂಡ ಬರಹಗಳ ಸಂಖ್ಯೆ 470 ದಾಟಿ, ಸುರಗಿ ಮಾಲಿಕೆಯಲ್ಲಿ ಪೋಣಿಸಲ್ಪಟ್ಟಿವೆ. ಈ ಒಂದು ವರ್ಷದಲ್ಲಿ ಸುರಗಿಯನ್ನು ಬೆಳೆಸಿ-ಪೋಷಿಸಿದ ‘ಸುರಗಿಬಳಗ ‘ದವರಿಗೆ ಮತ್ತು ಓದುಗರಿಗೆ ಅನಂತ ವಂದನೆಗಳು.
ಸಂಕ್ರಾಂತಿ ಹಬ್ಬದಂದು ‘ಎಳ್ಳು-ಬೆಲ್ಲ ಹಂಚಿ ಒಳ್ಳೊಳ್ಳೆ ಮಾತುಗಳನ್ನಾಡಬೇಕು’ ಎಂಬ ಸಂಪ್ರದಾಯ. ಸುರಹೊನ್ನೆಯ ಮಟ್ಟಿಗೆ ಹೇಳುವುದಾದರೆ. ಎಳ್ಳು-ಬೆಲ್ಲ ತಿಂದು ಒಳ್ಳೊಳ್ಳೆ ಬರಹಗಳನ್ನು ಹಂಚಿಕೊಳ್ಳೋಣ. ‘ಸಂಕ್ರಾಂತಿ ಎಳ್ಳು’ ಎಂದರೆ, ಹುರಿದ ಕಡಲೇಬೀಜ, ಹೆಚ್ಚಿದ ಕೊಬ್ಬರಿ, ಬೆಲ್ಲದ ತುಂಡುಗಳು,ಹುರಿದ ಎಳ್ಳು,ಹುರಿಗಡಲೆಗಳ ಹದವರಿತ ಮಿಶ್ರಣ. ಇವೆಲ್ಲಾ ಸಾಮಗ್ರಿಗಳು ಬಿಡಿ-ಬಿಡಿಯಾಗಿಯೇ ರುಚಿಯಾಗಿದ್ದರೂ ಒಟ್ಟಾಗಿ ಸವಿದಾಗ ರುಚಿ ಹೆಚ್ಚು.
ಸುರಹೊನ್ನೆಯೂ ‘ಸಂಕ್ರಾಂತಿ ಎಳ್ಳಿನಂತೆ’. ಇಲ್ಲಿ ಲೇಖನ, ಕವನ, ಪ್ರವಾಸ ಅನುಭವ, ಅಡುಗೆ, ಛಾಯಾಚಿತ್ರ, ಸ್ಪಂದನಗಳಿವೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಿಗೆ ಅವಕಾಶವಿದೆ. ” ಒಟ್ಟಿನಲ್ಲಿ ಸುರಹೊನ್ನೆ ವಿಭಿನ್ನ ” ಎಂದವರಿದ್ದಾರೆ. ನನ್ನ ಅಭಿಪ್ರಾಯದಲ್ಲಿ, ಈ ವಿಭಿನ್ನತೆಯೇ ನಮ್ಮ ವೈಶಿಷ್ಟ್ಯ ಹಾಗೂ ಯಾವುದೇ ಲಕ್ಷ್ಮಣರೇಖೆ ಹಾಕಿಕೊಳ್ಳದೆ ಇರುವುದರಿಂದ ಸುರಹೊನ್ನೆ ಓದುಗರನ್ನು ತಲಪುತ್ತಿದೆ ಎಂದು ನಮ್ಮ ಅಂಕಿ-ಅಂಶ ತಿಳಿಸುತ್ತದೆ. ಇಲ್ಲಿಗೆ ಉದ್ದೇಶ ಸಫಲಗೊಂಡಂತೆ, ಅಲ್ಲವೇ?
ಎಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು.
ವಂದನೆಗಳೊಂದಿಗೆ,
-ಹೇಮಮಾಲಾ.ಬಿ. , ಸಂಪಾದಕಿ
ಸುರಹೊನ್ನೆಗೂ ಸುರಗಿ ಬಳಗಕ್ಕೂ ಹುಟ್ಟುಹಬ್ಬದ ಹಾಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.. ಇದನ್ನು ಸುರಗಿ ಹಬ್ಬ’ ಎನ್ನಬಹುದೇನೋ! 😉 ಸುರಗಿ ಇಂತಹ ನೂರಾರು ಹುಟ್ಟುಹಬ್ಬಗಳ ಮತ್ತು ಎಳ್ಳು ಬೆಲ್ಲದ ಸವಿಯನ್ನು ಹಂಚಲಿ.. ಸಂಪಾದಕಿಯ ಚಂದದ, ಆಸ್ಥೆಯ ಬರಹದಂತೆ ಸುರಗಿ ಮಾಲೆಯ ಎಲ್ಲ ಹೂಗಳು ಸುಂದರ! 🙂
ಸುರಗಿಗೆ ವರ್ಷವಾಗಿದ್ದು ಬಲು ಸಂತೋಷ .ಸಂಪಾದಕರ ಸಂಪಾದಕೀಯ ತುಂಬಾ ಒಳ್ಳೆಯ ವಿಚಾರಗಳನ್ನು ನಮ್ಮೆದುರಿಗೆ ಇರಿಸಿದೆ. ಸುರಗಿಯ ಘಮ ಘಮ ನಾಲ್ದಿಕ್ಕುಗಳಿಗೂ ಹರಡಲಿ ಅಂತ ನನ್ನ ಆಶಯ .
ಸುರಗಿ ಅತ್ಯುತ್ತಮವಾಗಿ ಮೂಡಿ ಬರುತ್ತಿದೆ. ಕನ್ನಡದಲ್ಲಿ ಇಂತಹ ವೆಬ್ ತಾಣ ಅಪರೂಪ.
ಎರಡನೇ ವರ್ಷದ ‘ಸುರ ಹೊನ್ನೆ’ಗೆ ನನ್ನ ಸ್ವಾಗತ. ಮತ್ತು ಬಹಳಷ್ಟು ಯಶಸ್ಸುಗಳಿಸಲಿ ಎಂಬ ಆಶಯಗಳು.
ಮೆಚ್ಚಿದ , ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
ಹೇಮಾ ಸುರಗಿಯನ್ನು ಒಂದು ವರ್ಷ ಮುನ್ನಡೆಸಿದ ನಿಮಗೆ ಅಬಿನ|ಂದನೆಗಳು
ವರುಷ ವರುಷ ತರಲಿ ಹರುಷ ಎಂದು ಹೇಳುತಾ ಒಂದು ವರುಷ ಪುರೈಸಿದಂಥಹ ಸುರಹೊನ್ನೆ ಗೆ ಮತ್ತೆ ಸುರಗಿಯ ಸಂಪದಕಿಯಾದ ಶ್ರೀಮತಿ ಹೇಮಮಾಲ ರವರಿಗೆ ಮತ್ತೆ ಸುರಗಿ ಬಳಗದವರಿಗೆ ನನ್ನ ಹ್ರುಥಪುರ್ವಕ ಅಭಿನಂದನೆಗಳು.
ಅಪರೂಪದ ಕನ್ನಡದ ವೆಬ್ ತಾಣದ ಸುರಹೊನ್ನೆ- ಸುರಗಿ ಬಳಗಕ್ಕೆ ಹುಟ್ಟುಹಬ್ಬದ ಮತ್ತು ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಇದು ನೂರಾರು ಹುಟ್ಟುಹಬ್ಬಗಳ ಮತ್ತು ಎಳ್ಳು ಬೆಲ್ಲದ ಸವಿಯನ್ನು ಹಂಚಲಿ!
ಇದನ್ನುಮುನ್ನಡೆಸಿದ ಸಂಪಾದಕಿ ಹೇಮಮಾಲಾ ಅವರಿಗೆ ಮತ್ತು ಅವರ ಆಸ್ಥೆಯ ಸುಂದರ ಸುರಗಿ ಮಾಲೆಗೆ ಹಾರ್ದಿಕ ಶುಭಾಶಯಗಳು ಮತ್ತು ಅಭಿನಂದನೆಗಳು!
ನಿಮ್ಮೆಲ್ಲರ ಪ್ರೀತಿ, ಅಭಿಮಾನ ಹಾಗೂ ಸಾಹಿತ್ಯಾಸಕ್ತಿಯಿಂದ ‘ಸುರಹೊನ್ನೆ’ ನಳನಳಿಸುತ್ತಿದೆ. ತಮಗೆ ಅನಂತ ಧನ್ಯವಾದಗಳು ಮೇಡಂ.