ಸಂಪಾದಕೀಯ

Share Button

ಸುರಗಿ - ಸುರಹೊನ್ನೆ, ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ ಮೀಸಲಾದ ಜಾಲತಾಣ. ಬದಲಾಗುತ್ತಿರುವ ಕಾಲಗತಿಯಲ್ಲಿ, ವಿದ್ಯಾಭ್ಯಾಸ,ಉದ್ಯೋಗ ಪರ್ವಗಳಿಗೆ ಆಂಗ್ಲಭಾಷೆ ಅನಿವಾರ್ಯ. ಈ ಧಾವಂತದ ನಡುವೆ, ಮಾತೃಭಾಷೆಯಾದ ಕನ್ನಡದ ಅಕ್ಷರಗಳನ್ನಾದರೂ ಮರೆಯಬಾರದು ಎಂಬ  ಪ್ರಯತ್ನ ಇದು.

ಇತ್ತೀಚೆಗೆ ಯಾವುದಾದರೂ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ಕೊಟ್ಟಿದ್ದೀರಾ? ಪ್ರಚಲಿತ ಸಮಾಜದ ಯಾವುದಾದರೂ ಸಮಸ್ಯೆಗೆ ಸ್ಪಂದಿಸಬೇಕೆ? ಮನೆಯ ಪುಟಾಣಿ ಮಕ್ಕಳು ಬರೆದ ಚಿತ್ರ, ಅಡುಗೆಮನೆಯ ಸೂಪರ್ ಪಾಕ,  ಸುತ್ತಲಿನ ನಿಸರ್ಗ ಸಿರಿಯನ್ನು ನಿಮ್ಮ ಕ್ಯಾಮೆರಾ ಸೆರೆಹಿಡಿದಿದೆಯೇ ? ವಿದ್ಯಾರ್ಥಿಗಳಿಗೊಂದು ಕಿವಿಮಾತು ಹೇಳಬೇಕೆ? ಉದ್ಯೋಗ ಜಗತ್ತಿನ ಪ್ರಚಲಿತ ವಿದ್ಯಮಾನಗಳನ್ನು ಹಂಚಿಕೊಳ್ಳಬೇಕೆ?

ನಿಮ್ಮ ವಿಚಾರ ಲಹರಿಗೆ ಅಕ್ಷರ ರೂಪ ಕೊಟ್ಟು ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಟೈಪ್ ಮಾಡಿ editor@surahonne.com ಗೆ ಇ-ಮೈಲ್ ಮಾಡಿ.ಜತೆಗೆ ನಿಮ್ಮದೊಂದು ಪೋಟೊವನ್ನೂ ಕಳುಹಿಸಿ. 

ನಿಮ್ಮ ಅಕ್ಷರ ಪುಷ್ಫವನ್ನು ಸುರಗಿ ಮಾಲೆಗೆ ಪೋಣಿಸುವ ಕೆಲಸ ನಮ್ಮದು….

ಧನ್ಯವಾದಗಳು.

ಹೇಮಮಾಲಾ.ಬಿ . ಮೈಸೂರು,

ಸಂಪಾದಕಿ.

 

ನಮ್ಮ ಹೊಸ ಪ್ರಕಟಣೆಗಳು:

ಆತ್ಮಸಾಕ್ಷಿ! ನನ್ನಮುಂದೆ ನಡೆ ಎಂದು ನಾನು ಕೇಳುವುದಿಲ್ಲ ನನ್ನ ಹಿಂದೆ ಬಾ ಎಂದು ನಾನು ಹೇಳುವುದಿಲ್ಲ ನನ್ನಎಡಕ್ಕೆ ಇಲ್ಲಾ ಬಲಕ್ಕೆ ಬಾ ಎಂದು ನಾನು ಭೇಡುವುದಿಲ್ಲ; ನಾ ನಕ್ಕಾಗ ನನ್ನೊಡ...

ಕು.ಸ.ಮಧುಸೂದನ್ ನಾಯರ್, ku.sa.madhusudan@gmail.com, July 23, 2014

ಬೆಳಕು-ಬಳ್ಳಿ

ತಾಯಿ ಮಗನ ಮುಖಾಮುಖಿ . ದಶರಥನ ಮರಣಾನಂತರ ಭರತ ಅಯೋಧ್ಯೆಗೆ ಬಂದು ತನ್ನ ತಾಯಿ ಕೈಕೇಯಿಯನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರಿಬ್ಬರ ನಡುವೆ ನಡೆದ ಸಂಭಾಷಣೆ. ಕೈಕೇಯಿ: ವತ್ಸಾ! ಭರತ. ಬಾ ಕಂದಾ.

Rukmini mala, bharathisuthe@gmail.com, July 22, 2014

ಕತೆ-ನೀಳ್ಗತೆ

ಕತ್ತಾಳೆ ಕ್ಯಾಕ್ಟಸ್ ವರ್ಗಕ್ಕೆ ಸೇರಿದ ಗಿಡಗಳು ಹೂಕುಂಡಗಳಲ್ಲಿ ಶೋಭಿಸುವುದಕ್ಕೆ ಮಾತ್ರ ಲಾಯಕ್ಕು ಎಂದು ತಿಳಿದಿದ್ದೆ.

Hema, hemamalab@gmail.com, July 22, 2014

ಛಾಯಾ-Klick!

ಮತ್ತದೇ ಪ್ರಶ್ನೆ?       ಊರು ಕೇರಿ ದಾಟಿ ಬಂತು ನೋಡಿ ಸಿಟಿ! ನೀರು ತುಂಬಿ ಕೊಳೆತ ನಾತ ಕಸದ ರಾಶಿ ಸುತ್ತ ಮುತ್ತ! ಕಣ್ಣು ಮೂಗು ಎರಡೂ ಘಾಸಿ ಹಳ್ಳಿಯದುವೆ ಎಷ್ಟೋ ವಾಸಿ!!! ಸುಳಿಯಿತೆನ್ನ ಚಿತ್ತ, ತ...

Ashok K G Mijar, ashokkg18@yahoo.in, July 21, 2014

ಬೆಳಕು-ಬಳ್ಳಿ

ಹಾಗೆ ಸುಮ್ಮಗೆ     ಅವನ ಒಂದು ಕಣ್ಣ ಬೆಳಕು ಅವಳ ಕಣ್ಣ ಕನ್ನಡಿಯೊಳಗೆ ಬಿದ್ದು ನೂರು ಭಾವ ಹೊಮ್ಮಿ ಫಲಿಸಿ ಅವನ-ಅವಳ ನಡುವಲಿ ಉದಿಸಿತೊಂದು ಪ್ರೇಮ ರಾಗ.

Smitha, smitha.hasiru@gmail.com, July 19, 2014

ಬೆಳಕು-ಬಳ್ಳಿ

ಆಷಾಢ ಮಾಸ ಬಂದೀತವ್ವಾ... ಸುಶ್ರಾವ್ಯವಾದ ಜಾನಪದ ಹಾಡೊಂದರ ಸೊಲ್ಲು ಹೀಗಿದೆ "ಆಷಾಢ ಮಾಸ ಬಂದೀತವ್ವಾ...ಖಾಸಾ ಅಣ್ಣಾ ಬರಲಿಲ್ಲವ್ವಾ...ಎಷ್ಟೆಂದು ನೋಡಲಿ ನಾ ತೌರೀನ ದಾರಿ..".

Hema, hemamalab@gmail.com, July 18, 2014

"ಬೀಯಿಂಗ್ ಹ್ಯೂಮನ್.."  ಓಹ್ ರಿಯಲೀ??!!   ಕತ್ತಲೆ ತುಂಬಿದ ನಿರ್ಜನ ರಸ್ತೆ. ಬೀದಿ ದೀಪದ ಮಂದ ಬೆಳಕು.. ಮಗುವೊಂದು ರಸ್ತೆಗೋಡುತ್ತದೆ.

Shruthi Sharma M, shruthi.sharma.m@gmail.com, July 17, 2014

ಬೊಗಸೆಬಿಂಬ

ಆಸ್ಪತ್ರೆ    ತುರ್ತುಗಳ ನಡುವೆ ಸಂಯಮ ಅನಿವಾರ್ಯ ಸರಕು ದಿನತಪ್ಪಿದರೆ ಹದ ತಪ್ಪುವುದೀ ದೇಹ ವೈದ್ಯರ ಪರಾಕು ಇಲ್ಲಿ ಪದೇ ಪದೇ ಕಾಣುವ ಪೇಲವ ಮುಖದ ನಲುಗುವ ಪಾದಗಳು ನಿಲ್ಲಲಾರದೆ ಬಳಲುತ್...

Sangeetha Raviraj, sangeetharhosoor@gmail.com, July 17, 2014

ಬೆಳಕು-ಬಳ್ಳಿ

ಪಾಳೆಟು ಒಯ್ಪುನೆ...ಗೊಬ್ಬೆರೆ ಬಲ್ಲೆಅಡಿಕೆಮರದ ಹಾಳೆಯಲ್ಲಿ ಒಂದು ಮಗುವನ್ನು ಕುಳ್ಳಿರಿಸಿ, ಇನ್ನೊಂದು ಮಗು ಆ ಹಾಳೆಯನ್ನು ಎಳೆಯುತ್ತಾ ಹೋಗಿ ಗುರಿ ಮುಟ್ಟುವ ಗ್ರಾಮೀಣ ಆಟ. ಇದು ಕರಾವಳಿ ಸ್ಪೆಷಲ್!  ಸ್ಥಳೀಯ ತುಳು ಭಾಷೆಯಲ್ಲಿ ಹೇಳುವುದಾದರೆ "ಪಾಳೆಟು ಒಯ್ಪುನೆ...

Published By, Suragi., July 16, 2014

ಛಾಯಾ-Klick!

ಸೋತು ಗೆದ್ದವರು   "ಆಕೆ ಲವಲವಿಕೆಯ ತರುಣಿ. ಮಾತೋ ಚಟಪಟಗುಟ್ಟುವ ಅರಳಿನಂತೆ. ಅವಳಿದ್ದಲ್ಲಿ ಮಾತು, ಕತೆ, ಜೋಕುಗಳು. ನಿನ್ನೆ ನೋಡಿದ ಸಿನೆಮಾ, ಯಾವುದೋ ಫ್ರೆಂಡ್ ಕಳುಹಿಸಿದ ಮೆಸೇಜ್, ಕಾಲೇಜಿಗೆ ಬರುತ್ತಿರುವಾಗ ನೋಡಿದ ತಮಾಷೆಯ ದೃಶ್ಯ ಹೀಗೆಲ್ಲ. ದಿಢೀರನೆ ಆಕೆ ಮೌನವಾದಳು. ಮಾತಿಲ್ಲ, ಕತೆಯಿಲ್ಲ. ಯಾರಾದರೂ ಮಾತನಾಡಿಸಿದರೆ ಸಿಡಾರನೆ ರೇಗಿ ಬಿಡುವಳು.

Jayashree B Kadri, bjayashree97@gmail.com, July 15, 2014

ಬೊಗಸೆಬಿಂಬ

ಹೇಳುವುದು ಒಂದು ಮಾಡುವುದು ....   ಸತ್ಯಮೂರ್ತಿ ಕಾಲೇಜಿನಲ್ಲಿ ಉಪನ್ಯಾಸಕ.  ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವ ವೇಳೆಯಲ್ಲಿ ಒಬ್ಬ ವಿದ್ಯಾರ್ಥಿಯ ಜಂಗಮವಾಣಿ (ಮೊಬೈಲು) ರಿಂಗಣಿಸಿತು. . ಅದನ್ನು ಕೇಳಿ ಸತ್ಯಮೂರ್ತಿಗೆ ಸಿಟ್ಟು ಬಂತು. ಮೊಬೈಲು ಇರಬೇಕು ಒಪ್ಪುತ್ತೇನೆ. ಅದರಿಂದ ಉಪಯೋಗ ಇದೆ. ಆದರೆ ಅದರಿಂದ ಅಷ್ಟೇ ಉಪದ್ರವೂ ಇದೆ.

Rukmini mala, bharathisuthe@gmail.com, July 15, 2014

ಕತೆ-ನೀಳ್ಗತೆ

ಶಿರಸ್ ಗೆ ನಶೆ ಹಿಡಿಸುವ ಚರಸ್ ...   ಹಿಮಾಚಲ ಪ್ರದೇಶದ 'ಕುಲು' ವಿನಿಂದ ಸ್ವಲ್ಪ ದೂರದ ಕಸೋಲ್ ಎಂಬ ಊರಿಗೆ ಹೋಗುತ್ತಿದ್ದೆವು. ದಾರಿಯಲ್ಲಿ ಇದ್ದಕ್ಕಿದ್ದಂತೆ ನಮ್ಮ ಕಾರಿನ ಡ್ರೈವರ್ ನ ಪುಟಾಣಿ ಗಿಡವೊಂದನ್ನು ತೋರಿಸುತ್ತ ' ಎ ಚರಸ್ ಹೇ, ದುನಿಯಾ ಮೇ ಸಬ್ ಸೆ ಅಚ್ಚ್ಚಾ ಚರಸ್ ಕಸೋಲ್ ಮೇ ಮಿಲತಾ ಹೇ, ಬಹುತ್ ಅಂಗ್ರೇಜಿ ಲೋಗ್ ಚರಸ್ ಪೀನೆ ಕೆ ಲಿಯೇ ಕಸೋಲ್ ಆತೆ ಹೇ' ಅಂದ.

Hema, hemamalab@gmail.com, July 14, 2014

ಛಾಯಾ-Klick!

ಗಮನಿಸಿ:

  • ಈ ಜಾಲತಾಣದಲ್ಲಿ ಪ್ರಕಟವಾಗುವ ಎಲ್ಲಾ ಬರಹಗಳ  ಅಭಿಪ್ರಾಯಗಳು ಆಯಾ ಬರಹಗಾರರಿಗೆ ಸಂಬಂಧಿಸಿದ್ದಾಗಿರುತ್ತವೆ. ಈ ಬಗ್ಗೆ ಏನಾದರೂ ಭಿನ್ನಾಭಿಪ್ರಾಯವಿದ್ದಲ್ಲಿ www.surahonne.com ಜವಾಬ್ದಾರಿಯಲ್ಲ.
  • ಈ ಜಾಲತಾಣವು  ಪ್ರತಿ ಬುಧವಾರ ಮತ್ತು ಶನಿವಾರ   ಅಪ್ ಲೋಡ್ ಆಗುತ್ತದೆ.