‘ಸುರಗಿ’ಯ ಪರಿಮಳ ನಿತ್ಯ ನೂತನ..!
ಕವಿತೆಯ ಮೂಲಕವೇ ಪರಿಚಯವಾದ ಭರವಸೆಯ ಕವಯತ್ರಿ ಸಂಗೀತಾ ರವಿರಾಜ್‌ರವರು, ಸರ್ ‘ಸುರಗಿ’ಯಲ್ಲಿ ನನ್ನ ಬರಹಗಳನ್ನು ನೀವು ಗಮನಿಸಬೇಕೆಂದು ದೂರವಾಣಿಯಲ್ಲಿ ತಿಳಿಸಿದರು. ಆ ಕ್ಷಣದಿಂದಲೇ ಆರಂಭವಾದ ಸುರಗಿಯ ಸಂಪರ್ಕ ನಿಜಕ್ಕೂ ನನಗೆ ಅಚ್ಚರಿ ಮೂಡಿಸಿತು. ಹೊಸ ಹೊಳಹುಗಳನ್ನಿಟ್ಟುಕೊಂಡು ಯಾವುದೇ ರೀತಿಯ ಜಾತಿ, ಮತ, ಪಂಥ, ಪಂಗಡಗಳ ಒಳಸುಳಿಗೆ ಸಿಲುಕದೆ ವಿಭಿನ್ನವಾಗಿ ಪತ್ರಿಕೆಯನ್ನು ಕಟ್ಟಿಕೊಡುವ ಶೈಲಿಯಂತೂ ಶ್ಲಾಘನೀಯ. ಪತ್ರಿಕೆಯ ಸಂಪಾದಕತ್ವವನ್ನು ಓರ್ವ ಸ್ತ್ರೀ ನಿರ್ವಹಿಸುತ್ತಿರುವುದು ಇನ್ನೂ ವಿಶೇಷ.
ಇಂದು ಮಾರುಕಟ್ಟೆಯಲ್ಲಿರುವ ಬಹಳಷ್ಟು ಪತ್ರಿಕೆಗಳ ನಿಲುವು ಮತ್ತು ನಂಬಿಕೆಗಳು ಓದುಗರಿಗೆ ಗೊಂದಲ ಮೂಡಿಸುತ್ತಿವೆ, ಅರ್ಥಾತ್ ಮಿಥ್ಯವನ್ನೆ ಸತ್ಯವೆಂದು ಬಿಂಬಿಸುತ್ತಿವೆ. ಮುಗ್ದ ಓದುಗರಿಗೆ ಗೊತ್ತಾಗದ ಹಾಗೆ ಸೀಮಿತ ಪಂಥ ಮತ್ತು ಪಕ್ಷಗಳ ಮುಖವಾಣಿಯಾಗಿ ಇಂದು ಅನೇಕ ಪತ್ರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಹಣದಾಸೆಗೆ ಜಾಹಿರಾತನ್ನು ಮುಖಪುಟದಲ್ಲಿಯೇ ಪ್ರಕಟಿಸಿ (ವಿಶೇಷವಾಗಿ ‘ಕಣ ಕಣದಲ್ಲೂ ಕೇಸರಿಯ ಶಕ್ತಿ ಇದೆ’ ಎಂಬ ಗುಟಕಾ ಹಾಗೂ ಜಪಾನಿ ತೈಲ-ಈ/ಒ ಕ್ಯಾಪ್ಸೂಲ್ಸ್) ನಮ್ಮ ಯುವ ಜನಾಂಗವನ್ನು ಸಾಕಷ್ಟು ದಾರಿ ತಪ್ಪಿಸುತ್ತಿವೆ. ‘ಸುರಗಿ’ ಇಂತಹ ಯಾವುದೇ ದುರಾಸೆ, ದುರುದ್ದೇಶ ಹೊಂದದೆ ನಿಷ್ಕಲ್ಮಶವಾದ ಒಂದು ಸುಂದರ ಅನುಭೂತಿಯನ್ನು ನಮ್ಮಂತಹ ಅಕ್ಷರ ಪ್ರಿಯರಿಗೆ ನಿತ್ಯ ಉಣಬಡಿಸುತ್ತಿದೆ.
ಕಳೆದ ನಾಲ್ಕೈದು ತಿಂಗಳಿನಿಂದ ನನ್ನ ಮನದ ಭಾವನೆಗಳಿಗೆಲ್ಲ ಅಕ್ಷರ ರೂಪಕೊಟ್ಟು ಸುರಗಿಯಲ್ಲಿ ಹರಿಬಿಟ್ಟೆ. ಅವು ಒಂದೊಂದಾಗಿ ಪ್ರಕಟವಾಗುತ್ತಾ ನನ್ನನ್ನು ಮತ್ತಷ್ಟು ಬರೆಯಲು ಪ್ರೇರೆಪಿಸುತ್ತಿವೆ. ಪ್ರತಿಯೊಬ್ಬ ಬರಹಗಾರನಿಗೆ ತನ್ನದೊಂದು ಬರಹ ಸೂಕ್ತ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವುದನ್ನು ಕಂಡಾಗ ಆತ ಅನುಭವಿಸುವ ಆಂತರಿಕ ಸುಖಕ್ಕೆ ಪಾರವೇ ಇಲ್ಲ. ಈ ನಿಟ್ಟಿನಲ್ಲಿ ಸುರಗಿ ನನಗಂತೂ ಸಾಕಷ್ಟು ಸ್ಪಂದಿಸಿದೆ. ಸುರಗಿಯಲ್ಲಿ ಪ್ರಕಟವಾಗಿರುವ ಈ ವರೆಗಿನ ಎಲ್ಲ ಬರಹಗಳನ್ನು ಒಂದೆಡೆ ಸಂಕಲಿಸಿರುವೆ, ಪ್ರಕಾಶಕರು ಸಿಕ್ಕರೆ ಒಂದು ಪುಸ್ತಕವನ್ನೆ ಪ್ರಕಟಿಸುವ ಕನಸು ಕೂಡಾ ಕಟ್ಟಿಕೊಂಡಿರುವೆ. ಒಟ್ಟಾರೆ ಅಕ್ಷರಗಳ ಮೇಲೆ ಅಕ್ಕರೆ ಉಳ್ಳವರಿಗಾಗಿಯೇ ಸದಾ ಹಸಿರಾಗಿರುವ ‘ಸುರಗಿ’ಯ ಅಂತಃಕರಣ ಆಗಾಧವಾದದ್ದು. ತುಂಬಾ ಕಡಿಮೆ ಅವಧಿಯಲ್ಲಿಯೇ ಕನ್ನಡ ಸಾರಸ್ವತ ಲೋಕದ ಗಮನ ಸೆಳೆದಿದೆ.
ಅಕ್ಷರ ಪ್ರಿಯರ ‘ಸುರಗಿ’ ಇನ್ನಷ್ಟು ಗಟ್ಟಿಯಾಗಿ ಮತ್ತು ಗಂಭೀರವಾಗಿ ನಿಲ್ಲುವುದರೊಡನೆ, ಜಗದಗಲ ತುಂಬಿರುವ ಕನ್ನಡಿಗರು ಕಣ್ತುಂಬಿಕೊಳ್ಳಲಿ. ವೈಚಾರಿಕ ಪ್ರಜ್ಞೆಯ ಕ(ವಿ)ತೆ, ಲೇಖನಗಳು ಮೌಢ್ಯದಲ್ಲಿ ಮುಳುಗಿರುವವರ ಕಣ್ತೆರುಸುವುದರೊಡನೆ ಜನಪ್ರಿಯಗೊಳ್ಳಲಿ. ಕಲೆ, ಸಾಹಿತ್ಯ ಮತ್ತು ಸಾಮಾಜಿಕ ಸಾಮರಸ್ಯಗಳ ಕುರಿತು ಇನ್ಮುಂದೆ ನಡೆಯುವ ಸಂಶೋಧನೆಗೆ ಪತ್ರಿಕೆಯಲ್ಲಿಯ ಬರಹಗಳು ಸ್ಪೂರ್ತಿಯಾಗಲಿ/ಉಲ್ಲೇಖಿಸುವಂತಹ ಮಹತ್ವದ ಸ್ಥಾನಮಾನವನ್ನು ಹೊಂದಲೆಂಬ ಸದಾಶಯ ನನ್ನದು. ‘ಸುರಹೊನ್ನೆ’ಯ ಸಂಪರ್ಕ ಪಡೆದವರೆಲ್ಲ ಸುಗಂಧದ ಪರಿಮಳ, ತಂಗಾಳಿ, ನೆರಳು ಏನೇಲ್ಲವನ್ನು ಅನುಭವಿಸಲಿ. ಒಟ್ಟಾರೆ ಉಜ್ವಲ ಭವಿಷ್ಯವನ್ನೆ ಹೊಂದಿರುವ ‘ಸುರಗಿ’ಗೆ ನನ್ನೆಲ್ಲಾ ಪರಿವಾರದ ಪರವಾಗಿ ಹುಟ್ಟುಹಬ್ಬದ ಶುಭಕಾಮನೆಗಳು.
-ಕೆ.ಬಿ.ವೀರಲಿಂಗನಗೌಡ್ರ. ಬಾದಾಮಿ.
ಆಪ್ತ ವಾದ ಬರಹ .
Thanks
ನನ್ನ ಮೂಲಕ ನಿಮಗೆ ಸುರಗಿಯ ಮೇಲೆ ಅಭಿಮಾನ ಮೂಡಿತು ಎಂಬ ಮಾತು ಕೇಳಿ kushiyaytu
ಸುರಗಿಯಬಗ್ಗೆ ತಾವು ಬರೆದ ಲೇಖನ ಬಹಳ ಚ್ಗೆನ್ನಾಗಿದೆ.ಸುರಗಿಯ ಕ೦ಪು ಇನ್ನಸ್ಟು ,ಮತ್ತಷ್ತು ಪಸರಿಸಲಿ ಚಿರ ಕಾಲ ಉಳಿಯಲಿ ಎ೦ಬುದೇ ನನ್ನ ಆಶಯ .