ಮುಗಿಲ ಮುಟ್ಟುವ ತವಕ..!
ಗಗನವೇಕೆ ನಿ೦ತಿಹುದು ನನ್ನ ಕಣ್ಗಳ ಸೆಳೆಯುತ
ದೃಷ್ಟಿಯಾದೀತೆಂದು ಕರಿಮೋಡವು ಬೊಟ್ಟಿಟ್ಟು
ಕುಳಿತೇ ಬಿಟ್ಟಿದೆ ಮೆಲ್ಲ ನಿನ್ನನ್ನೆ ಕಾಯುತ್ತ…
‘
ನೀಲಿ ಬಣ್ಣದ ಚೆಲುವನೆ
ತುಂಟುತಾರೆಗಳ ಒಡೆಯನೆ
ಸೂರ್ಯಾಸ್ತವು ರಂಗು ರಂಗಾಗಲು ನೀನಲ್ಲವೆ ಸಹಚಾರಿ
‘
ಎಷ್ಟು ವಿಶಾಲ ನೀನು! ತಿರುಗಿ ಅಲೆದು
ಸುಸ್ತಾಯಿತಂತೆ ಚಂದ್ರನಿಗೂ ಕೂಡ…!
ವಿಶ್ರಾಂತಿ ಬಯಸಿ ಕಣ್ಣೀರಿಡುತ್ತಿವೆ
ಮೇಘ ರಾಜನ ತಂಡ
ನಗುವಾಗ ಮಿಂಚುತಿರುವೆ
ಕೋಪಗೊಂಡಾಗ ಗುಡುಗುವೆ
‘
ಅದೇನಿದೆ ಬಿಡಿಸಿ ಹೇಳು ನಿನ್ನ ಒಂದೊಂದೆ ಕೌತುಕ
ಅಲಿಸಲು ರೆಕ್ಕೆ ಕಟ್ಟಿ ಒಮ್ಮೆ ಜಿಗಿಯುವ ತವಕ…!
‘
– ಸ್ನೇಹಾ ಪ್ರಸನ್ನ
Excellent 🙂
ಆಹಾ! ಚೆನ್ನಾಗಿದೆ 🙂
ವೆರಿ ನೈಸ್…
ಧನ್ಯವಾದಗಳು..
ಉತ್ತಮ ಕವನ. “ತಿರುಗಿ ಅಲೆದು..ಸುಸ್ತಾಯಿತಂತೆ ಚಂದ್ರನಿಗೂ ಕೂಡ…” ಸಾಲು ಬಹಳ ಇಷ್ಟವಾಯಿತು.
ನಿಹಾರಿಕ ರವರಿಗೆ ಧನ್ಯವಾದಗಳು….