ಇಡ್ಲಿಯ ದಶಾವತಾರ…
ನಾಳೆಯ ತಿಂಡಿಗೆಂದು ಇಡ್ಲಿ ಹಿಟ್ಟು ರುಬ್ಬುವಾಗ, ಇಡ್ಲಿ ತನ್ನ ದಶಾವತಾರದ ಕಥೆಯನ್ನು ಹೀಗೆ ಹಾಡಿತು:
ಓಲೆಯ ಗರಿಯಲಿ ಸುತ್ತಿಟ್ಟ
ಹಲಸಿನ ಮೂಡೆಲಿ ಎರೆದಿಟ್ಟ
ಬಾಳೆಯ ಕೊಟ್ಟೆಲಿ ಕಟ್ಟಿಟ್ಟ
ಇಡ್ಲಿಯ ಸವಿಯಿರಿ ಕರುನಾಡಿನಲಿ
ಕಾಂಚೀಪುರದ ಹಸಿರು ಇಡ್ಲಿ
ಹೈದರಬಾದಿನ ಪುಡಿ ಇಡ್ಲಿ
ಮೈಸೂರಿನಲಿ ಮಲ್ಲಿಗೆ ಇಡ್ಲಿ
ಸಹಚರನಾಗಿ ರವೆಯಾ ಇಡ್ಲಿ
ಬಟ್ಟಲು ತುಂಬಾ ಮಿನಿ ಇಡ್ಲಿ
ಹೊಟ್ಟೆಯ ತುಂಬುವ ತಟ್ಟೆ ಇಡ್ಲಿ
ಇಷ್ಟರ ಮೇಲೆ ರೆಗ್ಯೂಲರ್ ಇಡ್ಲಿ
ಹತ್ತವತಾರದಿ ಹೊಟ್ಟೆಯ ಸೇರುವ
ನೆಚ್ಚಿನ ಇಡ್ಲಿಯ ಮರೆಯದಿರಿ
ಮಂಗಳಂ ಜಯ ಮಂಗಳಂ
ಮಂಗಳಂ ಶುಭ ಮಂಗಳಂ
‘
( ಶ್ರೀ ಪುರಂದರ ದಾಸರ ಕ್ಷಮೆ ಕೋರುತ್ತಾ, “ಚಲಿಸುವ ಜಲದಲಿ ಮತ್ಸ್ಯನಿಗೆ, ಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆ……… ಮಂಗಳಂ ಜಯಂ ಮಂಗಳಂ ” ಎಂಬ ಭಜನೆ ಹಾಡಿನ ಧಾಟಿಯಲ್ಲಿ ಹಾಡಬಹುದು)
– ಹೇಮಮಾಲಾ.ಬಿ
ಮಂಗಳೂರಿನ (ಜನತಾ ದೆಲುಕ್ಷ್) ಮಿನಿ ಇಡ್ಲಿಯಾ ಸ್ಮರಣೆಯೂ ಆಗಲಿ.
ಆಹಾ ಇಡ್ಲಿ .ಕವಿತೆಯೂ ಇಡ್ಲಿ ಯಸ್ಟೇ ಸೊಗಸಾಗಿದೆ
Superb 🙂
ಭರ್ ಪೂರ್ ಇಡ್ಲಿ ತಿಂದು ತೇಗಿದೆ..!!
🙂 🙂 ಥ್ಯಾಂಕ್ಸ್
ಚೆನ್ನಾಗಿದೆ