ಆರ್ಗ್ಯಾನಿಕ್ ಏರೋಫೋನಿಕ್ಸ್ ವಿಧಾನದಲ್ಲಿ ಸೊಪ್ಪಿನ ಬೆಳೆ..
ಈ ಸಾರಿಯ ರೈತ ಪ್ರವಾಸ ಅದ್ಯಯನದಲ್ಲಿ ಗಮನ ಸೆಳೆದ ಹೊಸ ಆರ್ಗ್ಯಾನಿಕ್ ಏರೋಫೋನಿಕ್ಸ್ ವಿಧಾನ.
ಧಾರವಾಡದ ಕೃಷಿ ವಿ ವಿ ಯಲ್ಲಿ ಅವಿಷ್ಕಾರ ಗೊಂಡಿರುವ ಈ ವಿಧಾನದಿಂದ ಸೊಪ್ಪು ತರಕಾರಿಗಳು ನಳನಳಸುತ್ತಿವೆ.
ಮನೆಯ ಟೆರೆಸಿನ ಮೇಲೆ ಖನಿಜಯುಕ್ತ ಸೊಪ್ಪು ತರಕಾರಿ ಬೆಳೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಈ ವಿಧಾನವನ್ನು ಮಹಿಳೆಯರು ಅಳವಡಿಸಿಕೊಳ್ಳಬಹುದು.ಈ ವಿಧಾನಕ್ಕೆ ಮಣ್ಣಿನ ಅವಶ್ಯಕತೆ ಇಲ್ಲ. ಒಂದರ ಮೇಲೊಂದು ಪಾಸ್ಟಿಕ್ ಕೊಳವೆಗಳನ್ನು ಜೋಡಿಸಿ ಒಂದು ಅಡಿಗೊಂದರಂತೆ ಮೇಲ್ಭಾಗ ತೂತು ಮಾಡಿ ಸುಟ್ಟ ಒಂದತ್ತು ಮಣ್ಣ ಗೋಲಿಗಳ ಒಳಗೆ ಬೀಜ ಊರುತ್ತಾರೆ. ತುಂಬಾ ಜಾಗದ ಅವಶ್ಯಕತೆಯೂ ಇಲ್ಲ. ಸಣ್ಣನೀರ ಕೊಳವೆಗಳಲ್ಲಿ ಸದಾ ಖನಿಜಯುಕ್ತ ನೀರು ಹಾಯಲು ಸಣ್ಣ ಪ್ಲಾಸ್ಟಿಕ್ ಡ್ರಂನಲ್ಲಿ ಮಿಷನ್ ಅಳವಡಿಕೆ ಮಾಡುವುದಷ್ಟೇ ಮುಖ್ಯಕೆಲಸ. ಸ್ವಲ್ಪವೇ ನೀರು ಮತ್ತು ಗಾಳಿಯನ್ನು ಬಳಸಿಕೊಂಡು ಬೆಳೆಯುತ್ತದೆ.
ಇದಕ್ಕೆ ಆರಂಭದ ಅಂತದಲ್ಲಿ ಸ್ವಲ್ಪ ಹಣ ಖರ್ಚಾದರೂ ಸರ್ಕಾರದಿಂದ ಸಬ್ಸಿಡಿಯ ಅನುಕೂಲವಿದೆಯಂತೆ. ನಾವೇ ಬೆಳೆದ ತೃಪ್ತಿಯ ಜೊತೆ ತಾಜಾ ತರಕಾರಿ ಬೇಕೆಂದರೆ ಪ್ರಯತ್ನಿಸಬಹುದು..
-ಪುಷ್ಪಾ ನಾಗತಿಹಳ್ಳಿ
ಉತ್ತಮ ಮಾಹಿತಿ, ಧನ್ಯವಾದಗಳು.
ಮಾಹಿತಿ ಪೂರ್ಣ ಬರಹ. ಚೆನ್ನಾಗಿದೆ