ನೆನಪಿನ ಅಲೆಯಲ್ಲಿ…..

Share Button

ಮೂರು ದಶಕಗಳ ಹಿಂದಿನ ಕಥೆ. ಪತಿಯ ಉನ್ನತ ವ್ಯಾಸಂಗಕ್ಕಾಗಿ ಐದು ವರ್ಷ ಉದಯಪುರದಲ್ಲಿದ್ದೆವು. ನಮ್ಮ ಹತ್ತಿರದ ಸಂಬಂಧಿ  ಹಾಗೂ ನಮ್ಮವರ  ಮಾರ್ಗದರ್ಶಕರೂ  ಆಗಿದ್ದ ದಾ.ಸಿ.ವಿ.ಭಟ್  ಅವರ ಮನೆಗೆ ಹೋಗಿ ಹಿಂತಿರುಗಿ  ಬರುತ್ತಿದ್ದೆವು.ಮಡಿಲಲ್ಲಿ  ಆರು  ತಿಂಗಳ ಪುಟ್ಟ  ಮಗಳನ್ನು ಕೂರಿಸಿ ಲೂನದಲ್ಲಿ ಬರುತ್ತಿದ್ದೆವು. ಸ್ವಲ್ಪ ದೂರ ಬರುವಷ್ಟರಲ್ಲಿ ಸೆರಗು ಜಗ್ಗಿದ೦ತಾಯಿತು.ಏನೆಂದು ತಿಳಿಯುವಷ್ಟರಲ್ಲಿ ಲೂನ ವಾಲಿ ನಾನು  ಮಾರ್ಗದಲ್ಲಿ ಬಿದ್ದಿದ್ದೆ.ಸೀರೆಯ ಸೆರಗು ಲೂನದ ಚಕ್ರಕ್ಕೆ ಸಿಕ್ಕಿ ಸೀರೆಯನ್ನು ಕತ್ತರಿಸಿ ತೆಗೆಯುವ ಹಂತಕ್ಕೆ ತಲುಪಿತ್ತು.ಪುಟ್ಟ ಮಗಳು  ನನ್ನ ತೆಕ್ಕೆಯಲ್ಲಿ ಭದ್ರವಾಗಿತ್ತು. ನಮಮ್ವರು ಕೂಡಲೇ ಮಗಳನ್ನು ಎತ್ತಿ ಮು೦ದೇನು ಎ೦ದು ಯೋಚಿಸುವಸ್ಥರಲ್ಲಿ ಅದೇ ದಾರಿಯಾಗಿ ನಮ್ಮ ಆತ್ಮೀಯರೊಬ್ಬರು ಪತ್ನೀ ಸಮೇತರಾಗಿ ಬರುತ್ತಿದ್ದರು. ಕೂಡಲೇ ಬೈಕು ನಿಲ್ಲಿಸಿ ಏನಾಯಿತು ಎಂದು ಕೇಳಿದರು . ಅದೃಷ್ಟಕ್ಕೆ ಅವರ  ಚೀಲದಲ್ಲಿ ಒ೦ದು ಸೀರೆಯೂ ಇತ್ತು.ಅವರ ಪತ್ನಿಯು ನನ್ನ ಹತ್ತಿರ ಬ೦ದು ನನ್ನನ್ನು ಸ್ವಾಂತನಗೊಳಿಸಿ  ಕೈಯ ಗಾಯವನ್ನೊರಸಿ ತಾವು ಅಡ್ಡ ನಿ೦ತು ತನ್ನಲ್ಲಿದ್ದ ಸೀರೆಯನ್ನು ಉಡಿಸಿ  ತನ್ನ ಮಾನವೀಯತೆಯನ್ನು ಮೆರೆದರು.ದೇವರಂತೆ ಬಂದು ಸಹಕರಿಸಿದ ಅವರಿಗೆ ಅನ೦ತಾನ೦ತ ವ೦ದನೆಗಳು.  . 

1982 ರಲ್ಲಿ ಉದಯಪುರದಲ್ಲಿ ನಾವು ಭತ್ಜೀಕಿವಾಡಿ ಎಂಬಲ್ಲಿ ವಾಸಿಸುತ್ತಿದ್ದೆವು.ಅದು ಒಂದು ಮೂರು ಮಾರ್ಗ ಸೇರುವ  ಜಾಗ.ಅದರಲ್ಲಿ ಒಂದು ಹೆದ್ದಾರಿ.ಮಾರ್ಗದ ಮೂರೂ ಬದಿ ದೊಡ್ಡ ಮನೆಗಳಿದ್ದುವು . ಅದರಲ್ಲಿರುವ ಒಂದು ಮನೆಯಲ್ಲಿ ಮಾಳಿಗೆಯಲ್ಲಿ ಒಂದು ಬದಿ  ನಾವೂ ಇನ್ನೊದು ಬದಿಯ ಮನೆಯಲ್ಲಿ ಮನೆ ಮಾಲೀಕರೂ ವಾಸವಾಗಿದ್ದೆವು. ಕೆಳಗಿನ  ಮನೆಯಲ್ಲಿ ಬೇರೆ ಎರಡು  ಕುಟುಂಬಗಳು ವಾಸವಾಗಿದ್ದರು . ಮನೆಯ ಎದುರು ಒಬ್ಬ ಪಾಪ್ಡಿ [ಕಡಲೆ ಹಿಟ್ಟಿನ ಒಂದು ತಿಂಡಿ ] ಮಾಡಿ ಮಾರುವವನೂ ಒ೦ದು ಮೆಡಿಕಲ್ ಶಾಪು, ತರಕಾರಿ, ಹಣ್ಣು ,ಹಾಲುಗಳ ಅಂಗಡಿ. ಅ೦ತೂ ತು೦ಬಾ ಅನುಕೂಲವಾದ ಮನೆಯೆ೦ದೆ ಹೇಳಬಹುದು.

ಮನೆ ಎದುರಿಗೆ ಒಂದು ಮಕ್ಕಳ  ಪಾರ್ಕ್. ಕೂಗಳತೆಯಲ್ಲಿ ಒಂದು ಹನುಮಾನ್ ಗುಡಿ ,ಸ್ವಲ್ಪ ದೂರದಲ್ಲೊ೦ದು ಪ್ರಾರ್ಥನಾ ಮಂದಿರ ,ಸ್ವಲ್ಪ ದೂರದಲ್ಲಿ ”ಮೀರಾ ಗರ್ಲ್ಸ್ ಕಾಲೇಜು” , ಸೈಂಟ್  ಮೇರಿಸ್ ಶಾಲೆಇವೆಲ್ಲದರಿಂದಾಗಿ ಆ ಮಾರ್ಗವು ಯಾವಾಗಲೂ ಲವಲವಿಕೆಯಿ೦ದ ಇರುತ್ತಿತ್ತು.ಮನೆಯ ಒಂದು ಅರಳೀ ಮರ, ಅದರಲ್ಲಿರುವ ಬಗೆ ಬಗೆಯ ಹಕ್ಕಿಗಳ ಇ೦ಚರ, ಬೆಳಗಾದೊಡನೆ ಹಳ್ಳಿಗಳಿಂದ  ತರಕಾರಿಗಳನ್ನು ಮಾರುಕಟ್ಟೆಗೆ  ಹೊತ್ತು ತರುವ ಕುದುರೆ ಗಾಡಿಗಳ  ತಕತಕ ಸದ್ದು, ಹಾಲಿನ ಬೈಯಾಗಳ  ಸೈಕಲ್ ಬೆಲ್ಲುಗಳು, ಸುಖ ನಿದ್ದೆಯಲ್ಲಿದ್ದ ನಮ್ಮನ್ನು ಎಬ್ಬಿಸುತ್ತಿದ್ದುವು. ಬೆಳಗ್ಗೆ  8 ಗಂಟೆ ಯಾದೊಡನೆ  ಪಿ೦ಕ್- ಬಿಳಿ ಚೂಡಿದಾರ, ಪಟ್ಟಿ ಮಾಡಿ ಇಸ್ತ್ರಿಮಾಡಿದ ಬಿಳಿ  ಶಾಲು ಧರಿಸಿ ಮೀರಾ ಕಾಲೇಜಿಗೆ ಹೋಗುವ ಹುಡುಗಿಯರ  ಸೈಕಲ್ ಸವಾರಿ. ಕಂಡು-ಬಿಳಿ  ಯುನಿಫಾರ್ಮ್ ಧರಿಸಿ ಶಾಲೆಗೆ ಹೋಗುವ ಮಕ್ಕಳು.  ಅವರನ್ನು ಕರೆದೊಯ್ಯುವ ಆಟೋಗಳು. ಮಕ್ಕಳನ್ನು ಶಾಲೆಗೆ ಬಿಡಲು  ಬರುವ ಅಮ್ಮಂದಿರು.   ನೋಡಲು ಮುದವೆನಿಸುತ್ತಿತ್ತು. ನಮ್ಮ ಒ೦ದು ವರ್ಷದ ಮಗಳು  ಒ೦ದು ಬೆತ್ತದ ಮುಡ್ಡಿಯಲ್ಲಿ ಕಿಟಿಕಿಯ ಬಳಿ ನಿಲ್ಲಿಸಿದರೆ ಗಂಟೆಗಟ್ಟಲೆ ಕಿಟಿಕಿಯಿಂದ ಹೊರಗೆ ನೋಡುತ್ತಾ  ತನ್ನ ತೊದಲು ಭಾಷೆಯಲ್ಲಿ ಕೆಳಗೆ ಹೋಗುವವರನ್ನು ಕೂಗಿ ಕರೆಯುತ್ತಿದ್ದಳು.   

ಆಗೆಲ್ಲ ಬಸ್ ಟ್ರಕ್ ಗಳ ಲ ಸಂಖ್ಯೆ ಬಹಳ ಕಡಿಮೆ ಇತ್ತು. ಆಗೊ೦ದು ಈಗೊ೦ದು ಬಸ್ ಟ್ರಕ್ ಗಳು ಅರಚುತ್ತಿದ್ದುವು. ಒ೦ದು ದಿನ ಎ೦ದಿನ೦ತೆ ಸ೦ಜೆ ಮಾರ್ಗ ವೀಕ್ಷಣೆ ಮಾಡುತ್ತಲಿದ್ದೆ. ನೋಡುತ್ತಿದ್ದಂತೆ  ಹೋ ಎ೦ದು ಗಲಾಟೆ ಕೇಳಿಸಿತು. ಒಬ್ಬ ಹುಡುಗ ಒಬ್ಬ ಹುಡುಗಿ ತಮ್ಮ ಲೂನ ದಿ೦ದ ಮಾರ್ಗಕ್ಕೆ ಎಸೆಯಲ್ಪ್ಪಟ್ಟಿದ್ದರು.  “ಸಾಡಿ  ಕಪಡಾ ಕಾಟ್ನಾ ಪಡೇಗಾ”  ಎಂದು ಹೇಳುವುದು ಕೇಳಿಸಿತು.  “ಕತ್ರಿ ಲಾವೋ”  ಎಂದು ಕೆಲವರು ಹೇಳುವುದು ಕೇಳಿಸಿತು. ನಾನು ಕತ್ತರಿ, ಒಂದು ಶಾಲು ಹಿಡಿದು ಕೆಳಗೆ ಓಡಿದೆ. ಅದೃಷ್ಟಕ್ಕೆಅವರಿಗೆ ಗಾಯಗಳಾಗಿರಲಿಲ್ಲ. ಆದರೆ  ಹುಡುಗಿಯ ಸೀರೆ ಸೆರಗು ಚಕ್ರಕ್ಕೆ ಸಿಕ್ಕಿ ಅಣ್ಣ- ತ೦ಗಿ ಹೆದರಿ ಕ೦ಗಾಲು. ಕೂಡಲೇ  ನನಗೆ ನನಗಾದ ಪರಿಸ್ಥಿತಿ  ನೆನಪಾಯಿತು. ಹುಡುಗಿಗೆ  ಶಾಲು ಹೊದೆಸಿ ಕೆಲವರು ಸೀರೆ ಕತ್ತರಿಸಿ ತೆಗೆದು ಉಪಚರಿಸಿದರು . ನಾನೂ ಅವರನ್ನು ನಮ್ಮ ಮನೆಗೆ ಕರೆತ೦ದು ಅವರನ್ನು ಸಮಾಧಾನಿಸಿ ನಿಂಬೆ ಪಾನಕ ಮಾಡಿ ಕೊಟ್ಟು ಅವಳಿಗೆ ಉಡಲು  ನನ್ನ ಸೀರೆಯೊ೦ದನ್ನು ಕೊಟ್ಟಾಗ ಮನಸ್ಸಿಗೆ ತು೦ಬಾ ಹಗುರಾಯಿತು. ಹಿಂದೊಮ್ಮೆ ನನಗಿದೆ  ಪರಿಸ್ಥಿತಿ ಬ೦ದಾಗ ದೇವರಂತೆ  ಬ೦ದು ಸಹಕರಿಸಿದ ನಮ್ಮ ಆತ್ಮೀಯರನ್ನು ಅವರೆದುರು ನೆನೆದೆ. ಅವರೂ ನಮಗೆ ತು೦ಬಾ ಧನ್ಯವಾದಗಳನ್ನು ಹೇಳಿ ಹೊರಟುಹೋದರು .  ಆಗ ಈಗಿನಂತೆ ಟೆಲಿಫೋನ್ , ಮೊಬೈಲ್ , ಕಂಪ್ಯೂಟರ್  ಇರಲಿಲ್ಲ.ಇದ್ದಿದ್ದರೆ ಇಂದಿಗೂ ಅವರೊಡನೆ ಸಂಪರ್ಕ ಇರುತ್ತಿತ್ತೋ ಏನೊ. 

ಇತ್ತೀಚೆಗೆ ಪುತ್ತೂರಿನಲ್ಲಿ ಎಳೆಯ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳು ಬೈಕ್ ನಲ್ಲಿ ಹೋಗುತ್ತಿರುವಾಗ ತನ್ನ ಚೂಡಿದಾರಿನ ಶಾಲು ಚಕ್ರಕ್ಕೆ ಸಿಕ್ಕಿ ಮೃತಪಟ್ಟಳು. ಈ ಸಂದರ್ಭದಲ್ಲಿ ನನ್ನ ಅನುಭವಗಳು ನೆನಪಾದುವು. ಹಾಗಾಗಿ, ನಾನು ಹೇಳಬಯಸುವುದೇನೆಂದರೆ  ದಯವಿಟ್ಟು ದ್ವಿಚಕ್ರ ವಾಹನಗಳಲ್ಲಿ  ಹೋಗುವವರು  ಸೀರೆ ಸೆರಗು, ಚುದಿದಾರದ ಶಾಲು ಇವುಗಳ ಬಗ್ಗೆ ಎಚ್ಹರಿಕೆಯಿಂದ ಇದ್ದರೆ ಎಷ್ಟೋ ಅವಘಡಗಳನ್ನು ತಪ್ಪಿಸಬಹುದು.


ಸಾವಿತ್ರಿ ಎಸ್ ಟ್ 

5 Responses

  1. Savithri says:

    edu nanna prathama lechana.prakaticida tamage dhanyavaadagalu

  2. Shruthi Sharma says:

    Bahala chennagi nenapina maaleyannu akshara roopakkilisiddeeri. Manassu thattida lekhana.. odugarige sandeshavanu kottu arthapoorna barahavagisidudakke vandanegalu..

  3. Ramya says:

    Nice Article chikkamma…

  4. suragi says:

    ಪ್ರಥಮ ಲೇಖನವೇ ಇದು ಎಂಬಷ್ಟು ಚೆನ್ನಾಗಿ ಬರೆದಿದ್ದೀರೀ.. ಇನ್ನೂ ಬರೆದು ಕಳುಹಿಸಿ. ..

  5. Aparna says:

    ಒಹ್….ತುಂಬಾ ಚೆನ್ನಾಗಿ, ಅರ್ಥಪೂರ್ಣವಾಗಿ ಮೂಡಿಬಂದಿದೆ…ಬರವನಿಹೆ ಹೀಗೆ ಸಾಗಲಿ…ನಿಮ್ಮ ಅನುಭವ ಕಥನಕ್ಕೆ ಮತ್ತಷ್ಟು ಕಾಯುತ್ತ ಇದ್ದೇನೆ ಅತ್ತೆ…

Leave a Reply to Shruthi Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: