ಮಹಾತ್ಮಾ ಗಾಂಧೀ ಕೀ- ಜೈ!
ಈವತ್ತು ಗಾಂಧಿ ಜಯಂತಿ. ಈ ಮಹಾ ಚೇತನವನ್ನು ಸ್ಮರಿಸುತ್ತಾ, ಈ ಬರಹ.
ನಾನು 2006 ರಲ್ಲಿ ಅಹ್ಮದಾಬಾದ್ ಗೆ ಕಾರ್ಯ ನಿಮಿತ್ತ ಹೋಗಿದ್ದಾಗ ಅಲ್ಲಿಂದ 10 ಕಿ.ಮೀ ದೂರದಲ್ಲಿರುವ ಸಬರ್ಮತಿ ಆಶ್ರಮಕ್ಕೆ ಭೇಟಿ ಕೊಟ್ಟಿದ್ದೆ. ಗಾಂಧೀಜಿಯವರು 1917 – 1930 ರ ಅವಧಿಯಲ್ಲಿ ಇಲ್ಲಿ ವಾಸವಿದ್ದರು. ಸ್ವಾತಂತ್ಯ್ರ ಚಳುವಳಿಯ ಹಲವಾರು ಕಾರ್ಯರೂಪಗಳಿಗೆ ಈ ಆಶ್ರಮ ಸಾಕ್ಷಿಯಾಯಿತು. ಇತಿಹಾಸದಲ್ಲಿ ಪ್ರಸಿದ್ಧವಾದ ಉಪ್ಪಿನ ಸತ್ಯಾಗ್ರಹದ ದಂಡಿಯಾತ್ರೆಯು ಆರಂಭವಾದುದು ಈ ಆಶ್ರಮದಿಂದ, 12 ಮಾರ್ಚ್ 1930 ರಂದು.
ಸಬರ್ಮತಿ ನದಿ ದಂಡೆಯಲ್ಲಿರುವ ಈ ಆಶ್ರಮದಲ್ಲಿ, ಗಾಂಧೀಜಿಯವರು ಬಳಸುತ್ತಿದ್ದ ಹಲವಾರು ಪರಿಕರಗಳು, ಚರಕ, ಮೇಜು ಇತ್ಯಾದಿಗಳನ್ನು ಸಂರಕ್ಷಿಸಿಡಲಾಗಿದೆ. ಅವರು ಧ್ಯಾನ ಮಾಡುತ್ತಿದ್ದ ಸ್ಠಳದಲ್ಲಿ ಅವರ ಪ್ರತಿಮೆಯಿದೆ. ಇಲ್ಲಿ ಕೆಟ್ಟದ್ದನ್ನು ಆಡಬಾರದು, ನೋಡಬಾರದು, ಕೇಳಬಾರದು ಎಂಬ ಸಂದೇಶ ಸಾರುವ ಮೂರು ಮಂಗಗಳ ಮೂರ್ತಿಗಳಿವೆ.
ಗಾಂಧೀಜಿಯವರನ್ನು ನೋಡಲು ಸಾಧ್ಯವಿಲ್ಲದಿದ್ದರೂ ಅವರು ವಾಸಿಸಿದ ಆಶ್ರಮವನ್ನಾದರೂ ನೋಡುವ ಅವಕಾಶ ಲಭಿಸಿದುದೇ ನನ್ನ ಅದೃಷ್ಟ.
– ಹೇಮಮಾಲಾ.ಬಿ
ವಿವರವಾಗಿ ಸಬರಮತಿ ಆಶ್ರಮ ತೋರಿಸಿದ ನಿಮಗೆ ಧನ್ಯವಾದಗಳು ..
ವಂಡರ್ಫುಲ್ ಪರ್ಫಾರ್ಮೆನ್ಸ್ ಅಂಡ್ ಥಿಂಕೇಬ್ಲೆ ವೆಬ್ಸೈಟ್. ಕಂಗ್ರಾಟ್ಸ್.