ಸುರಕ್ಷತೆಯ ಬಗ್ಗೆ ಜಾಗರೂಕತೆ

Share Button

ಸುರಕ್ಷತೆ ಎಂಬುದು ನಮ್ಮೆಲ್ಲರ  ಹೊಣೆ. ನಮ್ಮ, ನಮ್ಮ ಮನೆಯ,ನಮ್ಮ ಅಕ್ಕಪಕ್ಕದ,ನಮ್ಮ ರಾಷ್ಟ್ರದ ಸುರಕ್ಷತೆಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಸುರಕ್ಷತೆ ಎಂಬುದು ಬರೀ ಹೇಳುವುದರಿಂದ ನಮ್ಮ ಜೀವನದಲ್ಲಿ ಬರುವುದಿಲ್ಲ. ನಾವು ನಮ್ಮ ದಿನ ನಿತ್ಯ ದ ಜೀವನದಲ್ಲಿ ಮಾಡುವ ಕೆಲಸ ಕಾರ್ಯಗಳನ್ನು ತುಂಬಾ ಸುರಕ್ಷತೆಯಿಂದ ಮಾಡಬೇಕು. ನಾವು ದಿನ ನಿತ್ಯ ನೋಡಬಹುದು ಹೆಲ್ಮೆಟ್ ಧರಿಸದೆ ವಾಹನ ಚಲಿಸುವವರು ಬೇರೆ ವಾಹನಕ್ಕೆ ಡಿಕ್ಕಿ ಹೊಡೆದಾಗ ತಲೆಗೆ ಪೆಟ್ಟು ಬಿದ್ದು ಪ್ರಾಣ ಹೋಗುವ ಸಂಭವವು ಇರುವಂಥಹದ್ದು. ಮತ್ತೆ ಸರಿಯಾಗಿ ಟ್ರಾಫಿಕ್ ರೂಲ್ಸ್ ಫಾಲೋ ಮಾಡದೇ ಬೇರೆ ವಾಹನಕ್ಕೆ ಡಿಕ್ಕಿ ಹೊಡೆಯುವಥಹುದು. ಕಾರ್ಖಾನೆಯಲ್ಲಿ ಕೆಲಸ ಮಾಡುವವರು ಕೊಟ್ಟಿರುವಂಥಹ ಚೆಕ್ ಲಿಸ್ಟನ್ನು (check List) ಸರಿಯಾಗಿ ಓದದೆ ಅಥವಾ ಅದನ್ನು ತಿರಸ್ಕರಿಸಿ ಇವರಿಗೆ ಬೇಕಾದ ಹಾಗೆ ಕೆಲಸ ಮಾಡುವುದು.ನಂತರ ತಮಗೆ ಮಾತು ಕಾರ್ಖಾನೆಗೆ ಹಾನಿಯನ್ನುಂಟು ಮಾಡುವುದು. ಈ ತರಹ ನೂರಾರು ಸನ್ನಿವೇಶಗಳು ನಾವು ನಮ್ಮ  ದಿನನಿತ್ಯದ  ಜೀವನದಲ್ಲಿ ಗಮನಿಸಬಹುದು.ಆದ್ದರಿಂದ ಸುರಕ್ಷತೆ (Safety) ಎನ್ನುವುದು ನಮ್ಮ ನಮ್ಮ ಜೀವನದಲ್ಲಿ ತುಂಬಾ ಮುಖ್ಯವಾದುದು.

ದೇಶದ ಸುರಕ್ಷತೆಗಾಗಿ ಗಮನ ಕೊಡಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ.ದೇಶ ಸುರಕ್ಷಿತವಾಗಿದ್ದರೆ ಎಲ್ಲ ಆಗುಹೋಗುಗಳು ವ್ಯವಸ್ಥಿತವಾಗಿ ನಡೆಯುತ್ಹವೇ. ಏಕೆಂದರೆ ಮಾನವನ ವ್ಯವಹಾರಗಳು ನೆಮ್ಮದಿಯನ್ನು ಅವಲಂಬಿಸಿಕೊಂಡಿವೆ. ಹೊರಗೊಂದಲ ಒಳಗೊಂದಲಕ್ಕೆ ದಾರಿ ಮಾಡಿ ಕೊಡುತ್ತದೆ..ವ್ಯಕ್ತಿ ಹಾಗು ದೇಶಗಲೆರಡು ಬೆಳೆಯುವುದು ಜೀವನದ ಗುರಿ.ಇದು ಸಾಧ್ಯವಾಗಬೇಕಾದರೆ ಒಳ ಹೊರ ನೆಮ್ಮದಿ,ಶಾಂತಿ ಗಳು ಬೇಕು.ಏಕೆಂದರೆ ಒಳ ಹೊರಗಲೆರಡು ಒಂದಕ್ಕೊಂದು ಪೂರಕವಾಗಿದೆ.

ಗೌತಮ ಬುದ್ಧ ಕ್ರಿ.ಶ. 2500 ವರುಷಗಳ ಹಿಂದೆ ವಾಸವಾಗಿದ್ದು ಅವನು ತಿಳಿಸಿರುವಂತೆ  evil doers who denounce the wise.resemble a persons who spits against the sky. But the spittle will never reach the sky, but comes down on himself. ಆಕಾಶಕ್ಕೆ ಮುಖವೆತ್ತಿ ಉಗಿದಾಗ ಆ ಉಗುಳು ಬೀಳುವುದು ನಮ್ಮ ಮುಖದ ಮೇಲೆ ಮಾತ್ರ.ಈ ಪ್ರಜ್ಞೆ ಪ್ರತಿಯೊಬ್ಬರಿಗೂ ಇರಬೇಕು ಇಂಥಹ ಅವಿವೇಕ ನಮ್ಮ ಬಾಳಿನ ಶಾಂತಿ, ನೆಮ್ಮದಿಗಳನ್ನು ಹಾಳು ಮಾಡುತದೆ. ಇದರ ಅರ್ಥ ಜೀವನದಲ್ಲಿ ತಪ್ಪು ಆಗಲೇ ಬಾರದು ಎಂದು ಅರ್ಥವಲ್ಲ. ಏಕೆಂದರೆ To err is human not to err is divine.

        

Hebrew ಪ್ರವಾದಿ ತಿಳಿಸಿರುವಂತೆ where there is no vision people will perish ಎಂಬ ಮಾತು ನಮಗೆ ದಾರಿದೀಪವಾಗಬೇಕು. ಈವತ್ತಿನ ಈ ಘಳಿಗೆಯ ಜೀವನಕ್ಕೆ ಮನಸೋತು ನಾಳೆಯದನ್ನು ಮರೆತವನು ಬಹಳ ಬೇಗ ಇಂದಿನ ಕ್ಷಣಿಕ ಸುಖವನ್ನು ಕಳೆದು ಕೊಳ್ಳುತ್ತಾನೆ. ಪ್ರಾಣಿ,ಪಕ್ಷಿ,ಗಾಳಿ,ಮಳೆಗಳಿಗೆ ರಾಷ್ಟ್ರದ ಕಲ್ಪನೆ ಇಲ್ಲ. ಧ್ರುವ ಪ್ರದೇಶದ ನೈಜೀರಿಯಾ ದಿಂದ ಸುರಕ್ಷತೆ ಇಂದ 25000 ಮೈಲಿಗಳ ದೂರದಿಂದ ಪಕ್ಷಿಗಳು ಶ್ರೀರಂಗಪಟ್ಟಣದ ರಂಗನತಿಟ್ಟಿಗೆ ಬಂದು ತಿಂಗಳು ಗಟ್ಟಲೆ ತಂಗಿದ್ದು ಮೊಟ್ಟೆ ಇಡುತ್ತವೆ, ಮರಿ ಮಾಡುತ್ತವೆ,  ಬೇಕಾದಾಗ ತಮ್ಮ ನೆಲೆಗೆ ಹಿಂದಿರುಗುತ್ತವೆ. ಜಗತ್ತಿನಲ್ಲಿ  ಶಾಲಾ ಕಾಲೇಜು ವಿದ್ಯಾನಿಲಯಗಳು ಹೆಚ್ಚುತ್ತಿವೆ.  ಮಾನವನ ಪ್ರಜ್ಞೆಯೂ ಅದೇ ರೀತಿ ವಿಕಾಸಗೊಳ್ಳಬೇಕು.  ಆಳವಿಲ್ಲದ ಹತ್ತಾರು ಬಾವಿಗಳು ನೀರು ಒದಗಿಸಲಾರವು. ಒಂದು ಆಳವಾದ ಬಾವಿ ನಮ್ಮ ಹೊಲವನ್ನು ಕೆರೆಯಾಗಿ ಪರಿವರ್ತಿಸಬಲ್ಲದು. ನಮಲ್ಲಿ site ಇದೆ, insight ಬೆಳೆಸಿಕೊಳ್ಳುವ ಇಂದಿನ ಅವಶ್ಯಕತೆ.

ಆದ್ದರಿಂದ ಈ ಕ್ಷಣವೇ ನಾವು ಸುರಕ್ಷತೆಯನ್ನು ನಮ್ಮ ಜೀವನದಲಿ ಅಳವಡಿಸಿಕೊಳ್ಳೋಣ ಮತ್ತೆ ಬೇರೆಯವರಿಗೆ ಸುರಕ್ಷತೆಯ ಬಗ್ಗೆ ಜಾಗರೂಕತೆಯನ್ನು ಮೂಡಿಸೋಣ.

ಸುರಕ್ಷತೆಯಿಂದ ಇದ್ದೆವು, ಸುರಕ್ಷತೆಯಿಂದ ಇದ್ದೇವೆ, ಸುರಕ್ಷತೆಯಿಂದ ಇರುತ್ತೇವೆ.

– ಅಬ್ದುಲ್ ರಹೀಮ್, ಮೈಸೂರು

4 Responses

  1. Niharika says:

    Very much true..nice article.

  2. savithrisbhat says:

    ಉತ್ತಮಲೇಕನ

  3. Ghouse says:

    Very good article raheem. Nice to see you writing about safety.

  4. Anonymous says:

    Super bro

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: