ಮೌಂಟ್ ಎವರೆಸ್ಟ್ ಏರಿದ ಅರುಣಿಮಾ ಸಿನ್ಹಾ
ಮೌಂಟ್ ಎವರೆಸ್ಟ್ ಏರಿದ ಅರುಣಿಮಾ ಸಿನ್ಹಾ. ರಾಷ್ಟ್ರೀಯಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿದ್ದ ಇವರು 2011 ರಲ್ಲಿ ರೈಲು ಪ್ರಯಾಣ ಮಾಡುತ್ತಿದ್ದಾಗ ಕಳ್ಳರ ಆಕ್ರಮಣವಾಗಿದ್ದಾಗ ಅವರನ್ನು ಪ್ರತಿಭಟಿಸಿ ಪ್ರಶ್ನಿಸಿದ ಕಾರಣದಿಂದ ಕಳ್ಳರು ಅರುಣಿಮಾರನ್ನು ಚಲಿಸುವ ರೈಲಿನಿಂದ ಹೊರಗೆ ತಳ್ಳಿದ್ದರು. ಪಕ್ಕದ ಹಳಿಯಲ್ಲಿ ಬಿದ್ದಾಗ ಅವರ ಕಾಲಿನ ಮೇಲೆ ಇನ್ನೊಂದು ರೈಲು ಚಲಿಸಿದಾಗ ಒಂದು ಕಾಲು ಕಳೆದುಕೊಳ್ಳಬೇಕಾಯಿತು.ಹಿಮಾಲಯ ಏರಿದ ಮೊದಲ ಮಹಿಳೆ ಬಚೇಂದ್ರಿಪಾಲ್ ರನ್ನು ಭೇಟಿಯಾಗಿ ಪ್ರಾರಂಭದ ಮಾಹಿತಿ ಪಡೆದರು. ಅವರು ಅರುಣಿಮಾರನ್ನು ಹುರಿದುಂಬಿಸಿದರು.
2013 ಏಪ್ರಿಲ್ 1 ನೇ ತಾರೀಕು ಹಿಮಾಲಯ ಪರ್ವತ ಏರಲು ಪ್ರಾರಂಭಿಸಿದ ಅರುಣಿಮಾ ಮೇ ೨೧ನೇ ತಾರೀಕು ಹಿಮಾಲಯದ ಶಿಖರ ತಲಪಿದರು. . ಈ ಸಾಧನೆ ಮಾಡಿದ ಮೊದಲ ವಿಕಲ ಚೇತನ (ಕೃತಕ ಕಾಲಿನಲ್ಲಿ) ಮಹಿಳೆ ಎಂಬ ಕೀರ್ತಿ ಅವರದಾಯಿತು. ಕೃತಕ ಕಾಲು ಬಳಸಿ ಹಿಮಾಲಯ ಏರಿದ ಧೀರೆ.
ಯುವ ಬ್ರಿಗೇಡ್ ಮೈಸೂರು, ಹಾಗೂ ಜೆ.ಎಸ್.ಎಸ್. ಮಹಿಳಾ ಕಾಲೇಜು ಸರಸ್ವತೀಪುರ ಜಂಟಿಯಾಗಿ ಅರುಣಿಮಾ ಸಿನ್ಹಾ ಅವರನ್ನು 26-09-2014ರಂದು ಸರಸ್ವತೀಪುರದ ಕಾಲೇಜಿನಲ್ಲಿ ಅಭಿನಂದಿಸಿದರು.
ಮೌಂಟ್ ಎವರೆಸ್ಟ್ ಏರಲು ಆಗುತ್ತೊ ಇಲ್ಲವೊ ಏರಿದ ಮಹಿಳೆಯನ್ನು ಕಣ್ಣಾರೆ ಕಂಡು ಅವರ ಭಾಷಣ ಕೇಳಿದ ಸಂತೃಪ್ತಿ ಇವತ್ತು ನನಗೆ ಲಭಿಸಿತು. ಅರುಣಿಮ ಅವರು ಹಿಂದಿಯಲ್ಲಿ ಅವರ ಅನುಭವವನ್ನು ನಿರರ್ಗಳವಾಗಿ ಹಂಚಿಕೊಂಡರು.
— ರುಕ್ಮಿಣಿ ಮಾಲಾ.