ಎಳೆಗೊರಳ ಕನಸು
ಕಾವಿಗೊಡೆದ ಮೊಟ್ಟೆಗೆ
ಕಾಲು ಝಾಡಿಸಿದ ಮರಿಹಕ್ಕಿ
ಪೊರೆದೊಡಲಿನ ಬಂಧವೇ ಮುಕ್ತ
ಹಳದಿ ಕಣ್ಣೀರ ತುಳಿದು ಸಾಗಿದೆ
ಮೃದು ನೀಳ ಕೈಯ ಬೇಚ್ಚನಾಸರೆಗೆ..
ತಾಯ ರೆಕ್ಕೆಯ ಚಪ್ಪರದಲಿ
ಕಿಚಿಗೊಡುವ ನೂರೆಂಟು ಮೊಗ್ಗು
ಪ್ರೀತಿ ಮುತ್ತಿಕ್ಕಿದೆ
ಕಾಳಿಕ್ಕುವ ನೆಪದಲ್ಲಿ
ತೊಟ್ಟನ್ನೇ ಧಿಕ್ಕರಿಸಿ
ಅಂಗೈಯ ಸೇರಿದೆ
ಬಲಿಯದ ಜುಟ್ಟಕ್ಕೆ
ಹೂಪೇಟ ಬಯಸಿ..
–ಸಂದೇಶ್ ಹೆಗಡೆ