Author: Sandesh Hegde,sandeshsl1994@gmail.com
ನೆತ್ತಿಯ ಬಿಳಿಯನ ಕಡುನೋಟಕೆ ನೆತ್ತರಿನ ಬೆವರೇ ಮೈತಂಪಿಟ್ಟಿದೆ ಹೊತ್ತ ಜಂಬಿಟ್ಟಿಗೆಯ ತಲೆ ಭೂ ಸುತ್ತಿದೆ ನಡುಗಿ ನಲುಗಿದೆ ಬಡಗಾಲ ನಡಿಗೆ. ಈ ಗುಡುಗಲೂ ಜಗವರಿಯದ ಕೂಸು ಜಲ್ಲಿ ಸೋಪಾನದಿ ನಿಶ್ಚಿಂತ ನಿದ್ದೆ..! ಬಿಸಿಲ ಹೊದ್ದಿಹ ತೇಪೆಯಲಿ ಬೆಚ್ಚನೆ ನೊಸಲರಳಿಸಿ ಸವಾಲು ‘ಕೆಂಪಂಗೆ..!’ ರಾವುಗಣ್ಗಳಿಗೆ ಕಾವಿಡುವ ರೆಪ್ಪೆಗಳು ಉಸುಕ...
ಕಾವಿಗೊಡೆದ ಮೊಟ್ಟೆಗೆ ಕಾಲು ಝಾಡಿಸಿದ ಮರಿಹಕ್ಕಿ ಪೊರೆದೊಡಲಿನ ಬಂಧವೇ ಮುಕ್ತ ಹಳದಿ ಕಣ್ಣೀರ ತುಳಿದು ಸಾಗಿದೆ ಮೃದು ನೀಳ ಕೈಯ ಬೇಚ್ಚನಾಸರೆಗೆ.. ತಾಯ ರೆಕ್ಕೆಯ ಚಪ್ಪರದಲಿ ಕಿಚಿಗೊಡುವ ನೂರೆಂಟು ಮೊಗ್ಗು ಪ್ರೀತಿ ಮುತ್ತಿಕ್ಕಿದೆ ಕಾಳಿಕ್ಕುವ ನೆಪದಲ್ಲಿ ತೊಟ್ಟನ್ನೇ ಧಿಕ್ಕರಿಸಿ ಅಂಗೈಯ ಸೇರಿದೆ ಬಲಿಯದ ಜುಟ್ಟಕ್ಕೆ ಹೂಪೇಟ ಬಯಸಿ.....
ನಿಮ್ಮ ಅನಿಸಿಕೆಗಳು…