ಅಳಲು-ಮರುಳು
ಕೆಂಬಣ್ಣ ಹಿನ್ನಲೆ
ಕಪ್ಪು, ಬಿಳುಪು, ಕಂದು
ಮಾಟಗಾತಿಯರು ಸುತ್ತ
ನಶೆಯ ಭಾರದಿ ಬೋರಲು
ಬಿದ್ದಿರುವೆ.
ನೋವು, ಜಂಜಾಟ,
ಸಂಗಾತಿಯ ವೈಮನಸು,
ಹೊರೆ ಸಾಲದಲಿ
ಕೊಚ್ಚಿ ಹೋಗಿರುವೆ.
ಮರುಳು ಸಮಾಜದ
ಕಣ್ಣಿಗೆ ಕಟುಕ,
ಕುಡುಕ, ಸುಳ್ಳನಾಗಿ
ಎಷ್ಟೋ ದೃಷ್ಟಿಗೆ ಎಷ್ಟೆಷ್ಟಾಗಿರುವೆ!.
ಮಾಟದ ಬಂಧಿಯ
ಬಿಡಿ-ಬಿಡಿ ಮಾಡಲು;
ಮೂಟೆಗೆ ಗಂಟಿಕ್ಕಿ
ಊರು ಬಿಟ್ಟಿರುವೆ.
-ಅಕ್ಷಯ ಕಾಂತಬೈಲು