ಬೆಳಕು-ಬಳ್ಳಿ

ಧೂಳಾಗುವ ಮುನ್ನ ………!?

Share Button

ಬಿಂಬ ಮಬ್ಬಾಯಿತೆಂದು ಪ್ರತಿ – ಬಿಂಬವ
ತಿದ್ದುವ ಸಾಹಸವೇಕೆ ನಿನಗೆ?

ಕನ್ನಡಿ ಒರೆಸುತಲೇ ಇದ್ದ ಮಾತ್ರಕೇ ನೀನು
ಸುಂದರವಾಗಿ ಕಾಣಲಾರೆ ; ಸತ್ಯವ ಅರಿಯಲಾರೆ !
ಎಷ್ಟಂತ ಶುಚಿಗೊಳಿಸುವ ಕ್ರಿಯೆಯಲಿ ತೊಡಗಿಕೊಳ್ಳುವೆ?

ಹೊರಗಿನ ಯಾನವ ಬಿಟ್ಟು ಒಳಗಿನ ಪ್ರ-ಯಾನಕೆ ಗಮನವಿಡು
ನೀ ಧೂಳಾಗುವ ಮುನ್ನ ಮಾಡಬೇಕಾದುದರತ್ತ ಮನಸಿಡು ;
ಇನ್ನು ಹೆಚ್ಚೇನೂ ಸಮಯವಿಲ್ಲ; ಬಂದ ದಾರಿಯತ್ತ ಹೋಗಲೇಬೇಕಲ್ಲ!

ನದಿನದ ಕಾಯುತ್ತಿವೆ, ಏರೆತ್ತರದ ಪರ್ವತಗಳು ಅಣಕಿಸುತ್ತಿವೆ
ಕೇಳುವ ಸಂಗೀತ, ಓದುವ ಪುಸ್ತಕ, ಅನಿಸಿದ್ದು ಬರೆವ ಸಾಹಸ
ಇನ್ನೂ ಆಳಕಿಳಿವ ಇನ್ನೂ ಅಗಲಕೆ ಹರಡಿಕೊಳ್ವ ಗಹನತೆಯೂ
ಇನ್ನೂ ಇನ್ನೂ ಮೇಲಕೆ ಜಿಗಿದು ಅಗಿದು ಅರ್ಥೈಸುವ ಗಾರುಡಿಯೂ
ಎಲ್ಲವೂ ಜೊತೆಗೆ ಜೀವಕೆ ಜೀವವಿಡುವ ಓದುಗ ನೇಹಿಗರೆಲ್ಲರೂ

ನಿನ್ನಷ್ಟೇ ಅತ್ಯುತ್ತಮವಾದುದೇನೋ
ಬರಲಿದೆಯೆಂದು ಕಾತರಿಸುತಿಹರು!

ಇವೆಲ್ಲಕಿಂತ ಜರೂರತ್ತಿನ ಗುಟ್ಟೇನು ಗೊತ್ತೇನಣ್ಣ :
ಮಣ್ಣಲಿ ಮಣ್ಣಾಗುವ ಮುನ್ನ ; ಮನಃಪೂರ್ವಕ ಬದುಕಿದರೆ ಚೆನ್ನ.

(Rose Milligan ಎಂಬ ಕವಯಿತ್ರಿಯ Dust If You Must ಕವಿತೆಯ ಪ್ರೇರಣೆ)
ಕನ್ನಡ ಭಾವಾನುವಾದ :
ಹೆಚ್ ಎನ್ ಮಂಜುರಾಜ್, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *