ಬೆಳಕು-ಬಳ್ಳಿ

ನಾವು ನಾವಾಗಿದ್ದರಷ್ಟೇ..

Share Button

ನಾವು ನಾವಾಗುವುದನ್ನು ಬಿಟ್ಟು
ಯಾರ್ಯಾರೋ ಆಗುತ್ತೇವೆ
ನಾವು ನಾವಾಗಿಯೇ ಇರುವುದ ಬಿಟ್ಟು
ಬೇರೆ ಏನೇನೋ ಆಗುತ್ತೇವೆ

ಯಾರೋ ನಮ್ಮನ್ನು ದ್ವೇಷಿಸುತ್ತಾರೆಂದು
ನಾವು ಪ್ರೀತಿಸುವುದನ್ನ ಮರೆಯುತ್ತೇವೆ
ನಗುನಗುತಾ ಇರುವುದನ್ನು ಬಿಟ್ಟು
ಸಿಟ್ಟು ಆಕ್ರೋಶಕ್ಕೆ ಬಲಿಯಾಗುತ್ತೇವೆ

ಯಾರದೋ ಮೇಲಿನ ಕೋಪಕ್ಕೆ
ಇನ್ಯಾರದೋ ಮೇಲೆ ಸಿಟ್ಟಾಗುತ್ತೇವೆ
ವಿವೇಚನಾ ಶೂನ್ಯರಾಗಿ ವರ್ತಿಸುತ್ತ
ತಾಳ್ಮೆ ಸಹನೆಯನ್ನ ಕಳೆದುಕೊಳ್ಳುತ್ತೇವೆ

ಪ್ರೀತಿ ಆತ್ಮೀಯರ ಜೊತೆಗೂ ವಿನಾಕಾರಣ
ಕೋಪ ತಾಪ ಮುನಿಸು ತೋರಿಸುತ್ತೇವೆ
ಗೌಜು ಗದ್ದಲ ಮಾಡುತ್ತ ಮನದ ತುಂಬ
ಅಶಾಂತಿ ಅಸಹನೆ ತುಂಬಿಕೊಳ್ಳುತ್ತೇವೆ

ನಾವು ನಾವಾಗಿದ್ದರಷ್ಟೇ ಶಾಂತಿ ನೆಮ್ಮದಿ
ನಾವಲ್ಲದ ನಮ್ಮೊಳಗೆ ಒಣ ಕಿರಿಕಿರಿ ಪಿರಿಪಿರಿ
ತೋರಿಕೆಯ ಹೇರಿಕೆ ಭಾರ ಆಗುವುದು
ಏನೇನೋ ಸಮಸ್ಯೆಗಳ ಸೃಷ್ಟಿಸುವುದು

ಇದ್ದಂತೆ ಇದ್ದರೆ ಬದುಕುವುದು ಸುಲಭ
ನಟನೆಯ ಜೀವನ ನೀಡದು ಸುಖ
ಬೇಡದ ಭಾರ ಹೊತ್ತ ಕತ್ತೆಯಂತಾದರೆ
ನೈಜ ನಗುವಿರದೆ ಅರಳದು ಮುಖ

ನಾಗರಾಜ್ ಜಿ.ಎನ್.ಬಾಡ, ಕುಮಟ

5 Comments on “ನಾವು ನಾವಾಗಿದ್ದರಷ್ಟೇ..”

  1. ಎಂದಿನಂತೆ ಸರಳ ಸಂದೇಶ ಹೊತ್ತ ಸುಂದರಕವನ

  2. ಸುಂದರವಾದ ಕವನ. ಕೊನೆಯ ಸಾಲುಗಳು ಬಹಳ ಸತ್ಯ.

  3. ಬದುಕಿನ ದಾರಿಗೆ ಬೆಳಕ ನೀಡುವ ಕವಿತೆ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *