ಬೆಳಕು-ಬಳ್ಳಿ

ಕಾಣಿಕೆ

Share Button

ಪ್ರತಿಯೊಬ್ಬರೂ ಹೊಂದಿರಬೇಕು ಗಳಿಕೆ
ಅದರಲ್ಲಿಯೇ ಮಾಡಬೇಕು ಒಂದಿಷ್ಟು ಉಳಿಕೆ
ಚೆನ್ನಾಗಿ ಕಲಿತುಕೊಳ್ಳಬೇಕು ಆರ್ಥಿಕ ಹೂಡಿಕೆ
ಅದುವೇ ಮುಂದಿನ ಜೀವನಕ್ಕಾಗುವುದು ಕಾಣಿಕೆ

ಬದುಕಿನಲ್ಲಿರಬೇಕು ನಿತ್ಯ ನಿರಂತರ ಕಲಿಕೆ
ದಾರಿ ತೋರುವುದದು ನೆಮ್ಮದಿಯ ಜೀವನಕೆ
ಹತೋಟಿಯಲ್ಲಿಟ್ಟುಕೊಳ್ಳಬೇಕು ನಮ್ಮ ಬಯಕೆ
ಕಡಿವಾಣ ಹಾಕಲೇಬೇಕು ದುಂದು ವೆಚ್ಚಕ್ಕೆ

ಹಾಕುತ್ತಿರಬೇಕು ನಾವಿಲ್ಲಿ ಎಚ್ಚರಿಕೆಯ ನಡಿಗೆ
ಹೊಂದಿರಬೇಕು ನಾವಿಲ್ಲಿ ಗಟ್ಟಿ ಗುಂಡಿಗೆ
ಎದುರಿಸಲು ಸಿದ್ಧವಾಗಿರಬೇಕು ಕಠಿಣ ಪರಿಸ್ಥಿತಿಗೆ
ಕಷ್ಟಗಳು ಎದುರಾಗುತ್ತಲೇ ಇರುವುದು ಅಡಿಗಡಿಗೆ

ಕೈಯಲ್ಲಿ ಕಾಸು ಓಡಾಡುವಾಗ ಎಲ್ಲಾ ಸುಲಭ
ಒಮ್ಮೆ ಸಮಸ್ಯೆ ಎದುರಾದಾಗ ಎಲ್ಲಾ ದುರ್ಲಭ
ಇದ್ದಾಗ ಬೇಕಿಲ್ಲ ಅತಿಯಾದ ಕಾರು _ಬಾರು
ಕಷ್ಟ ಬಂದಾಗ ಯಾರಿಗೆ ಹೇಳಲಾಗದು ದೂರು
ಬರುವುದು ಒಂದರ ಹಿಂದೆ ಒಂದರಂತೆ ನೂರಾರು

ನಾಗರಾಜ ಜಿ.ಎನ್. ಬಾಡ,ಕುಮಟ

5 Comments on “ಕಾಣಿಕೆ

  1. ಸುಖದ ಬಾಳಿಗೆ ಸರಳವಾದ ಸಲಹೆ ಸೂಚನೆಗಳನ್ನೀವ ಸುಂದರ ಕವಿತೆ

  2. ಬದುಕಿನ ವಾಸ್ತವಿಕತೆಯನ್ನು ತೆರೆದು ತೋರಿಸುವ ಭಾವಪೂರ್ಣ ಕವನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *